ಸರಕಾರಿ ಅಭಿಯೋಜಕನ ಮನೆ ಕಳ್ಳತನಕ್ಕೆ ಕಳ್ಳರ ಯತ್ನ ವಿಫಲ
Thieves attempt to rob government prosecutor's house fails
ಜಮಖಂಡಿ 17: ತಾಲೂಕಿನ ಹುನ್ನೂರ ಗ್ರಾಮದ ಗಣೇಶ ನಗರದಲ್ಲಿ ತಡರಾತ್ರಿಯಲ್ಲಿ ಸರಕಾರಿ ಅಭಿಯೋಜಕನ ಮನೆಗೆ ಕಳ್ಳತನ ಮಾಡಲು ಹೋದ ಖರ್ತನಾಕ ಕಳ್ಳರು ಬರಿಗೈಯಲ್ಲಿ ವಾಪಸಾದ ಘಟನೆ ನಡೆದಿದೆ.
ಗಣೇಶ ನಗರದ ನಿವಾಸಿಯಾದ ವಿಜಯಪುರ ನ್ಯಾಯಾಲಯದಲ್ಲಿ ಸೇವೆ ಸಲಿಸುವ ಸರಕಾರಿ ಅಭಿಯೋಜಕ ಶಶಿಧರ ರಾಠೋಡ ಅವರು ಸಂಬಂಧಿಕರ ಅಂತ್ಯ ಸಂಸ್ಕಾರ ಮಾಡಲು ಹೋದ ಸಮಯ ಸಾಧಿಸಿ ಮನೆಯ ಕಳ್ಳತನ ಮಾಡಲು ಹೋದ ಖರ್ತನಾಕ ಕಳ್ಳರ ತಂಡ ಸಿಸಿ ಕ್ಯಾಮರಾ ಧ್ವಂಸಗೊಳಿಸಿ ತಮ್ಮ ಕೈ ಚಳಕವನ್ನು ತೋರಿಸಲು ಮುಂದಾಗಿದ್ದಾರೆ.
ಮನೆಯ ಮುಂಭಾಗದಲ್ಲಿ ಇರುವ ಸಿಸಿ ಕ್ಯಾಮರಾಗಳನ್ನು ಧ್ವಂಸಗೊಳಿಸಿ ಮನೆಯ ಮುಖ್ಯ ಬಾಗಿಲದ ಬೀಗವನ್ನು ಮುರಿದು ಮನೆಯ ಒಳಗೆ ನುಗ್ಗಿ ಮನೆಯಲ್ಲಿ ಇರುವ ಎರಡು ಟ್ರೇಜರಿಗಳನ್ನು ಮುರಿದು ಹಾಗೂ ಸೂಟಿಕೇಸ್ ಮುರಿದು ಕಳ್ಳತನ ಮಾಡಲು ಮುಂದಾಗಿರುವ ದೃಶ್ಯಾವಳಿಗಳು ಮನೆಯಲ್ಲಿ ಇರುವ ಸಿಸಿ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ. ಶಶಿಧರ ರಾಠೋಡ ಅವರ ಮಗನ ಮೊಬೈಲಗೆ ಕಳ್ಳರು ಮನೆಗೆ ನುಗ್ಗಿರುವ ಸಿಸಿ ಟಿವಿಯಲ್ಲಿನ ಮೇಸಜ್ ತಿಳಿದು ತಕ್ಷಣ ತಂದೆ ಹಾಗೂ ಮಗ ಸೇರಿ ಮನೆಗೆ ಬಂದು ತಲುವಷ್ಟರಲ್ಲಿ ಕಳ್ಳರು ಪರಾರಿಯಾಗಿದ್ದಾರೆಂದು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಬೆರಳಚ್ಚು ತಜ್ಞರ ತಂಡ ಹಾಗೂ ಶ್ವಾನದಳದ ತಂಡ ಆಗಮಿಸಿ ತನಿಖೆಯನ್ನು ಮುಂದುವರಿಸಿದ್ದಾರೆ. ಗ್ರಾಮೀಣ ಪೋಲಿಸ್ ಠಾಣಿಯ ಕ್ರೈಂ ಪಿಎಸ್‌ಐ. ಎಮ್.ಎಚ್.ಹೊಸಮನಿ, ಎ.ಎಸ್.ಐ. ಅನೀಲ ಚವ್ಹಾಣ, ಸಿಬ್ಬಂದಿಯಾದ ಸಿದ್ದು ಮೇಟಿ ಸೇರಿದಂತೆ ಬೆರಳಚ್ಚು ತಜ್ಞರು, ಶ್ವಾನದಳದವರು ಇದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 