ಜಿಲ್ಲೆಯಲ್ಲಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಕೊರತೆ ಇಲ್ಲ: ಜಿಲ್ಲಾಧಿಕಾರಿ ಸ್ನೇಹಲ್ ಆರ್‌.

ಜಿಲ್ಲೆಯಲ್ಲಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಕೊರತೆ ಇಲ್ಲ: ಜಿಲ್ಲಾಧಿಕಾರಿ ಸ್ನೇಹಲ್ ಆರ್‌.   There is no shortage of domestic gas cylinders in the district: DC Snehal R.

ಲೋಕದರ್ಶನ ವರದಿ 

ಧಾರವಾಡ 24: ಜಿಲ್ಲೆಯಲ್ಲಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಕೊರತೆ ಇಲ್ಲ. ಬುಕ್ಕಿಂಗ್ ಮಾಡಿದವರಿಗೆ ಎರಡು ಮೂರು ದಿನ ವಿಳಂಬವಾದರೂ ನಿಯಮಾನುಸಾರ ಬುಕ್ಕಿಂಗ್ ಮಾಡಿದ ಎಲ್ಲರಿಗೂ ಗ್ಯಾಸ್ ಸಿಲಿಂಡರ್ ಪೂರೈಸಲಾಗುತ್ತಿದೆ. ಗ್ರಾಹಕರಲ್ಲಿ ಯಾವುದೇ ಆತಂಕ ಬೇಡ. ವದಂತಿಗಳಿಗೆ ಒಳಗಾಗಿ ಅಗತ್ಯವಿಲ್ಲದಿದ್ದರೂ ಅನವಶ್ಯಕವಾಗಿ ಬುಕ್ಕಿಂಗ್ ಮಾಡುವುದರಿಂದ ವಿತರಣೆಗೆ ಕಾರ್ಯಒತ್ತಡ ಉಂಟಾಗುತ್ತದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್‌. ಅವರು ಹೇಳಿದರು.   

ಅವರು ಇಂದು (ಮಾ.24) ಮಧ್ಯಾಹ್ನ ಧಾರವಾಡ ನಗರ ಪ್ರದೇಶದ ಶ್ರೀ ರಾಮ ಎಚ್‌ಪಿ ಗ್ಯಾಸ್ ಏಜನ್ಸಿಗೆ ಅನೀರೀಕ್ಷಿತ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಗ್ಯಾಸ್ ಏಜೆನ್ಸಿಯ ಮಾಲೀಕರನ್ನು ಉದ್ದೇಶಿಸಿ ಗ್ಯಾಸ್ ಸಿಲೆಂಡರ ವಿತರಣೆ ಮತ್ತು ಹಂಚಿಕೆ ಕುರಿತು ವಿಚಾರಿಸಿದರು.  

ತುಂಬಿದ ಗ್ಯಾಸ್ ಸಿಲೆಂಡರಗಳ ಸರಬರಾಜಿನಲ್ಲಿ ಯಾವುದೇ ಸಮಸ್ಯೆಗಳು ಇರುವುದಿಲ್ಲ. ಸಾರ್ವಜನಕರಿಗೆ ಗ್ಯಾಸ್ ವಿತರಣೆಯಲ್ಲಿ ಯಾವುದೇ ತೊಂದರೆಗಳು ಕಂಡುಬಂದಿರುವುದಿಲ್ಲ ಎಂದು ಮಾಲೀಕರು ತಿಳಿಸಿದರು. 

ಧಾರವಾಡ ಜಿಲ್ಲೆಯಲ್ಲಿ ಇವತ್ತು (ಮಾ.24) ಒಟ್ಟು 16,822 ಗೃಹಬಳಕೆ ಸಿಲೆಂಡರಗಳು ದಾಸ್ತಾನು ಇವೆ. ಪ್ರತಿದಿನ 10,000 ಸಿಲೆಂಡರಗಳನ್ನು ಸಾರ್ವಜನಿಕರಿಗೆ ವಿತರಣೆ ಮಾಡಲಾಗುತ್ತದೆ. ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆಗಳು ಆಗದ ರೀತಿಯಲ್ಲಿ ಜಿಲ್ಲಾಡಳಿತವು ಹಾಗೂ ಆಹಾರ ಇಲಾಖೆ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ಯಾವುದೇ ರೀತಿಯಲ್ಲಿ ಆತಂಕಕ್ಕೆ ಒಳಗಾಗಬಾರದೆಂದು ಕೋರಿದೆ.  

