ಬೆಂಗಳೂರು, ನ.14- ಟಿಡಿಎಸ್ ಸಂದಾಯ ಮಾಡುವಾಗ ತಡವಾದರೆ ವಿಧಿಸುವ ದಂಡವನ್ನು ಪುನರ್ ಪರಿಶೀಲಿಸಿ ಸಂಬಂಧಪಟ್ಟ ಕಾಯ್ದೆಗೆ ತಿದ್ದುಪಡಿ ತರಲು ಸಿಬಿಡಿಟಿ ಕೇಂದ್ರ ಮಂಡಳಿಗೆ ಕೋರಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಆಯುಕ್ತ (ಟಿಡಿಎಸ್) ಸಂಜಯ್ಕುಮಾರ್ ತಿಳಿಸಿದರು.
ಕನರ್ಾಟಕ ಸಣ್ಣ ಕೈಗಾರಿಕೆಗಳ ಸಂಘ ಕಾಸಿಯಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮೂಲದಲ್ಲಿ ತೆರಿಗೆ ಕಡಿತ ವಿಚಾರ ಸಂಕಿರಣ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಕಾಸಿಯಾದ ಅಧ್ಯಕ್ಷ ಬಸವರಾಜ್ ಎಸ್.ಜವಳಿ ಅವರ ಮನವಿಗೆ ಸ್ಪಂದಿಸಿದ ಅವರು, ಕಾಯ್ದೆಗೆ ತಿದ್ದುಪಡಿ ತರಲು ಸಿಬಿಡಿಟಿ ಕೇಂದ್ರ ಮಂಡಳಿಗೆ ಕೋರಲಾಗಿದೆ ಎಂದು ಹೇಳಿದರು.
ಒಟ್ಟು ವರಮಾನದಲ್ಲಿ ಟಿಡಿಎಸ್ ಶೇ.40ರಷ್ಟು ಕನರ್ಾಟಕ ರಾಜ್ಯದಲ್ಲಿ ಸಂದಾಯ ಮಾಡಿರುವುದು ಶ್ಲಾಘನೀಯ. ಈ ಜಾಗೃತಿ ಕಾರ್ಯಕ್ರಮದಲ್ಲಿ ಟಿಡಿಎಸ್ ಕಾಯ್ದೆ ಕಾನೂನುಗಳ ಬಗ್ಗೆ ಅರಿವು ಮೂಡಿಸುತ್ತಿರುವುದು ಉತ್ತಮ ಕೆಲಸ ಎಂದರಲ್ಲದೆ, ಇದರ ಸಾಧಕ-ಬಾಧಕಗಳ ಬಗ್ಗೆ ತಿಳಿಸಿಕೊಟ್ಟರು.
ಕಾಸಿಯಾ ಅಧ್ಯಕ್ಷ ಬಸವರಾಜ್ ಎಸ್.ಜವಳಿ ಮಾತನಾಡಿ, ಮೂರು ತಿಂಗಳಿಗೊಮ್ಮೆ ರಿಟನರ್್ ಫೈಲ್ ಸಲ್ಲಿಸುವಾಗ ತಡವಾದರೆ ದಿನಕ್ಕೆ 200ರೂ. ದಂಡವನ್ನು ವಿಧಿಸಲಾಗುತ್ತಿದೆ. ಪ್ರತಿ ತಿಂಗಳು 7ನೇ ತಾರೀಖಿನೊಳಗೆ ಟಿಡಿಎಸ್ ಪಾವತಿಸಲಾಗುತ್ತದೆ. ತಡವಾದ ಅವಧಿಗೆ ಪ್ರತಿ ತಿಂಗಳು ಶೇ.1.05ರಷ್ಟು ಬಡ್ಡಿ ವಿಧಿಸಲಾಗುತ್ತಿದೆ. ಬಡ್ಡಿ ವಿಧಿಸುವುದರ ಜತೆಗೆ ದಂಡ ವಸೂಲಿ ಮಾಡುತ್ತಿರುವುದು ಸಮಂಜಸವಲ್ಲ. ಇದರಿಂದ ಕೈಗಾರಿಕೆಗಳು ಸಂಕಷ್ಟ ಎದುರಿಸಬೇಕಾಗುತ್ತದೆ. ಇದನ್ನು ಪುನರ್ ಪರಿಶೀಲಿಸಬೇಕೆಂದೂ, ಕನಿಷ್ಠ ಪ್ರಮಾಣದ ದಂಡ ವಿಧಿಸುವಂತಿರಬೇಕೆಂದು ಮನವಿ ಮಾಡಿದರು.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಿಗಳು ಟಿಡಿಎಸ್ ಅಳವಡಿಕೆ ಕುರಿತಂತೆ ಎದುರಿಸುತ್ತಿರುವ ಸಮಸ್ಯೆಗಳಿಗೆ ಆದಾಯ ತೆರಿಗೆ ಇಲಾಖೆ ಉಪ ಆಯುಕ್ತ ಡಾ.ವೆಂಕಟೇಶ್ ಪರಿಹಾರೋಪಾಯಗಳನ್ನು ತಿಳಿಸಿಕೊಟ್ಟರೆ, ಜಂಟಿ ಆಯುಕ್ತ ಡಾ.ವಿನೋದ್ ಶಮರ್ಾ ಟಿಡಿಎಸ್ ಜಾಗೃತಿ ಕುರಿತು ಮಾತನಾಡಿದರು.
ಆದಾಯ ತೆರಿಗೆ ಅಧಿಕಾರಿ ಸಿ.ಬಿ.ಪ್ರಭಾಣ್ಣಗೌಡ, ಕಾಸಿಯಾ ಪದಾಧಿಕಾರಿಗಳಾದ ಆರ್.ರಾಜು, ಸುರೇಶ್ ಎನ್.ಸಾಗರ್, ವಿಶ್ವೇಶ್ವರಯ್ಯ, ಶ್ರೀನಾಥ್ ಭಂಡಾರಿ ಉದ್ಯಾವರ್, ಟಿ.ಎಸ್.ಉಮಾಶಂಕರ್ ಮತ್ತಿತರರು ಉಪಸ್ಥಿತರಿದ್ದರು.