ನ್ಯೂನತೆಗಳನ್ನಷ್ಟೇ ವೈಭವೀಕರಿಸಿ ಹೇಳುತ್ತಾರೆ: ಪ್ರವೀಣ ಕುಮಾರ ಮಾವಿನಕಾಡು

ನ್ಯೂನತೆಗಳನ್ನಷ್ಟೇ ವೈಭವೀಕರಿಸಿ ಹೇಳುತ್ತಾರೆ: ಪ್ರವೀಣ ಕುಮಾರ ಮಾವಿನಕಾಡು They only glorify the shortcomings and say: Praveen Kumar Mavinakadu


ವಿಜಯಪುರ 22: ಎಲ್ಲವನ್ನು ಪ್ರಶ್ನಿಸಿ ಎಂದು ಹೇಳುವುದು, ಪ್ರಶ್ನಿಸಿದರೇ ಮನುವಾದಿಯಂದು ದೂರುತ್ತಾರೆ ಎಂದು ಅಂಕಣಕಾರ ಪ್ರವೀಣ ಕುಮಾರ ಮಾವಿನಕಾಡು ಹೇಳಿದರು. ದಿನಾಂಕ 21ರ ಭಾನುವಾರ ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದ ಭವನದಲ್ಲಿ ನಡೆದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತ ವಿಜಯಪುರ ಆಯೋಜಿಸಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತಾಡಿದ ಅವರು ನಮ್ಮ ಸಮಾಜದಲ್ಲಿ ಬುದ್ಧಿಜೀವಿಗಳು ಎಂದು ಕರೆದುಕೊಳ್ಳುವವರು ಹಿಂದು ಧರ್ಮದಲ್ಲಿರುವ ನ್ಯೂನತೆಗಳನ್ನಷ್ಟೇ ವೈಭವೀಕರಿಸಿ ಹೇಳುತ್ತ ಹಿಂದು ಧರ್ಮಗಳಲ್ಲಿರುವಂತಹ ಒಳ್ಳೆಯ ಅಂಶಗಳನ್ನು, ಒಳ್ಳೆಯ ವಿಚಾರಗಳನ್ನು ಮರೆಮಾಚುವ ಮೂಲಕ ಸನಾತನ ಸಂಸ್ಕೃತಿಯ ಕುರಿತು ಜನರಿಗೆ ತಪ್ಪುಕಲ್ಪನೆ ಮೂಡವಂತೆ ಮಾಡುತ್ತಿದ್ದಾರೆಂದು ತಮ್ಮ ಉಪನ್ಯಾಸದಲ್ಲಿ ವಿವರಿಸಿದರು.  

ಅಧ್ಯಕ್ಷತೆಯನ್ನು ಹರ್ಷವರ್ಧನ ಸರಾಫ್ ಅವರು ವಹಿಸಿದ್ದರು. ಪ್ರಾಸ್ತಾವಿಕ ಆನಂದ ಗೋಡ್ಸೆ, ಸ್ವಾಗತ ಪರಿಚಯ ವಿವೇಕ ಕುಲಕರ್ಣಿ, ಪ್ರಾರ್ಥನೆ ಬಳವಂತ ಕುಲಕರ್ಣಿ, ನಿರೂಪಣೆ ಶ್ರೀರಂಗ ಕುಲಕರ್ಣಿ ನಿರ್ವಹಿಸಿದರು. ಸುಧೀರ ಟಂಕಸಾಲಿ ದಂಪತಿಗಳು, ಸುಕಾಂತ ಕುಲಕರ್ಣಿ, ಶ್ರೀರಂಗ ಪುರಾಣಿಕ, ಮಯೂರ ತಿಳಗುಳಕರ, ಸುಭಾಷ ಜಂಬುರೇ, ನೀಲಕಂಠ ವಾಲಿಕಾರ, ರಮೇಶ ಕುಲಕರ್ಣಿ, ರಘೋತ್ತಮ ಅರ್ಜುಣಗಿ, ಸಂತೋಷ ಕಳ್ಳಿಗುಡ್ಡ ಸೇರಿದಂತೆ ಅನೇಕರು ಉಪಸ್ಥಿತರಾಗಿದ್ದರು.