ಹಾವೇರಿ: ಸಾರ್ವಜನಿಕರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಲು ಹಾವೇರಿ ತಾಲೂಕಿನಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ ಕಾನೂನು ಸಾಕ್ಷರತಾ ರಥಸಂಚಾರ ಹಾಗೂ ಜನತಾ ನ್ಯಾಯಾಲಯ ಕಾರ್ಯಕ್ರಮಗಳಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಎಸ್.ಎಚ್.ರೇಣುಕಾದೇವಿ ಅವರು ಚಾಲನೆ ನೀಡಿದರು.
ಶುಕ್ರವಾರ ಬೆಳಿಗ್ಗೆ ನಗರದ ಜಿಲ್ಲಾ ನ್ಯಾಯಾಲಯಗಳ ಆವರಣದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪಯರ್ಾಯ ವ್ಯಾಜ್ಯಗಳ ಪರಿಹಾರ ಕೇಂದ್ರ ಕಟ್ಟಡದ ಆವರಣದಲ್ಲಿ ಹಸಿರು ನಿಶಾನೆ ಮೂಲಕ ಚಾಲನೆ ನೀಡಿದರು.
ಹಾವೇರಿ ನಗರದ ವಿವಿಧ ಕಾಲೇಜುಗಳಲ್ಲಿ ಇಜಾರಿಲಕಮಾಪೂರ, ಕರ್ಜಗಿ, ನೆಗಳೂರು, ಹೊಸರಿತ್ತಿ, ಕನವಳ್ಳಿ, ಕೆರೆಮತ್ತಿಹಳ್ಳಿ, ಕಾಟೇನಹಳ್ಳಿ ಗ್ರಾಮಗಳಲ್ಲಿ ಕಾನೂನಿನ ಅರಿವಿನ ಜೊತೆಗೆ ಜನತಾ ನ್ಯಾಯಾಲಯಗಳಲ್ಲಿ ಮೋಟಾರು ವಾಹನ ಅಪಘಾತ ಪರಿಹಾರದ ಪ್ರಕರಣಗಳು(ಒ.ಗಿ.ಅ.), ಭೂ ಸ್ವಾಧೀನ ಪ್ರಕರಣಗಳು ಮತ್ತು ಸ್ಥಳೀಯ ಸಂಸ್ಥೆಗಳ ಪರ ಮತ್ತು ವಿರೋಧ ದಾಖಲಾತಿ ಪ್ರಕರಣಗಳು, ಬ್ಯಾಂಕುಗಳಿಗೆ ಸಂಬಂಧಿಸಿದ ಪ್ರಕರಣಗಳು, ವೈವಾಹಿಕ ಅಥವಾ ಜೀವನಾಂಶ ಪ್ರಕರಣಗಳು, ಕಾನೂನಿನನ್ವಯ ರಾಜೀ ಆಗಬಹುದಾದ ಕ್ರಿಮಿನಲ್ ಪ್ರಕರಣಗಳು, ರಾಜೀ ಆಗಬಹುದಾದ ಎಲ್ಲ ತರಹದ ಎಲ್ಲ ಪ್ರಕರಣ ಕುರಿತಂತೆ ಜನತಾ ನ್ಯಾಯಾಲಯ ಜರುಗಲಿದೆ.
ಕಾನೂನು ಅರಿವು ಮುಖ್ಯ: ಕಾನೂನು ಸಾಕ್ಷರತಾ ರಥಯಾತ್ರೆ ಅಂಗವಾಗಿ ಮೊದಲ ಕಾರ್ಯಕ್ರಮ ಹಾವೇರಿ ನಗರದ ಹೊಸಮಠದ ಎಸ್.ಎಜೆ.ಎಂ. ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಪೆನ್ ವಕೀಲರಾದ ಎಂ.ಎಚ್.ವಾಲೀಕಾರ ಅವರು ಪೋಕ್ಸೋ ಕಾಯ್ದೆ 2012 ಹಾಗೂ ಸಂತ್ರಸ್ಥ ಪರಿಹಾರ ಯೋಜನೆ 2011 ಕುರಿತಂತೆ, ವಕೀಲರಾದ ಸಿ.ಜೆ.ನೆಗಳೂರು ಅವರು ಕೌಟುಂಬಿಕ ದೌರ್ಜನ್ಯ ಕಾಯ್ದೆ ಹಾಗೂ ಸಾಮಾನ್ಯ ಕಾನೂನು ಕುರಿತು ಹಾಗೂ ಆಶಾಕಿರಣ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಮುತ್ತುರಾಜ ಮಾದರ ಅವರು ಮಕ್ಕಳ ಹಕ್ಕುಗಳು ಮತ್ತು ಸಂರಕ್ಷಣೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಸಿ.ಸದಾನಂದಸ್ವಾಮಿ ಅವರು ಮಾತನಾಡಿ, ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಮೂಡಿದಾಗ ಅಪರಾಧಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ, ಉತ್ತಮ ಸಮಾಜ ನಿಮರ್ಾಣವಾಗುತ್ತದೆ. ದೇಶದ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ಹೇಳಿದರು.
ಕಾನೂನಿನ ತಿಳುವಳಿಕೆಯ ಕೊರತೆಯಿಂದ ಅಪರಾಧ ಘಟಿಸಿದರೆ ಅದಕ್ಕೆ ಕ್ಷಮೇ ಇಲ್ಲ. ಪ್ರತಿಯೊಬ್ಬ ನಾಗರಿಕನು ಸಾಮಾನ್ಯ ಕಾನೂನುಗಳನ್ನು ತಿಳಿದುಕೊಳ್ಳಬೇಕು. ಸಂವಿಧಾನದ ಆಶಯದಂತೆ ನಮ್ಮ ಹಕ್ಕುಗೊಳ ಜೊತೆಗೆ ಕರ್ತವ್ಯವನ್ನು ಅರಿಯಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಪಿ.ಬಿ.ವಿಜಯಕುಮಾರ ವಹಿಸಿದ್ದರು. ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯಕಾರ್ಯದಶರ್ಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆ.ಶ್ರೀವಿದ್ಯಾ, ಹೊಸಮಠದ ಶ್ರೀಗಳಾದ ಬಸವಶಾಂತ ಶ್ರೀಗಳು ಸಾನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯತ್ ಉಪಕಾರ್ಯದಶರ್ಿ ಜಿ.ಗೋವಿಂದ್ರಸ್ವಾಮಿ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಸಿ.ಪಾವಲಿ, ಕಾರ್ಯದಶರ್ಿ ಪಿ.ಎಂ.ಬೆನ್ನೂರ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿದರ್ೆಶಕ ಎಸ್.ಸಿ.ಪೀರಜಾದೆ, ಸಿಡಿಪಿಒ ಉಮಾ, ಪಿ.ಎಸ್.ಐ. ಉದಯ ಉಪಸ್ಥಿತರಿದ್ದರು.