ಜ್ಞಾನ ಯಜ್ಞಕ್ಕಿಂತ ಶ್ರೇಷ್ಠ ಯಜ್ಞವಿಲ್ಲ : ಡಾ.ಚನ್ನಸಿದ್ಧರಾಮ ಶ್ರೀ

ಮಹಾಲಿಂಗಪುರ 01: ಜ್ಞಾನ ಯಜ್ಞವೇ ಜಗತ್ತಿನ ಸರ್ವ ಯಜ್ಞಗಳಿಗಿಂತ ಶ್ರೇಷ್ಠ ಯಜ್ಞ ಎಂದು ಶ್ರೀಶೈಲ ಪೀಠದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು. 

ಸ್ಥಳೀಯ ರನ್ನಬೆಳಗಲಿಯ ಚಕ್ರಪುರವಾಸಿನಿ ಚಕ್ರೇಶ್ವರಿ ಜ್ಯೋತಿರ್ವಿಜ್ಞಾನ ಸಂಶೋಧನಾ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ನವರಾತಿ ಉತ್ಸವ ಹಾಗೂ ಮಹಾಕಾಳಿಕಾ ಭುವನೇಶ್ವರಿ ವನದ ಅಡಿಗಲ್ಲು ಸಮಾರಂಭದದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಯಜ್ಞಗಳಲ್ಲಿ ಬಹಿರಂಗ ಯಜ್ಞ ಮತ್ತು ಅಂತರಂಗ ಎಂಬ ಎರಡು ವಿಧಗಳಿವೆ, ಬಹಿರಂಗ ಯಜ್ಞಕ್ಕೆ ಬಾಹ್ಯ ಹವಿಸ್ಸು ನೀಡಿ ಆಸೆ, ಆಕಾಂಕ್ಷೆಗಳನ್ನು ಈಡೇರಿಕೊಳ್ಳಬಹುದು ಆದರೆ ಭಗವಂತ ಹಚ್ಚಿರುವ ಅಂತರಂಗದ ಆತ್ಮವೆಂಬ ಅಂತರಂಗ ಯಜ್ಞಕ್ಕೆ ಶಬ್ದ, ಸ್ಪರ್ಶ, ರೂಪ, ರಸ, ಗಂಧ ಎಂಬ ಪಂಚ ವಿಷಯಗಳ  ಹವಿಸ್ಸು ನೀಡುವುದೇ ಜ್ಞಾನ ಯಜ್ಞ. ಜ್ಞಾನ ಯಜ್ಞದ ಸಫಲತೆಯಿಂದ ಮಾನವ ಜನ್ಮ ಸಾರ್ಥಕ, ಶಿವರಾತ್ರಿ ಮತ್ತು ನವರಾತ್ರಿಗಳು ಶಿವಶಕ್ತಿ(ಶಿವಪಾರ್ವತಿ)ಯರ ಅಂದರೆ ಪರಮಾತ್ಮ ಮತ್ತು ಜೀವಾತ್ಮಗಳನ್ನು ಒಂದುಗೂಡಿಸುವ ಅವಕಾಶಗಳು. ನವರಾತ್ರಿ ಪ್ರಯುಕ್ತ ಡಾ.ರಮೇಶ ಶಾಸ್ತ್ರಿಗಳು ಮಾಡಿದ ಶ್ರಮ, ಸಂಕಲ್ಪ ಶ್ಲಾಘನೀಯ ಎಂದರು. 

