ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಆಚಾತುರ್ಯ ಆಗಿಲ್ಲ- ಬಿ.ಇ.ಒ. ಪ್ರಕಾಶ ಹಿರೇಮಠ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಆಚಾತುರ್ಯ ಆಗಿಲ್ಲ- ಬಿ.ಇ.ಒ. ಪ್ರಕಾಶ ಹಿರೇಮಠ There was no haste in the SSLC exam - BEO Prakash Hiremath

ಲೋಕದರ್ಶನ ವರದಿ 

ಮೂಡಲಗಿ 01 : ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಇರುವ ಎಸ್‌.ಎಸ್‌.ಎಲ್‌.ಸಿ.ಯ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಆಯಾ ದಿನದ ಪ್ರಶ್ನೆ ಪತ್ರಿಕೆಗಳನ್ನು ಇಲಾಖೆಯ ನಿಯಮದಂತೆ ಭದ್ರತೆಯಲ್ಲಿ ವಾಹನದಲ್ಲಿ ಮಾರ್ಗಾಧಿಕಾರಿಯು ತಲುಪಿಸಿ ಮರಳಿ ಉತ್ತರ ಪತ್ರಿಕೆಗಳನ್ನು ಅದೇ ಮಾರ್ಗದಲ್ಲಿ ಭದ್ರತೆ ಮೂಲಕ ವಾಹನ ಮೂಲಕ ಬಿಇಒ ಕಚೇರಿಗೆ ವಾಪಸ್ ಪಡೆಯಲಾಗುತ್ತಿದೆ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ ಹಿರೇಮಠ ಹೇಳಿದರು.  

 ರವಿವಾರದಂದು ಪಟ್ಟಣದ ಬಿ.ಆರ್‌.ಸಿ. ಕಛೇರಿಯ ಸಭಾ ಭವನದಲ್ಲಿ ಮೂಡಲಗಿ ಶೈಕ್ಷಣಿಕ ವಲಯದ ಎಸ್‌.ಎಸ್‌.ಎಲ್‌.ಸಿ. 22 ಪರೀಕ್ಷೆ ಕೇಂದ್ರಗಳ ಮುಖ್ಯ ಅಧ್ಯೀಕ್ಷರು ಉಪಮುಖ್ಯ ಅಧ್ಯೀಕ್ಷರು ಹಾಗೂ ಪ್ರಶ್ನೆ ಪತ್ರಿಕೆ ಪಾಲಕರು ಮಾರ್ಗಾಧಿಕಾರಿಗಳ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾ. 25 ರಂದು ಜರುಗಿದ ಆಂಗ್ಲ ಭಾಷಾ ಪರೀಕ್ಷೆಯ ಉತ್ತರ ಪತ್ರಿಕೆಯನ್ನು ಪಡೆಯಲು ಭದ್ರತಾ ವಾಹನವು ಖಾನಟ್ಟಿ ಪರೀಕ್ಷಾ ಕೇಂದ್ರದಿಂದ ಸ್ಥಳೀಯ ಉಮಾಬಾಯಿ ಶಾಲೆಗೆ ತೆರಲು ಹೋಗುವಾಗ ಇಕ್ಕಟ್ಟಾದ ದಾರಿಯಲ್ಲಿ ಸಂಚಾರ ದಟ್ಟಣೆಯಿಂದಾಗಿ ವಾಹನ ನಿಲ್ಲುವಂತಾಗಿದೆ.

ಸಮಯ ನಿರ್ವಹಣೆಗಾಗಿ ಉಮಾಬಾಯಿ ಶಾಲೆಯಿಂದ ಬೈಕ್ ಮೇಲೆ ಪರೀಕ್ಷೆಗೆ ಸಂಬಂಧಿಸಿದ ಜವಾಬ್ದಾರಿ ಸಿಬ್ಬಂದಿಯವರು ಭದ್ರತಾ ವಾಹನದ ಬಳಿಗೆ ಉತ್ತರ ಪತ್ರಿಕೆಗಳ ಸೀಲ್ ಮಾಡಿದ್ದ ಬಂಡಲ್‌ಗಳನ್ನು ಸಾಗಿಸಿದ್ದು ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಹರದಾಡಿದೆ. ರಸ್ತೆಯಲ್ಲಿ ವಾಹನ ಜನ ದಟ್ಟಣೆಯಿಂದಾಗಿ ಆಗಿದ್ದ ವಿಳಂಬವನ್ನು ಸರಿದೂಗಿಸಲು 50 ಮೀ. ಅಂತರದಲ್ಲಿದ್ದ ಭದ್ರತಾ ವಾಹನದ ಬಳಿಗೆ ಬಂಡಲ್‌ಗಳನ್ನು ಬೈಕ್ ಮೇಲೆ ಕೇಂದ್ರದ ಸ್ಥಾನಿಕ್ ಜಾಗೃತದಳ ಅಧಿಕಾರಿ ಅವರೊಂದಿಗೆ ಜವಾಬ್ದಾರಿಯಲ್ಲಿ ಸಾಗಿಸಲಾಗಿದೆ ಎಂದು ಶಾಲೆಯವರು ತಿಳಿಸಿದ್ದಾರೆ. ಈ ಸಂಬಂಧವಾಗಿ ಆಗಿರುವ ಘಟನೆಯನ್ನು ತಿಳಿದು ಸಂಬಂಧಿಸಿದ ಪರೀಕ್ಷಾ ಸಿಬ್ಬಂದಿಯವರಿಗೆ ನೋಟಿಸ್ ಸಹ ನೀಡಲಾಗಿದೆ ಮತ್ತು ಅಲ್ಲಿ ಯಾವುದೇ ರೀತಿಯ ಪರೀಕ್ಷೆಯ ಅಚಾತುರ್ಯ ಸಂಭವಿಸಿಲ್ಲ ಎಂದು ಬಿಇಒ ಹಿರೇಮಠ ಅವರು  ಪ್ರತಿಕ್ರಿಯಿಸಿದರು. 

ಪರೀಕ್ಷೆಯನ್ನು ಮಂಡಳಿ ನಿಯಮವಂತೆ ಕಟ್ಟುನಿಟ್ಟಾಗಿ ಪಾರದರ್ಶಕವಾಗಿ ನಕಲು ರಹಿತವಾಗಿ ನಡೆಸಲು ಎಚ್ಚರಿಕೆ ನೀಡಲಾಗಿದು, ಪರೀಕ್ಷಾ ದಿನದಂದು ಮಾರ್ಗಾಧಿಕಾರಿಗಳಿಂದ ಪ್ರಶ್ನೆ ಪತ್ರಿಕೆಗಳನ್ನು ಪಡೆದು ಗೌಪತಿಯನ್ನು ಕಾಪಾಡಿಕೊಂಡು ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿ ಉತ್ತರ ಪತ್ರಿಕೆಗಳನ್ನು ಮಾರ್ಗ ಅಧಿಕಾರಿಗಳ ಮೂಲಕ ಎಸ್ಕಾರ್ಟ್‌ ವ್ಯವಸ್ಥೆಯೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ ತಲುಪಿಸಲು ಕಟ್ಟುನಿಟ್ಟಿನ ಸೂಚನೆಯನ್ನು ನೀಡಲಾಗಿದೆ ಎಂದು ಬಿಇಒ ಅವರು ಸ್ಪಸ್ಟಪಡಿಸಿದರು.