ಜಗತ್ತಿನಲ್ಲಿ ಸಾಹಿತ್ಯವನ್ನು ಸಂರಕ್ಷಿಸಿದವರು ಶರಣರು: ಡಾ.ಅವಿನಾಶ ಕವಿ
Those who preserved literature in the world are Sharanas: Dr. Avinash Kavi
ಬೆಳಗಾವಿ ಮಹಾಸಭೆಯಲ್ಲಿ ಅಮವಾಸ್ಯೆ ಅನುಭಾವ ಗೋಷ್ಠಿ
ಬೆಳಗಾವಿ 26: ಸಮ ಸಮಾಜಕ್ಕಾಗಿ ಹೋರಾಡಿದ ಹನ್ನೆರಡನೆಯ ಶತಮಾನದ ಶರಣರು ವಚನ ಸಾಹಿತ್ಯದ ಮೂಲಕ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸಿದರು. ಅವರ ವಚನಗಳು ಜೀವನದ ಶೋಧನೆಗಳಾಗಿದ್ದವು. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ವಚನಗಳ ಉಳಿವು ಅಗತ್ಯವಾಗಿತ್ತು. ಬಿಜ್ಜಳನ ಸೈನ್ಯದಿಂದ ವಚನ ಸಾಹಿತ್ಯವನ್ನು ಕಾಪಾಡಿದ ಶರಣರು ಜಗತ್ತಿನ ಸಾಹಿತ್ಯವನ್ನು ಸಂರಕ್ಷಿಸಿದ ್ರ್ರಥಮಿಗರು ಎಂದು ಬೆಳಗಾವಿ ಜೆಎನ್‌ಎಂಸಿ ಕಾಲೇಜಿನ ಕಮ್ಯುನಿಟಿ ಮೆಡಿಶನ್ ಸಹ ಪ್ರಾಧ್ಯಾಪಕ ಡಾ.ಅವಿನಾಶ ಕವಿ ಹೇಳಿದರು.
ಅವರು ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ಆಯೋಜಿಸಿದ್ದ ಅಮವಾಸ್ಯೆ ಅನುಭಾವ ಗೋಷ್ಠಿಯಲ್ಲಿ ‘ಕಲ್ಯಾಣ ಕ್ರಾಂತಿ’ ವಿಷಯದ ಮೇಲೆ ಉಪನ್ಯಾಸ ನೀಡಿದರು. ಶರಣರು ರಚಿಸಿದ ವಚನಗಳು ಸಮಾಜದ ಪರಿವರ್ತನೆಗೆ ದಿವ್ಯಶಕ್ತಿಗಳಾಗಿದ್ದವು. ಅವುಗಳ ಸಂರಕ್ಷಣೆ ಅಗತ್ಯವಾಗಿತ್ತು. ಮೊದಲ ಅಂತರಜಾತಿ ವಿವಾಹವು ಬಸವಣ್ಣನವರ ಸಮ್ಮುಖದಲ್ಲಿ ಜರುಗಿದಾಗ ಕಲ್ಯಾಣದಲ್ಲಿ ದೊಡ್ಡ ಕೋಲಾಹಲವೇ ಆಗುತ್ತದೆ. ಹರಳಯ್ಯ ಮಧುವರಸರು ಘೋರವಾದ ಶಿಕ್ಷೆಗೆ ಒಳಗಾಗುತ್ತಾರೆ. ಬಸವಣ್ಣನವರು ಹಾಗೂ ಶರಣರು ಮುಂದೆ ಕಲ್ಯಾಣದಿಂದ ಚೆಲ್ಲುವರೆದು ಹೋಗುವ ಅನಿವಾರ‌್ಯತೆ ಬರುತ್ತದೆ. ವಚನಗಳನ್ನು ಸಂರಕ್ಷಿಸುವುದು ಮುಂದಿನ ಜನಾಂಗಕ್ಕೆ ಅದನ್ನು ಮುಟ್ಟಿಸುವ ಬಹುದೊಡ್ಡ ಕಾರ್ಯವನ್ನು ಮಾಡುತ್ತಾರೆ. ಸಾಹಿತ್ಯದ ಸಂರಕ್ಷಣೆಗೆ ತಮ್ಮ ಬದುಕನ್ನೇ ಮುಡುಪಾಗಿಟ್ಟ ಜಗತ್ತಿನ ಮೊದಲ ಹೋರಾಟಗಾರರು ಶರಣರು. ಇಂದಿಗೂ ಮೇಲು ಕೀಳು ಎಂಬ ಭಾವಗಳು ನಮ್ಮಿಂದ ದೂರಸರಿಯದ ಕಾಲದಲ್ಲಿ ಅಂದು ಶರಣರು ಸಮಾಜದಲ್ಲಿ ವಿಚಾರಕ್ರಾಂತಿಯನ್ನೇ ಉಂಟುಮಾಡಿದ್ದರು. ಸ್ತ್ರೀ ಸಮಾನತೆಯ ಹರಿಕಾರರಾಗಿ ಅವರಿಗೆ ಸಮಾಜ ಧರ್ಮದಲ್ಲಿ ಮುಕ್ತವಾದ ಅವಕಾಶಗಳನ್ನು ಕಲ್ಪಿಸಿಕೊಟ್ಟರು. ಶರಣರು ಮಾನವ ಧರ್ಮದ ಸ್ಥಾಪಕರು. ಸಮಾಜದಲ್ಲಿ ಬೇರುಬಿಟ್ಟ ಅನೇಕ ಜಾಡ್ಯತೆಗಳನ್ನು ತೊಡೆದುಹಾಕಲು ಶ್ರಮಿಸಿದರು. ಅದೆಲ್ಲವನ್ನು ವಚನದಲ್ಲಿ ದಾಖಲಿಸುವ ಕೆಲಸ ಮಾಡಿದರು. ಇಂದಿನ ಯುವಜನಾಂಗ ಬಸವಾದಿ ಶರಣರ ವಿಚಾರಧಾರೆಗಳನ್ನು ಮನನ ಮಾಡಿಕೊಳ್ಳಬೇಕೆಂದು ಕರೆನೀಡಿದರು.