ಪಾವನ ಸಾನಿಧ್ಯ ವಹಿಸಿ ಮಾತನಾಡಿದ ನಿಡಸೋಸಿ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಮನುಷ್ಯನ ಸರ್ವ ಸಂಕಷ್ಟಗಳಿಗೆ ಪರಿಹಾರವೇ ಧರ್ಮ. ಅಹಂಕಾರ ತ್ಯಜಿಸಿ, ದೇವರ ಮೇಲಿನ ದೃಢ ನಂಬಿಕೆ ಇಟ್ಟರೆ ಅಸಾಧ್ಯವಾದದ್ದೂ ಸಾಧ್ಯವಾಗುತ್ತದೆ.ಸಮಾಜ ಮತ್ತು ದೇಶ ಪರಿವರ್ತನೆಗಾಗಿ ಧಾರ್ಮಿಕ ಕಾರ್ಯಗಳು ಅಗತ್ಯ.ಆ ನಿಟ್ಟಿನಲ್ಲಿ  ಡಾ,ರಮೇಶ ಶಾಸ್ತ್ರಿಗಳ ಕಾರ್ಯ ಶ್ಲಾಘನೀಯ ಎಂದರು.ಸಂಸದ ಪಿ.ಸಿ.ಗದ್ದಿಗೌಡರ, ಶಾಸಕರಾದ ಸಿದ್ದು ಸವದಿ, ಜಗದೀಶ ಗುಡಗುಂಟಿ, ದುರ್ಯೋಧನ ಐಹೊಳೆ ಬಿಜೆಪಿ ಯುವ ಮುಖಂಡ ಅರುಣ ಕಾರಜೋಳ ಮಹಾಕಾಳಿಕಾ ಭುವನೇಶ್ವರಿ ವನದ ಶಂಕುಸ್ಥಾಪನೆ ನೆರವೇರಿಸಿದರು.ಕೊಣ್ಣೂರ ಕಲ್ಯಾಣ ಹೊರಗಿನ ಮಠದ ಡಾ.ವಿಶ್ವಪ್ರಭುದೇವ ಶಿವಾಚಾರ್ಯ ಮಹಾಸ್ವಾಮಿಗಳು, ಹುಕ್ಕೇರಿ ಕ್ಯಾರಗುಡ್ಡದ ಅಭಿನವ ಮಂಜುನಾಥ ಮಹಾರಾಜರು, ರನ್ನಬೆಳಗಲಿ ಶಿವಯೋಗಾಶ್ರಮದ ಸಿದ್ಧರಾಮ ಶಿವಯೋಗಿಗಳು, ಕರ್ನಾಟಕ ಜಾನಪದ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷೆ ಡಾ.ಮಂಜಮ್ಮ ಜೋಗತಿ, ಬೆಳಗಲಿ ಪಪಂ ಸದಸ್ಯ ಸಿದ್ದುಗೌಡ ಪಾಟೀಲ ಮಾತನಾಡಿದರು. 

ಂಮ್ಮಡದ ವಿರಕ್ತ ಮಠದ ಪ್ರಭು ಮಹಾಸ್ವಾಮೀಜಿ, ಕಡಕೋಳ ಎಂ.ಚಂದರಗಿಯ ವೀರಭದ್ರ ಶಿವಾಚಾರ್ಯ ಮಹಾಸ್ವಾಮೀಜಿ, ಹೊಸಯರಗುದ್ರಿ ಈರಲಿಂಗೇಶ್ವರ ಮಠದ ಸಿದ್ಧಪ್ರಭು ಶಿವಾಚಾರ್ಯ ಸ್ವಾಮೀಜಿ, ಕೆ.ಆರ್‌.ಮಾಚಪ್ಪನವರ, ಧರೆಪ್ಪ ಸಾಂಗ್ಲಿಕರ ಇತರರಿದ್ದರು. 

ಪಂಚಮಸಾಲಿ ಜಿಲ್ಲಾಧ್ಯಕ್ಷ ಧರೆಪ್ಪ ಸಾಂಗ್ಲಿಕರ ಸ್ವಾಗತಿಸಿ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಾವೇರಿ ಸರವಿ ಮತ್ತು ಸಂಗಡಿಗರು ಪ್ರಾರ್ಥಿಸಿ, ಪತ್ರಕರ್ತ ನಾರನಗೌಡ ಉತ್ತಂಗಿ ಮತ್ತು ಯೋಗಶಿಕ್ಷಕ ರಾಘವೇಂದ್ರ ನೀಲನ್ನವರ ನಿರೂಪಿಸಿದರು. 

ಮಂಗಳವಾರ ಬೆಳಿಗ್ಗೆ ಆಯುತ ಮಹಾಚಂಡಿಕಾ ಯಾಗ, ಜಾನಪದ ಕಲಾ ಸಂಸ್ಕೃತಿ ಉತ್ಸವ, ಜಂಬೂ ಸವಾರಿ, ಕುಂಭ ಮೇಳ, ಉಡಿ ತುಂಬುವ ಕಾರ್ಯ ಮುಂತಾದ ಕಾರ್ಯಗಳು ನಡೆದವು. 

ಡಾ.ರಮೇಶಕುಮಾರ ಶಾಸ್ತ್ರಿಜಿಯವರ ಕಾರ್ಯ ಶ್ಲಾಘಿಸಿ ಅವರ ಹೆಸರನ್ನು ಚಿದಾನಂದ ಮಹಾರಾಜರು ಎಂದು ಬದಲಾಯಿಸಿ ಇನ್ನು ಮುಂದೆ ಹಾಗೆಯೇ ಕರೆಯಲು ಧರ್ಮಸಭೆಯಲ್ಲಿ ಘೋಷಿಸಲಾಯಿತು.