ಸಾರ್ವಜನಿಕರು ಗೃಹಬಳಕೆ ಸಿಲೆಂಡರ್‌ಗಳನ್ನು ವಾಣಿಜ್ಯ ಬಳಕೆಗೆ ಉಪಯೋಗಿಸಬಾರದು. ಅಲ್ಲದೇ ಸಿಲೆಂಡರ್‌ಗಳನ್ನು ಅನಧಿಕೃತವಾಗಿ ಸಂಗ್ರಹಿಸಿ ಒಂದು ಸಿಲೆಂಡರ್‌ನಿಂದ ಮತ್ತೊಂದು ಸಿಲೆಂಡರ್‌ಗೆ ವರ್ಗಾಯಿಸುವದು ಐಡಣಜಜಿಜಜ ಕಜಣಡಿಠಜಣಟ ಉಛಿ (ಖಇಉಗಐಂಖಿಋಓ ಓಈ ಖಗಕಕಐಙ ಂಓಆ ಆಋಖಿಖಗಃಗಖಿಋಓ) ಓಡಿಜಜಡಿ 2000 ರನ್ವಯ ಅಪರಾಧವಾಗಿರುತ್ತದೆ. ಅಂತಹ ಪ್ರಕರಣಗಳು ಕಂಡುಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವದು ಹಾಗೂ ಅಂತಹ ಅನಧಿಕೃತ ಚಟುವಟಿಕೆ ಕಂಡುಬಂದಲ್ಲಿ ತಮ್ಮ ಕಾರ್ಯವ್ಯಾಪ್ತಿಗೆ ಸಂಬಂಧಿಸಿದ ಆಹಾರ ನೀರೀಕ್ಷಕರಿಗೆ ತುರ್ತಾಗಿ ಮಾಹಿತಿ ನೀಡಲು ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.  

ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಸಂಬಂಧ ಸರ್ಕಾರವು ಹೊಸ ಮಾರ್ಗಸೂಚಿ ಹೊರಡಿಸಿದೆ. ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ಹೊಂದಿರುವ ಫಲಾನುಭವಿಗಳು 45 ದಿನಕ್ಕೊಮ್ಮೆ ಮಾತ್ರ ಸಿಲಿಂಡರ್ ಬುಕ್ ಮಾಡಬಹುದಾಗಿದ್ದು, ಉಜ್ವಲ ಯೋಜನೆಯೇತರರು 25 ದಿನಕ್ಕೊಮ್ಮೆ ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್‌. ಅವರು ಹೇಳಿದರು.  

ಸಾರ್ವಜನಿಕರು ಯಾವುದೇ ರೀತಿಯ ಗೊಂದಲ ಅಥವಾ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ ಇಲ್ಲದಿದ್ದರೂ, ಕೆಲವರು ಅನಾವಶ್ಯಕವಾಗಿ ಮುಂಗಡ ಬುಕ್ಕಿಂಗ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ಸರಬರಾಜಿನ ಮೇಲಿನ ಒತ್ತಡ ಹೆಚ್ಚಾಗುತ್ತಿದ್ದು, ಇತರ ಗ್ರಾಹಕರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಅಗತ್ಯವಿರುವಾಗ ಮಾತ್ರ ಗ್ಯಾಸ್ ಬುಕ್ ಮಾಡುವಂತೆ ಜಿಲ್ಲಾಧಿಕಾರಿಗಳು ವಿನಂತಿಸಿದರು. 

ಜಿಲ್ಲೆಯ ಗ್ಯಾಸ್ ಸರಬರಾಜು ಸ್ಥಿತಿಗತಿ ಕುರಿತು ಮಾಹಿತಿ ನೀಡಿದ ಅವರು, ಮೊದಲು ಸಾಮಾನ್ಯವಾಗಿ ಪ್ರತಿ ಗ್ಯಾಸ್ ಸಿಲಿಂಡರ್ ಏಜನ್ಸಿ ವಿತರಕರಿಂದ ಪ್ರತಿದಿನ ಸರಾಸರಿ 400 ರಿಂದ 450 ಸಿಲಿಂಡರ್‌ಗಳನ್ನು ವಿತರಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಪ್ರಮಾಣವು 350 ರಿಂದ 360 ಸಿಲಿಂಡರ್‌ಗಳನ್ನು ವಿತರಿಸಲಾಗುತ್ತಿದೆ. ಈ ಹಿನ್ನೆಲೆ, ಗ್ಯಾಸ್ ಬುಕ್ ಮಾಡಿದ ನಂತರ ವಿತರಣೆ ಆಗಲು 5 ರಿಂದ 6 ದಿನಗಳಷ್ಟು ವಿಳಂಬವಾಗುತ್ತಿರುವುದು ಕಂಡುಬಂದಿದೆ ಎಂದು ಅವರು ಹೇಳಿದರು.  

