ತಿಮ್ಮಪ್ಪನ ದರ್ಶನದಿಂದ ಪರಿಪೂರ್ಣ ವಿಶಿಷ್ಟ ಅನುಭವ-ಮುಖ್ಯ ನ್ಯಾಯಮೂತರ್ಿ ಅರವಿಂದ ಬೊಬ್ಡೆ

ತಿರುಮಲ, ನ 24 :  ಭಾರತದ 47 ಮುಖ್ಯ ನ್ಯಾಯಮೂತರ್ಿಗಳಾಗಿ ಅಧಿಕಾರ ಸ್ವೀಕರಿಸಿದ ನಂತರ ನ್ಯಾಯಮೂತರ್ಿ ಶರದ್ ಅರವಿಂದ್ ಬೊಬ್ಡೆ ಅವರು  ಭಾನುವಾರ ತಿರುಮಲಕ್ಕೆ ಭೇಟಿ ನೀಡಿ, ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು. 

'ತಾವು ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಕಳೆದ 40 ವರ್ಷಗಳಿಂದ ಭೇಟಿ ನೀಡುತ್ತಿದ್ದು, ಆದರೆ, ಈ ಬಾರಿಯ ಭೇಟಿಯಲ್ಲಿ ತಮಗೆ ಹೊಸ ಅನುಭವವಾಗಿದೆ.' ಎಂದು ಬೊಬ್ಡೆ ಅವರು ದರ್ಶನದ ನಂತರ ತಿಳಿಸಿದ್ದಾರೆ. ದರ್ಶನಕ್ಕೂ ಮುನ್ನ ದೇವಾಲಯದ ಪ್ರವೇಶ ದ್ವಾರದಲ್ಲಿ ಮುಖ್ಯ ನ್ಯಾಯಮೂತರ್ಿಗಳಿಗೆ ದೇವಾಲಯದ ಅರ್ಚಕರು ಸಾಂಪ್ರದಾಯಿಕ ಸ್ವಾಗತ ಕೋರಿದರು. ಓಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ, ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್, ಹೆಚ್ಚುವರಿ ಎ.ವಿ.ಧಮರ್ಾರೆಡ್ಡಿ ಬೊಬ್ಡೆಯವರನ್ನು ಬರಮಾಡಿಕೊಂಡರು. ಬಳಿಕ ಪುತ್ರ ಶ್ರೀನಿವಾಸ್ ಬೊಬ್ಡೆ ಅವರೊಂದಿಗೆ ಮುಖ್ಯನ್ಯಾಯಮೂತರ್ಿಗಳು ಗರ್ಭಗುಡಿಯಲ್ಲಿ ತಿಮ್ಮಪ್ಪನಿಗೆ ಪೂಜೆ ಸಲ್ಲಿಸಿದರು. ಆಂಧ್ರಪ್ರದೇಶ ಹೈಕೋಟರ್್ ಮುಖ್ಯ ನ್ಯಾಯಾಧೀಶ ಜಿತೇಂದ್ರ ಮಹೇಶ್ವರಿ ಸಹ ಬೊಬ್ಡೆ ಅವರೊಂದಿಗೆ ಸ್ವಾಮಿಯ ದರ್ಶನ ಪಡೆದರು.  

ದರ್ಶನದ ಬಳಿಕ ರಂಗನಾಯಕುಲ ಮಂಟಪಂ ನಲ್ಲಿ ದೇವಸ್ಥಾನದ ಅರ್ಚಕರು  ಬೊಬ್ಡೆಯವರಿಗೆ ವೇದಾಶೀವರ್ಾಚನ ನೀಡಿದರು. ಬಳಿಕ ಪ್ರಸಾದ, ದೇವರ ಫೋಟೋ ನೀಡಲಾಯಿತು.  

'ದೇವಸ್ಥಾನ ಮತ್ತು ಆವರಣದಲ್ಲಿ ಪ್ರಶಾಂತತೆಯು ವಾತಾವರಣ ವಿಶಿಷ್ಟ ಅನುಭವ ಮತ್ತು ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ.' ಎಂದ ಮುಖ್ಯ ನ್ಯಾಯಮೂತರ್ಿಯವರು, ದೇವಸ್ಥಾನದ ನಿರ್ವಹಣೆಯ ಕುರಿತು ಆಡಳಿತ ಮಂಡಳಿಯನ್ನು ಶ್ಲಾಘಿಸಿದರು.