ಬ್ಯಾಂಕು- ಗ್ರಾಹಕರ ಮಧ್ಯ ವಿಶ್ವಾಸದ ಬಾಂಧವ್ಯ ಇರಲಿ: ಶ್ರೀಗಳು
There should be a relationship of trust between banks and customers: Sir
ಸಿಂದಗಿ 21: ಸಾಲವನ್ನು ಉಂಬುವಾಗ ಹಾಲು ಜೇನು ಸವಿದಂತೆ ಸಾಲಗಾರರು ಸಾಲವನ್ನು ಕೇಳಿದಾಗ ಪಕ್ಕೆಲಬು ಮುರಿದಂತೆ ಸರ್ವಜ್ಞ ಎಂಬಂತೆ ಗ್ರಾಹಕರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದರೆ ಬ್ಯಾಂಕುಗಳು ಅಭಿವೃದ್ಧಿಯಾಗುವುದಲ್ಲದೆ ಗ್ರಾಹಕರ ಆರ್ಥಿಕ ಸಬಲತೆಯು ಹೆಚ್ಚುತ್ತದೆ ಎಂದು ಡಾ ಪ್ರಭು ಸಾರಂಗದೇವ ಶಿವಾಚಾರ್ಯರು ಹೇಳಿದರು.
ಪಟ್ಟಣದ ಅನುಗೃಹ ಕಲ್ಯಾಣ ಮಂಟಪದಲ್ಲಿ ದಿ.ಪಟ್ಟಣದ ಸಹಕಾರಿ ಬ್ಯಾಂಕ ನಿ 61ನೇ ವಾರ್ಷಿಕ ಸಭೆಯ ಸಾನಿದ್ಯವಹಿಸಿ ಮಾತನಾಡಿ, ಜಗತ್ತಿನಲ್ಲಿ ಅನೇಕ ಬ್ಯಾಂಕುಗಳು ಹುಟ್ಟಿಕೊಳ್ಳುತ್ತವೆ ವಿಶ್ವಾಸ ಕಳೆದುಕೊಂಡು ಮುಚ್ಚಿಕೊಂಡಿವೆ. ಕಾರಣ ಬ್ಯಾಂಕು ಮತ್ತು ಗ್ರಾಹಕರ ಮಧ್ಯ ವಿಶ್ವಾಸದ ಬಾಂಧವ್ಯ ಇರಬೇಕು. ಈ ನಾಡಿನಲ್ಲಿ ಜನರ ಅಪೇಕ್ಷೆ ಮೇರೆಗೆ ಬ್ಯಾಂಕುಗಳು ಅಭಿವೃದ್ಧಿಗೆ ಸಹಕಾರಿಯಾಗಿವೆ ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಅಶೋಕ ಮನಗೂಳಿ ಮಾತನಾಡಿ, ಸಹಕಾರಿ ಸಂಘಗಳು ಜನರ ಆರ್ಥಿಕ ಸಬಲತೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿವೆ. ಇಂದು ಬ್ಯಾಂಕುಗಳನ್ನು ಕಟ್ಟುವುದು ಎಂದರೆ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಸೇತುವೆಯಾಗಿ ಪ್ರಾಮಾಣಿಕ ಸೇವೆ ಮಾಡುವ ಮೂಲಕ ಬ್ಯಾಂಕಿನ ಆರ್ಥಿಕ ಸಬಲತೆಯನ್ನು ಹೆಚ್ಚಿಸುವುದಲ್ಲದೆ ಗ್ರಾಹಕರ ಒಡನಾಟ ಹೆಚ್ಚುತ್ತದೆ. ರಾಜ್ಯದಲ್ಲಿ ಹುಟ್ಟಿಕೊಂಡಿರುವ 268 ಸಹಕಾರಿ ಸಂಘಗಳು ಸಣ್ಣ ಸಣ್ಣ ವ್ಯಾಪಾರೊಂದಿಗೆ ಅತ್ಯತ್ತಮ ಬಾಂದವ್ಯ ಇಟ್ಟುಕೊಂಡು ಸಹಕಾರದಿಂದ ನಡೆದಿದ್ದಾರೆ ಸಹಕಾರಿ ರಂಗವನ್ನು ಕಟ್ಟಿಬೆಳೆಸಿದ ಕಣಗನಾಳ ಸಹಕಾರಿ ದುರೀಣ ಸಿದ್ದಲಿಂಗಪ್ಪ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷ ಶರಣಪ್ಪ ವಾರದ ಮಾತನಾಡಿ, ಕಳೆದ ವಾರ್ಷಿಕ ಸಭೆಯಲ್ಲಿ ಎಟಿಎಂ ಪ್ರಾರಂಭಿಸುವ ಪ್ರಸ್ತಾವನೆ ಬಂದಿತ್ತು ಆದರೆ ಇಂದು ಪೊನ್ ಪೇ, ಪೆಟಿಎಂ ಸೇರಿದಂತೆ ಅನೇಕ ಸೌಲಭ್ಯಗಳು ಬಂದಿರುವುದರಿಂದ ಎಟಿಎಂ ನಡೆಯುವ ದುಸ್ತರದ ಸಂಗತಿ ಕಾರಣ ಎನ್‌ಎಫ್‌ಟಿ ಸೌಲಭ್ಯ ಜಾರಿಗೆ ತರಲಾಗಿದ್ದು. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದ ಅವರು, ರೂ. 50 ಲಕ್ಷವಿದ್ದ ಓಡಿ ಲೋನ್ ರೂ. 1 ಕೋಟಿಗೆ ಏರಿಸಲಾಗಿದೆ. ಪ್ರತಿಯೊಂದು ಹಂತದಲ್ಲಿ ಮೂಂಚೂಣಿಯಲ್ಲಿದೆ ಸನ್ 2025-26ನೇ ಸಾಲಿನಲ್ಲಿ ರೂ 1,01,45,481 ನಿವ್ಹಳ ಲಾಭದೊಂದಿಗೆ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಬ್ಯಾಂಕ ಪ್ರಾರಂಭವಾಗಿ 61 ವರ್ಷಗಳು ಗತಿಸಿವೆ ಇಲ್ಲಿಯವರೆಗೆ ಮಹಿಳೆಯರಿಗೆ ಅಧ್ಯಕ್ಷಸ್ಥಾನ ನೀಡುವಲ್ಲಿ ವಿಫಲವಾಗಿದೆ. ಗ್ರಾಹಕರಿಗೆ ಸಾಲ ನೀಡುವಲ್ಲಿ ಹಿಂದೇಟು ಹಾಕುತ್ತ ತಾರತಮ್ಯ ವೆಸಗುತ್ತಿದ್ದಾರೆ ಬಡವರು ಜೀವನ ಮಾಡಬಾರದೇ ಇದು ಉಳ್ಳವರ ಬ್ಯಾಂಕು ಆಗಿದೆ. ಹಾಗಿದ್ದರೆ ನಿಮ್ಮ ನಿಮ್ಮಲ್ಲೆ ಲೋನ್ ಹಾಕಿಕೊಂಡು ಬಣಜಿಗ ಬ್ಯಾಂಕು ಎಂದು ಸಾಬೀತು ಪಡಿಸಿ ಎಂದು ಸಭೆಯಲ್ಲಿ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದರು.
ಬಸವರಾಜ ಕಮತಗಿ, ಮಹದೇವಿ ಬಮ್ಮಣ್ಣಿ, ಮಹಾದೇವಿ ಪಟ್ಟಣಶೆಟ್ಟಿ, ರವಿಕುಮಾರ ನಾಗೂರ, ಲಕ್ಷ್ಮಣ ದೊಡಮನಿ, ಡಾ.ವಿಜಯಕುಮಾರ ವಾರದ, ಷನ್ಮುಖಪ್ಪ ಸಂಗಮ, ಸಂತೋಷ ಪೂಜಾರಿ,ಸಿದ್ಲಿಂಗಪ್ಪ ವಡ್ಡೋಡಗಿ,ಸುರೇಶಬಾಬು ಜೋಗುರ, ಚನ್ನಮಲ್ಲಪ್ಪ ಶಹಾಪುರ, ಶಾಂತವೀರ ಮಣೂರ ವೇದಿಕೆ ಮೇಲಿದ್ದರು.
ಬ್ಯಾಂಕಿನ ಉಪಾಧ್ಯಕ್ಷ ಪ್ರಕಾಶ ಕೋರಿ ಸ್ವಾಗತಿಸಿ ವಾರ್ಷಿಕ ವರದಿ ಓದಿದರು. ಸಿಇಓ ಬಿ.ಬಿ.ದೇವೂರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 