ಗ್ಯಾಸ್ ಬಳಕೆಯನ್ನು ಸಮರ​‍್ಕವಾಗಿ ನಿಯಂತ್ರಿಸಲು ಮತ್ತು ಎಲ್ಲರಿಗೂ ಸಮಾನವಾಗಿ ಬೇಡಿಕೆಗೆ ಅನುಗುಣವಾಗಿ ಸಿಲಿಂಡರ್ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್‌. ಮನವಿ ಮಾಡಿದರು.  

ಸರ್ಕಾರದ ಹೊಸ ನಿಯಮವು ಗ್ಯಾಸ್ ಸರಬರಾಜಿನಲ್ಲಿ ಸಮತೋಲನ ಕಾಪಾಡುವ ಉದ್ದೇಶದಿಂದ ಜಾರಿಗೆ ತರಲಾಗಿದ್ದು, ಜನರು ಜವಾಬ್ದಾರಿಯುತವಾಗಿ ನಡೆದುಕೊಂಡರೆ ಯಾವುದೇ ರೀತಿಯ ಕೊರತೆ ಉಂಟಾಗುವುದಿಲ್ಲ ಎಂದು ಅವರು ಹೇಳಿದರು. 

ಗೃಹಬಳಕೆ ಸಿಲಿಂಡರ್ ದುರಪಯೋಗವಾಗದಂತೆ ಎಚ್ಚರಿಕೆವಹಿಸಿ: ಶ್ರೀ ರಾಮ ಗ್ಯಾಸ್ ಏಜನ್ಸಿ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಸ್ನೇಹಲ್ ಆರ್‌. ಅವರು ಮಾತನಾಡಿ, ಗ್ರಾಹಕರಿಗೆ ಸಿಲಿಂಡರ್ ಬಳಕೆಯ ಕುರತು ಸರಿಯಾದ ಮಾಹಿತಿ ನೀಡಬೇಕು. ಮತ್ತು ಗೃಹಬಳಕೆಯ ಸಿಲಿಂಡರ್‌ಗಳು ದುರಪಯೋಗವಾಗದಂತೆ ಎಚ್ಚರಿಕೆ ವಹಿಸಬೇಕು. ಗ್ಯಾಸ್ ಸಿಲಿಂಡರ್ ವಿತರಣೆಯಲ್ಲಿ ಮೊದಲು ಬುಕ್ಕಿಂಗ್ ಮಾಡಿದವರಿಗೆ ಮೊದಲ ಆದ್ಯತೆ ನೀಡಬೇಕು. ಸಾರ್ವಜನಿಕರಲ್ಲಿ ಯಾವುದೇ ರೀತಿಯ ಗೊಂದಲ ಉಂಟಾಗದಂತೆ ಎಚ್ಚರಿಕೆ ವಹಿಸಬೇಕೆಂದು ಸಿಬ್ಬಂದಿಗಳಿಗೆ ಸೂಚಿಸಿದರು.  

ಸಿಲಿಂಡರ್ ವಿತರಣೆಯಲ್ಲಿ ಯಾವುದೇ ಉಳಿಕೆ ಮಾಡದೇ ನಿಯಮಾನುಸಾರ ಬುಕ್ಕಿಂಗ್ ಮಾಡಿದ ಎಲ್ಲರಿಗೂ ವಿತರಿಸಬೇಕು. ವಿಳಂಬವಿದ್ದಲ್ಲಿ ಗ್ರಾಹಕರಿಗೆ ತಿಳಿಸಬೇಕು. ಸಕಾಲಕ್ಕೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಮೂಲಕ ಗ್ರಾಹಕರು ಯಾವುದೇ ಗೊಂದಲಗಳಿಗೆ ಒಳಗಾಗದಂತೆ ಮುನ್ನಚ್ಚರಿಕೆ ವಹಿಸಬೇಕೆಂದು ಶ್ರೀ ರಾಮ ಏಜನ್ಸಿಯ ಮಾಲೀಕರಿಗೆ ಮತ್ತು ಸಿಬ್ಬಂದಿಗಳಿಗೆ ಸೂಚಿಸಿದರು.  

ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆಯ ಜಂಟಿ ನಿರ್ದೇಶಕ ವಿನೋದಕುಮಾರ ಹೆಗ್ಗಳಗಿ, ಶ್ರೀ ರಾಮ ಏಜನ್ಸಿಯ ಮಾಲೀಕ ಆನಂದ ಹಾಗೂ ಸಿಬ್ಬಂದಿಗಳು, ಗ್ರಾಹಕರು, ಸಾರ್ವಜನಿಕರು ಇದ್ದರು.