ನಿರ್ದೇಶಕ ಪ್ರೇಮ್ ಅವರ ಕೆಡಿ ದಿ ಡೆವಿಲ್ ಚಿತ್ರದ ಅಶ್ಲೀಲ ಚಿತ್ರ ಗೀತೆಗೆ ತೀಕ್ಷ್ಣ ಹಾಗೂ ತೀವ್ರ ಪ್ರತಿರೋಧ

ನಿರ್ದೇಶಕ ಪ್ರೇಮ್ ಅವರ ಕೆಡಿ ದಿ  ಡೆವಿಲ್ ಚಿತ್ರದ ಅಶ್ಲೀಲ ಚಿತ್ರ ಗೀತೆಗೆ ತೀಕ್ಷ್ಣ ಹಾಗೂ ತೀವ್ರ ಪ್ರತಿರೋಧ  There is strong and intense opposition to the obscene song in director Prem's film KD The Devil.


ಕೊಪ್ಪಳ 18:  ನಿರ್ದೇಶಕ ಪ್ರೇಮ್ ಅವರ ಕೆ ಡಿ ಡೆವಿಲ್ ಚಿತ್ರದ ಅಶ್ಲೀಲ ಚಿತ್ರ ಗೀತೆಗೆ ತೀಕ್ಷ್ಣ ಹಾಗೂ ತೀವ್ರ ಪ್ರತಿರೋಧ ನಿರ್ದೇಶಕ ಪ್ರೇಮ್ ರ "ಕೆಡಿ ದಿ ಡೆವಿಲ್" ಚಿತ್ರದ "ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ ಎಂಬ ಹಾಡು ಸಭ್ಯತೆಯ ಚೌಕಟ್ಟು ಮುರಿದು, ನಿರ್ದೇಶಕರು ತಮ್ಮ ಸಾಮಾಜಿಕ ಬೇಜವಾಬ್ದಾರಿತನವನ್ನು ಪ್ರದರ್ಶಿಸಿದ್ದಾರೆ. ಇದು ಬಹಳಷ್ಟು ಪ್ರತಿರೋಧ ಹಾಗೂ ವಿವಾದಗಳನ್ನು ಹುಟ್ಟುಹಾಕಿದೆ. ಇಂತಹ ಗೀತಾ ಸಾಹಿತ್ಯವು ಕೇವಲ ಅಶ್ಲೀಲತೆಯಿಂದ ಕೂಡಿದ್ದಲ್ಲದೆ ಸಮಾಜದಲ್ಲಿ ಮಹಿಳೆಯರನ್ನು ಭೋಗದ ವಸ್ತು ಎಂಬ ಪರಿಕಲ್ಪನೆಯಿಂದ ಚಿತ್ರಿಸಲಾಗಿದೆ. ಕಲೆ, ಸಾಹಿತ್ಯ ಕೇವಲ ಕಲೆಗಾಗಿ ಅಲ್ಲ ಬದಲಿಗೆ ಸಮಾಜಕ್ಕಾಗಿ ಎಂಬ ತಾತ್ಪರತೆಯನ್ನು ಗಾಳಿಗೆ ತೂರಿದ್ದಾರೆ.

ಈಗಾಗಲೇ ಸಾಮಾಜಿಕ ಜಾಲತಾಣ ಮಾಧ್ಯಮಗಳಿಂದ ಪ್ರೇರಿತರಾಗಿ ಮೌಲ್ಯ ಆದರ್ಶಗಳನ್ನೇ ಕಳೆದುಕೊಂಡು, ವಿಕೃತತೆ ಕ್ರೌರ್ಯ ಹಾಗೂ ಹಿಂಸಾಪ್ರವೃತ್ತಿಗೆ ಬಲಿಯಾಗುತ್ತಿರುವ ಸಮಾಜದಲ್ಲಿ ಇಂತಹ ಕೀಳು ಅಭಿರುಚಿಯಿಂದ ಕೂಡಿದ ಹಾಡು ಇನ್ನಷ್ಟು ಪ್ರಚೋದನಕಾರಿಯಾಗಿ ತಪ್ಪು ದಾರಿ ತುಳಿಯಲು ಪ್ರೇರೇಪಿಸುವಂತಿದೆ. ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳು ಹೆಚ್ಚುತ್ತಿರುವ ಇಂತಹ ಸಂಧರ್ಭದಲ್ಲಿ ಹೆಣ್ಣನ್ನು ಬಳಸಿ ಬಿಸಾಕುವ, ಮೋಜಿನ ವಸ್ತುವಿನಂತೆ ಬಿಂಬಿಸುವ ಅಶ್ಲೀಲ ಜಾಹೀರಾತು, ಸಿನಿಮಾ ಸಾಹಿತ್ಯವು ಮನುಷ್ಯನಲ್ಲಿ ಸೂಕ್ಷ್ಮ ಸಂವೇದನಗಳನ್ನು ನಾಶಗೊಳಿಸಿ, ಮೃಗೀಯರನ್ನಾಗಿಸಿ ಅಪರಾಧಗಳನ್ನು ಹೆಚ್ಚಿಸುತ್ತದೆ.