ಮಹಾಸಭೆ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಅವರು ಅಧ್ಯಕ್ಷೀಯ ನುಡಿಗಳನ್ನಾಡುತ್ತಾ, ಯುಗಯುಗಳು ಕಳೆದರೂ ಬಸವಾದಿ ಶರಣರ ಹೋರಾಟ ಜೀವನಕ್ಕೆ ದಿವ್ಯ ಸಂದೇಶವನ್ನು ನೀಡುತ್ತದೆ. ಇಂದಿಗೂ ನಮ್ಮಲ್ಲಿ ಸಾಧ್ಯವಾಗದ ಸಮಸಮಾಜವನ್ನು ಅಂದು ಜಾರಿಗೆ ತರಲು ತಮ್ಮ ಬದುಕನ್ನೇ ಮುಡುಪಾಗಿಟ್ಟರು. ಶರಣರ ವಚನಗಳು ಅದಕ್ಕೊಂದು ಜ್ವಲಂತ ಉದಾಹರಣೆಗಳಾಗಿವೆ. ನಮ್ಮ ಮಕ್ಕಳಿಗೆ ವಚನ ಸಂಸ್ಕಾರವನ್ನು ನೀಡಬೇಕಾಗಿದೆ ಎಂದರು.
ಆಶೀರ್ವಚನ ನೀಡಿದ ಕಾರಂಜಿಮಠದ ಪೂಜ್ಯ ಗುರುಸಿದ್ಧ ಮಹಾಸ್ವಾಮಿಗಳು, ವಚನಗಳನ್ನು ಓದಿದರೆ ಸಾಲದು ಅವು ಬದುಕಿನ ಅನುಕರಣೆಯ ಮಾರ್ಗಗಳಾಗಬೇಕು. ಒಂದೊಂದು ವಚನಗಳಲ್ಲಿ ಜೀವನದ ದರ್ಶನವಿದೆ. ಎಲ್ಲ ಸಮಾಜ ಧರ್ಮದವರಿಗೂ ಅವು ನುಡಿಮುತ್ತುಗಳಾಗಿವೆ. ನಿತ್ಯ ಬದುಕಿಗೆ ಅಳವಡಿಸಿಕೊಳ್ಳಬೇಕೆಂದು ನುಡಿದರು.
ಇದೇ ಸಂದರ್ಭದಲ್ಲಿ ಡಾ.ಅವಿನಾಶ ಕವಿ ಹಾಗೂ ನೇತ್ರಾವತಿ ಕವಿ ಅವರು ಸಂಪಾದಿಸಿ ಸಂಯೋಜಿಸಿದ ‘ಶರಣರತ್ನಮಾಲೆ’ ಎ ಟೂ ಝಡ್ ಮೂಲಾಕ್ಷರಗಳ ಶರಣರ ಜೀವನ ಸಂದೇಶ ಹೊತ್ತ ಗ್ರಂಥದ ಐದನೇ ಮುದ್ರಣವನ್ನು ವೇದಿಕೆಯ ಮೇಲಿನ ಗಣ್ಯರು ಲೋಕಾರೆ್ಣಗೊಳಿಸಿದರು. ಗ್ರಂಥ ದಾಸೋಹಿಗಳಾದ ರತ್ನಪ್ರಭಾ ಬೆಲ್ಲದ ಅವರನ್ನು ಪೂಜ್ಯರು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಮಹಾಸಭೆಯ ಮಹಿಳಾ ಘಟಕದ ಸದಸ್ಯಯಾಗಿ ಆಯ್ಕೆಯಾದ ನೀಲಗಂಗಾ ಚರಂತಿಮಠ, ಜ್ಯೋತಿ ಬಾದಾಮಿ, ಆಶಾ ಯಮಕನಮರಡಿ ಅವರನ್ನು ಸತ್ಕರಿಸಲಾಯಿತು.
ಗಾಯತ್ರಿ ಕೆಂಪಣ್ಣವರ ಪ್ರಾರ್ಥಿಸಿದರು. ಮಹಾಂತೇಶ ಮೆಣಸಿನಕಾಯಿ ಸ್ವಾಗತಿಸಿದರು. ಶಶಿಕಲಾ ನಾಡಗೌಡ ವಚನ ವಿಶ್ಲೇಷಣೆ ಮಾಡಿದರು. ಸರೋಜಿನಿ ನಿಶಾನದಾರ ಪರಿಚಯಿಸಿದರು. ವಿ.ಕೆ.ಪಾಟೀಲ ವಂದಿಸಿದರು. ಶ್ವೇತಾ ಹೆದ್ದೂರಶೆಟ್ಟಿ ನಿರೂಪಿಸಿದರು. ಮಾಜಿ ಸಚಿವ ಶಶಿಕಾಂತ ನಾಯಕ, ಡಾ.ಎಚ್.ಬಿ.ರಾಜಶೇಖರ, ಡಾ.ಎಫ್.ವ್ಹಿ.ಮಾನ್ವಿ, ಚಂದ್ರಶೇಖರ ಬೆಂಬಳಗಿ, ಡಾ.ಗುರುದೇವಿ ಹುಲೆಪ್ಪನವರಮಠ, ರಮೇಶ ಕಳಸಣ್ಣವರ, ಬಾಲಚಂದ್ರ ಬಾಗಿ ಮಹಾಸಭೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 