ಎಸ್ಸಿಎಸ್ಟಿ ಜನರಿಗೆ ನಿವೇಶನ ಉತಾರ್ ಕೊಡದಿದ್ದರೆ ಉಗ್ರವಾದ ಹೋರಾಟ: ಡಿಎಸ್‌ಎಸ್ ಮುಖಂಡ ಚಿನ್ನಪ್ಪ ಗಗ್ಗರಿ
There will be a fierce struggle if SCST people are not given housing: DSS leader Chinnappa Gaggari
ಪಾಲಬಾವಿ 11 : ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದ ಸರ್ವೇ ನಂಬರ್ 14 ,17, 61, 62, 72, 58 ಮತ್ತು 59 ರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಾಗೂ ಇತರೆ ಹಿಂದುಳಿದ ಬಡಜನರು ಸುಮಾರು 50 ವರ್ಷಗಳ ಕಾಲದ ಹಿಂದಿನಿಂದಲೂ ಮನೆ ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದವರಿಗೆ ಕಂಪ್ಯೂಟರ್ ಉತಾರ ನೀಡುವಂತೆ ರಾಯಬಾಗ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಸುಭಾಷ ಭಜಂತ್ರಿಯವರಿಗೆ ಗ್ರಾಮಸ್ಥರಾದ ಡಿಎಸ್‌ಎಸ್ ಮುಖಂಡ ಚಿನ್ನಪ್ಪ ಗಗ್ಗರಿ, ಮಹಾಲಿಂಗ ಕಾಳೆ, ನಂದೇಶ ನಾವಿ ಸೋಮವಾರ ಮನವಿ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಎಸ್‌ಎಸ್ ಮುಖಂಡ ಚಿನ್ನಪ್ಪ ಗಗ್ಗರಿ, ಹಂದಿಗುಂದ ಗ್ರಾಮದಲ್ಲಿ ಮಸಣ ಮಟ, ಗಾಯರಾಣ, ಹಾಗೂ ಗೋಮಾಳದಲ್ಲಿ ವಾಸವಿರುವ ಪ.ಜಾತಿ/ಪ.ಪಂಗಡ ಹಾಗೂ ಇತರೆ ಹಿಂದೂಳಿದ ಬಡ ಜನರು ಮನೆ, ಪತ್ರಾಸ್, ಸೆಡ್ ಹಾಗೂ ಗುಡಿಸಲುಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ . ಅಂತವರಿಗೆ ಗ್ರಾಮ ಪಂಚಾಯತಿಯಿಂದ ಉತಾರ ನೀಡಲು ಕ್ರಮ ಕೈಗೊಳ್ಳಬೇಕು. ಪ.ಜಾತಿ/ಪ.ಪಂಗಡ ಜಾತಿಗೆ ಸೇರಿದ ಸುಮಾರು 1200 ಕ್ಕಿಂತಲೂ ಅಧಿಕ ಮನೆಗಳಿದ್ದು, ಹಾಗೂ ಇತರೆ ಹಿಂದೂಳಿದ ಬಡ ಜನರ 1800 ಕ್ಕಿಂತಲೂ ಅಧಿಕ ಮನೆಗಳಿದ್ದು ಒಟ್ಟು ಸುಮಾರು 3000 ಕ್ಕಿಂತಲೂ ಹೆಚ್ಚಿನ ಮನೆಗಳಿರುತ್ತವೆ.