ಉದಾತ್ತವಾದ ಮೌಲ್ಯ, ನೀತಿ ಪ್ರಜ್ಞೆ ಬೆಳೆಸುವ ಬದಲು ಸಾಂಸ್ಕೃತಿಕ ಅಧಃಪತನಕ್ಕೆ ಪ್ರಜ್ಞಾವಂತ ನಾಗರಿಕರು ಪ್ರತಿಕ್ರಿಯೆಸಬೇಕಾಗಿರುವುದು ಇಂದಿನ ತುರ್ತು ಅವಶ್ಯಕತೆ. ಈ ನಿಟ್ಟಿನಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್) ರಾಜ್ಯ ಸಮಿತಿಯು ನಿರ್ದೇಶಕ ಪ್ರೇಮ್ ಅವರ ಇಂತಹ ನಡೆಯನ್ನು ಖಂಡಿಸುತ್ತದೆ. ಕೆ ಡಿ - ದಿ ಡೆವಿಲ್ ಸಿನಿಮಾವು ಇನ್ನು ಸೆನ್ಸಾರ್ ಮಂಡಳಿಯಿಂದ ಸರ್ಟಿಫೈ ಆಗುವ ಪ್ರಕ್ರಿಯೆಯಲ್ಲಿರುವಾಗಲೇ ಇದರ ಹಾಡೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ಸೆನ್ಸಾರ್ ಮಂಡಳಿಯ ಕುರಿತು ಇರುವ ಲೂಪೋಲನ್ನು ತೋರಿಸುತ್ತದೆ.

ಇದಕ್ಕೂ ಮುಂಚೆ ಬಿಡುಗಡೆಯಾದಟಾಕ್ಸಿಕ್ ಸಿನಿಮಾದ ಟೀಸರ್ನಲ್ಲಿ ನಟ, ನಟಿಯರೊಂದಿಗೆ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿರುವುದು ಮತ್ತು ಅತಿಯಾದ ಹಿಂಸಾಚಾರ ಪ್ರದರ್ಶನದ ವಿರುದ್ಧವೂ ಸಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಇಂತಹ ಟೀಸರ್ನಲ್ಲಿ ಕಂಡುಬಂದ ದೃಶ್ಯಗಳನ್ನು ಗಮನಿಸಿದರೆ, ಇಂತಹ ಸಿನಿಮಾಗಳಿಗೆ ಚಿತ್ರಮಂದಿರಗಳಲ್ಲಿ ಎ ಸರ್ಟಿಫಿಕೇಟ್ ಇದ್ದರೆ ಮಕ್ಕಳನ್ನು ಪ್ರವೇಶಿಸದಂತೆ ತಡೆಯಲಾಗುತ್ತದೆ. ಆದರೆ ಯೂಟ್ಯೂಬ್ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಟೀಸರ್ಗಳಿಗೆ ಯಾವುದೇ ಮಾರ್ಗಸೂಚಿಗಳಿಲ್ಲದಿರುವುದು ಬಹುದೊಡ್ಡ ಸಮಸ್ಯೆಯಾಗಿದೆ.

ಸೆನ್ಸಾರ್ ಮಂಡಳಿ ಟೀಸರ್ಗಳಿಗೂ ಸ್ಪಷ್ಟ ಮಾರ್ಗಸೂಚಿಗಳನ್ನು ರೂಪಿಸಬೇಕಿದೆ. ಹಲ್ಲುಕ್ಕಿತ್ತ ಹಾವಿನಂತಾಗಿರುವ ಸೆನ್ಸಾರ್ ಮಂಡಳಿಯು ಅಜಾಗರುಕತೆಯ ಪ್ರಜ್ಞಾಹೀನ ಸ್ಥಿತಿಯಿಂದ ಎಚ್ಚೆತ್ತು, ಜವಾಬ್ದಾರಿಯುತ ಕೆಲಸವನ್ನು ಕಟ್ಟುನಿಟ್ಟಾಗಿ ನಿರ್ವಹಿಸಬೇಕು ಮತ್ತು ಕೊಡಲೇ ಇಂತಹ ಸಾಹಿತ್ಯವಿರುವ ಹಾಡು ಮತ್ತು ಸಿನಿಮಾ ತುಣುಕುಗಳನ್ನು ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ತೆಗೆದು ಹಾಕಬೇಕೆಂದು ಮತ್ತು ಈ ಕುರಿತು ಸರ್ಕಾರವು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೆಯೇ ಯಾವುದೇ ಸಿನಿಮಾ ಸಾಹಿತ್ಯಗಳನ್ನು , ಸಿನಿಮಾ ತುಣುಕು ಮತ್ತು ಹಾಡುಗಳನ್ನು ಸೆನ್ಸಾರ್ ಮಂಡಳಿಯಿಂದ ಸರ್ಟಿಫೈ ಪಡೆದ ನಂತರವೇ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಬೇಕು ಎಂಬ ಕಾನೂನನ್ನು ತರಬೇಕು.

ಆ ಕಾನೂನು ಜಾರಿ ಇದ್ದಲ್ಲಿ , ಕಾನೂನನ್ನು ಮೀರಿ ನಡೆದುಕೊಳ್ಳುವವರು ಯಾರೇ ಆದರೂ ಅವರಿಗೆ ಕಾನೂನು ರೀತಿಯ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಂಋಖಖ ಆಗ್ರಹಿಸುತ್ತದೆ. ಮಹಿಳೆಯರಿಗೆ ನೈಜ ಘನತೆ, ಗೌರವ ಖಾತ್ರಿಪಡಿಸುವ ಸೂಕ್ಷ್ಮ ಸಂವೇದನೆಯನ್ನು ಹಾಗೂ ಲಿಂಗ ಸಮಾನತೆಯ ಪ್ರಜಾ ತಾಂತ್ರಿಕ ಮೌಲ್ಯಗಳನ್ನು ಸ್ಥಾಪಿಸಲು ಕಾರ್ಯಪ್ರವೃತ್ತರಾಗಬೇಕೆಂದು ಸೂಚಿಸುತ್ತದೆ.