ಇದು ಅಣಕು ಕಾರ್ಯಾಚರಣೆ: ಕಾರವಾರ ಸುರಂಗ ಮಾರ್ಗದಲ್ಲಿ ಬಾಂಬ್ ಪತ್ತೆ
This was a mock operation: Bomb found in Karwar tunnel
ಕಾರವಾರ 06 : ಕಾರವಾರ ನಗರ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಗರ ಪ್ರವೇಶದ ಬಳಿಯ ಸುರಂಗ ಮಾರ್ಗದಲ್ಲಿ ಹಾಗೂ ಕಾರವಾರ ಬಂದರು ಬಳಿ ಗುರುವಾರ ಮೂರು ಬಾಂಬ್ ಪತ್ತೆಯಾಗಿವೆ . ಬಾಂಬ್ ಇಟ್ಟಿದ್ದ ಆಗುಂತಕರನ್ನು ಬ್ಲೂಪೋರ್ಸ ಸಿಬ್ಬಂದಿ ಮತ್ತು ಕಾರವಾರ ಪೊಲೀಸರು ಬಂಧಿಸಿದ್ದಾರೆ.ಬಾಂಬ್ ಪತ್ತೆ ಕಾರ್ಯಚರಣೆಗೆ ಎರಡು ವಿಭಾಗಗಳನ್ನು ಮಾಡಲಾಗಿತ್ತು. ಸೀಬರ್ಡ ನೌಕಾನೆಲೆಯ ಸಿಬ್ಬಂದಿ ಹಾಗೂ ಕಾರವಾರ ಪೊಲೀಸರು ಈ ಕಾರ್ಯಾಚರಣೆಯಲ್ಲಿದ್ದರು. ಸೀಬರ್ಡ ರೆಡ್ ಫೋರ್ಸ್ ನೌಕಾದಳ ಸಿಬ್ಬಂದಿ ಮಾರುವೇಷದಲ್ಲಿ ಆಗಮಿಸಿ ಬಾಂಬ್ ಮಾದರಿಯ ಪೆಟ್ಟಿಗೆಗಳನ್ನು ಬಂದರು ಮತ್ತು ಹೆದ್ದಾರಿ ಸುರಂಗ ಮಾರ್ಗ ಸ್ಥಳಗಳಲ್ಲಿ ಇರಿಸಿದ್ದರು. ಸೀಬರ್ಡನ ಬ್ಲೂ ಫೋರ್ಸ್ ಸಿಬ್ಬಂದಿ ಈ ಬಾಂಬ್ ಗಳನ್ನು ಪತ್ತೆಹಚ್ಚಿ ನಿಷ್ಕ್ರಿಯಗೊಳಿಸಲು, ಕಾರವಾರ ಪೊಲೀಸ್ ತಂಡದ ಸಹಾಯ ಪಡೆದು ಜವಾಬ್ದಾರಿ ನರ್ವಹಿಸಿದರು.
ವಾಣಿಜ್ಯ ಬಂದರು, ಮೀನುಗಾರಿಕೆ ಬಂದರು, ರೈಲ್ವೆ ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ, ಕಾಳಿ ಸೇತುವೆ, ಮಲ್ಲಾಪುರ, ಕದ್ರಾ ಮೊದಲಾದ ಸ್ಥಳಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿತ್ತು .ನಗರದ ಮುಖ್ಯ ರಸ್ತೆಗಳಲ್ಲಿ ವಾಹನ ತಪಾಸಣೆ ಜೋರಾಗಿತ್ತು. ಕಾಳಿ ಸೇತುವೆ, ಬೈತಖೋಲ, ಅರಗಾ, ಮುದಗಾ ಭಾಗಗಳಲ್ಲಿ ಚೆಕ್ಪೋಸ್ಟ್ಗಳನ್ನು ನಿರ್ಮಿಸಲಾಗಿತ್ತು.ಕರಾವಳಿಯ ಉದ್ದಕ್ಕೂ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಬಸ್ ನಿಲ್ದಾಣಗಳು, ಹೆದ್ದಾರಿಗಳು, ರೈಲು ನಿಲ್ದಾಣಗಳವರೆಗೆ ಭದ್ರತಾ ಕವಚ ಬಿಗಿಗೊಳಿಸಲಾಗಿದೆ. ತಟರಕ್ಷಕ ಪಡೆ ಹಾಗೂ ಕರಾವಳಿ ಕಾವಲು ಪೊಲೀಸರು ಅರಬ್ಬಿ ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದಾರೆ.
ಪರೀಶೀಲನೆ ಸಂದರ್ಭದಲ್ಲಿ ವಾಹನ ತಪಾಸಣೆ ಅಥವಾ ಭದ್ರತಾ ಕ್ರಮಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ಅನುಮಾನಾಸ್ಪದ ವಸ್ತುಗಳು ಅಥವಾ ವ್ಯಕ್ತಿಗಳನ್ನು ಕಂಡರೆ, ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಮನವಿ ಮಾಡಲಾಗಿದೆ.ಆದರೆ ಇದು ನಿಜ ಬಾಂಬ್ ಅಲ್ಲವೇ ಅಲ್ಲ.!, ಅಣಕು ಕಾರ್ಯಚರಣೆ. ಬಾಂಬ್ ಇಟ್ಟ ಕಾರಣಕ್ಕೆ ಬಂಧನಕ್ಕೆ ಒಳಗಾಗಿರುವವರೂ ಕೂಡಾ ಆಗುಂತಕರಲ್ಲ , ಅವರೂ ಸಹ ಪೊಲೀಸರೇ. ಇದು ನಿಜವಾದ ಬಾಂಬ್ ದಾಳಿ ಅಲ್ಲ, ಅಣುಕು ಕಾರ್ಯಾಚರಣೆ ಅಷ್ಟೇ. ಕರಾವಳಿ ಭದ್ರತೆಯನ್ನು ಪರೀಶೀಲನೆ ಮಾಡುವ ಉದ್ದೇಶದಿಂದ ನೌಕಾಪಡೆ, ತಟರಕ್ಷಕ ಪಡೆ, ಕರಾವಳಿ ಕಾವಲು ಪೊಲೀಸರು ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಒಟ್ಟಾಗಿ ಈ ಅಣಕು ಪ್ರದರ್ಶನ ಆಯೋಸಿದ್ದವು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 