ನಾವು ಸುಮಾರು 50 ರಿಂದ 60 ವರ್ಷಗಳ ಅಧಿಕದಿಂದಲೂ ಹಂದಿಗುಂದ ಗ್ರಾಮದ ಸರ್ವೆ ನಂ.14,17.61,62,72,58 ಮತ್ತು 59 ರಲ್ಲಿ ವಾಸವಿದ್ದೇವೆ. ಹಾಗೂ ನಾವು ವಾಸವಿದ್ದ ಸಮಯದಿಂದ ಇಲ್ಲಿಯವರೆಗೂ ಸರ್ಕಾರದಿಂದ ನಮಗೆ ನಮ್ಮ ವಾಸ ಸ್ಥಳಗಳಾದ ಮನೆಗಳಾಗಿರಬಹುದು, ಪತ್ರಾಸ್ ಶೇಡ್ ಗಳಾಗಿರಬಹುದು ಗುಡಿಸಲಾಗಿರಬಹುದು ಇವುಗಳ ಅಧಿಕೃತವಾಗಿ ನಮ್ಮ ಹೆಸರಿನಲ್ಲಿ ಉತಾರಗಳು ಇರುವುದಿಲ್ಲ. ಇದರಲ್ಲಿ ಶೇಕಡಾ 80ಅ ರಷ್ಟು ಮನೆಗಳನ್ನು ಗ್ರಾಮ ಪಂಚಾಯತಿಯಿಂದ ಬರುವ ವಿವಿಧ ಯೋಜನೆಗಳಲ್ಲಿ ಮಂಜೂರಾಗಿರುವ ಮನೆಗಳಿವೆ ಜೊತೆಗೆ ಆಗಿನ ಸಮಯದಲ್ಲಿ ಆ ಮನೆಗಳ ಜಿಪಿಎಸ್ ಸಹ ಆಗಿರುತ್ತದೆ.
ಗ್ರಾಮ ಪಂಚಾಯತ ಹಂದಿಗುಂದ ಕಾರ್ಯಾಲಯದಲ್ಲಿ ಈ ಮನೆಗಳಿಂದ ಮನೆ ಕರ, ನಳದ ಕರ ಹಾಗೂ ಹುಬ್ಬಳ್ಳಿ ವಿದ್ಯುತ್ ಸರಬರಾಜ ನಿಗಮದಿಂದ ಕರೆಂಟ ಬಿಲ್ನ್ನು ಸಹ ಪಾವತಿಸಿದ್ದೇವೆ. ಮನೆ ಮಂಜೂರಾಗಿನಿಂದಲೂ ಎಲ್ಲಾ ರೀತಿಯ ಕರವನ್ನು ಕಟ್ಟಿದರೂ ಸಹ ಈ ಎಲ್ಲ ಮನೆಗಳಿಗೆ ಗ್ರಾಮ ಪಂಚಾಯತಿಯಿಂದ ಕಂಪ್ಯೂಟರ್ ಉತಾರ ನೀಡಿರುವುದಿಲ್ಲ. ಅದಕ್ಕಾಗಿ ಶೀಘ್ರವೇ ಗ್ರಾಮ ಪಂಚಾಯಿತಿ ವಿಶೇಷ ಗ್ರಾಮಸಭೆ ಕರೆದು ಗ್ರಾಮಸ್ಥರಿಗೆ ಉತ್ತಾರ್ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ನಂದೀಶ ನಾವಿ, ಡಿಎಸ್‌ಎಸ್ ಮುಖಂಡ ಚಿನ್ನಪ್ಪ ಗಗ್ಗರಿ, ಮಹಾಲಿಂಗ ಕಾಳೆ ಇದ್ದರು.ಬಾಕ್ಸ್ ಲೈನ್ : "ಹಂದಿಗುಂದ ಗ್ರಾಮದಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಹಾಗೂ ಇತರೆ ಸಮುದಾಯದವರ ಮನೆಗಳಿಗೆ ಹಕ್ಕುಪತ್ರ ಇಲ್ಲದಿರುವ ಮಾಹಿತಿಯನ್ನು ಡಿಎಸ್‌ಎಸ್ ಮುಖಂಡ ಚಿನ್ನಪ್ಪ ಗಗ್ಗರಿ ಹಾಗೂ ಸಾರ್ವಜನಿಕರು ಕೊಟ್ಟಿದ್ದಾರೆ. ಗ್ರಾಮದಲ್ಲಿಯ ಮೂಲಭೂತ ಸೌಕರ್ಯ ಬಗ್ಗೆ ಪರೀಶೀಲಿಸುತ್ತೇನೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 