ಅರ್ಥಪೂರ್ಣ ಬದುಕು ಇಹಪರದಲ್ಲಿ ಸನ್ಮಂಗಲಕ್ಕೆ ಪಾತ್ರರು
Those who live a meaningful life deserve blessings in this world and the hereafter.
ಗದಗ 30 : ಮನಸ್ಸಿನ ಕಲ್ಮಶಗಳನ್ನು ಕ್ಷೀಣಗೊಳಿಸಿ ಉನ್ನತಿಗೊಯ್ಯುವುದೇ ದಶಲಕ್ಷಣಪರ್ವ ಹಬ್ಬದ ಆಚರಣೆಯ ಉದ್ದೇಶವಾಗಿದ್ದು, ಇದು ಆಧ್ಯಾತ್ಮಿಕ ಸಾಧನೆಯ ಜೊತೆಗೆ ಉತ್ಕೃಷ್ಟ ಆದರ್ಶಮಯ ದೈನಂದಿನ ಬದುಕಿಗೂ ಸಂಜೀವಿನಿಯಾಗಿದೆ ಎಂದು ಜ್ವಾಲಾಮಾಲಿನಿ ಮಹಾವೀರ ಸದರಣ್ಣವರ ಹೇಳಿದರು.
ಅವರು ಗದಗ ಜಿಲ್ಲಾ ದಿಗಂಬರ ಜೈನ ಸಂಘವು ‘ದಶಲಕ್ಷಣ ಪರ್ವಾಚರಣೆ ಮತ್ತು ಸಮಾಜ ಸಂಪರ್ಕ ಸಭೆ’ ಕಾರ್ಯಕ್ರಮದ ನಿಮಿತ್ತ ಹುಯಿಲಗೋಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ‘ಉತ್ತಮ ಆರ್ಜವ ಧರ್ಮ’ ಕುರಿತು ಉಪನ್ಯಾಸ ಮಾಡುತ್ತ, ಕುಟಿಲತೆ, ಕಪಟತೆ, ಮಾಯಾಚಾರ ವ್ಯಕ್ತಿತ್ವದ ಸರ್ವನಾಶಕ್ಕೆ ಕಾರಣವಾಗಿದ್ದು, ಬೌದ್ಧಿಕವಾಗಿ ಉತ್ತಮವಾಗಿ ಬದುಕುವುದೇ ನಿಜವಾದ ಆರ್ಜವ ಧರ್ಮವಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಜೈನ ಸಮಾಜದ ಅಧ್ಯಕ್ಷ ರಮೇಶ ಬೆಳಗಟ್ಟಿ ಅವರು ಮನ-ವಚನ-ಕಾಯದಲ್ಲಿ ಏಕತೆ ಸಾಧಿಸಿ ಬದುಕನ್ನು ಪರಿಶುದ್ಧವಾಗಿ ಕಟ್ಟಿಕೊಂಡು ಅರ್ಥಪೂರ್ಣವಾಗಿ ಬದುಕುವವರು ಇಹಪರದಲ್ಲಿ ಸನ್ಮಂಗಲಕ್ಕೆ ಪಾತ್ರರಾಗುತ್ತಾರೆ ಎಂದು ಹೇಳಿದರು.
ಸಂಘದ ಅಧ್ಯಕ್ಷ ಪಿ.ಎ. ಕುಲಕರ್ಣಿ, ಎ.ಎನ್. ಬಸ್ತಿ, ಸುಭಾಸ ಅಂಗಡಿ, ಅರಹಂತ ದುಂಡಣ್ಣನವರ, ರಾಮಪ್ಪ ಎಲಿಗಾರ, ನಿಂಗಪ್ಪ ಬನ್ನಿಕೊಪ್ಪ, ಸೋಮಪ್ಪ ಬನ್ನಿಕೊಪ್ಪ, ಭೀಮಸಿ ಕುಸುಗಲ್ಲ, ನೇಸರಕುಮಾರ ಬೆಳಗಟ್ಟಿ, ಶಿವರಾಯಪ್ಪ ಬೆಳಗಟ್ಟಿ, ಸಂಕಪ್ಪ ಬೆಟದೂರ, ಯಲ್ಲಪ್ಪ ಹೊಸೂರ ಮತ್ತು ಸ್ಥಳೀಯ ಶ್ರಾವಕ-ಶ್ರಾವಿಕೆಯರು ಉಪಸ್ಥಿತರಿದ್ದರು. ಯಶವಂತ ಸಿದ್ದಣ್ಣವರ ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 