ಇಬ್ಬರು ಶಾಸಕರ ಅಸಮಾಧಾನ ಇದೆ : ಸುರ್ಜೆವಾಲ ಅಸಮಾಧಾನ ಸರಿಪಡಿಸಲಿದ್ದಾರೆ : ಆರ್‌.ವಿ.ದೇಶಪಾಂಡೆ

ಇಬ್ಬರು ಶಾಸಕರ ಅಸಮಾಧಾನ ಇದೆ : ಸುರ್ಜೆವಾಲ ಅಸಮಾಧಾನ ಸರಿಪಡಿಸಲಿದ್ದಾರೆ : ಆರ್‌.ವಿ.ದೇಶಪಾಂಡೆ There is dissatisfaction among two MLAs: Surjewala will rectify the dissatisfaction: R.V. Deshpande

ಕಾರವಾರ 30 : ಕೆಲವು ಶಾಸಕರಿಗೆ ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂಬ ಅಸಮಾಧಾನ ಇದೆ. ಪ್ರತಿ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿಗೆ 50 ಕೋಟಿ ರೂ. ಅನುದಾನ ನೀಡಲಾಗುತ್ತಿದೆ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್‌.ವಿ.ದೇಶಪಾಂಡೆ ಹೇಳಿದರು.ಕಾರವಾರದಲ್ಲಿ ನಡೆದ ಕೆಡಿಪಿ ಸಭೆಗೂ ಮುನ್ನ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.ಸಿದ್ದರಾಮಯ್ಯ ಸರ್ಕಾರದಲ್ಲಿ ಯಾವುದೇ ಸಮಸ್ಯೆ ಆಗಿಲ್ಲ.ಕೆಲವು ಶಾಸಕರಿಗೆ ಮಂತ್ರಿ ಆಗಬೇಕು, ಕೆಪಿಸಿಸಿ ಅಧ್ಯಕ್ಷ ಆಗಬೇಕು ಅಂತಾ ಆಸೆ ಇರುತ್ತದೆ. ಕೆಲವು ಸಲ ಅವರು ಮಾಧ್ಯಮಗಳ ಬಳಿ ಹೊಗಬಾರದು .ಒಂದಿಬ್ಬರು ಶಾಸಕರು ಹೋಗಿದ್ದಾರೆ. ಅದೇ ಕೆಲ ಮಾಧ್ಯಮಗಳಲ್ಲಿ ಹೆಡಲೈನ್ ಆಗಿ ಬರುತ್ತದೆ.ಅದೇನೇ ಇರಲಿ , ಸಿದ್ದರಾಮಯ್ಯ ಸರ್ಕಾರಕ್ಕೆ ಹೈಕಮಾಂಡ್ ಸಂಪೂರ್ಣ ಬೆಂಬಲ ಇದೆ. ಕೆಲವು ಶಾಸಕರ ಸಮಸ್ಯೆ ಇರಬಹುದು ಅದನ್ನು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಬಗೆ ಹರಿಸುತ್ತಾರೆ .ಅವರ ಸಮಸ್ಯೆಯನ್ನು ಕರೆದು ಕೇಳುತ್ತಾರೆ. ಶಾಸಕರ ಅಹವಾಲು ಕೇಳಿ, ಮಾತಾನಾಡುತ್ತಾರೆ.  

ಸಮಸ್ಯೆ ಸರಿ ಹೊಗಲಿದೆ ಎಂದರು.2013 -18 ರಲ್ಲಿ ಇದ್ದ ಸಿದ್ದರಾಮಯ್ಯ ಗತ್ತು ಈಗಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ದೇಶಪಾಂಡೆ, ಸಿದ್ಧರಾಮಯ್ಯ ಈಗ, ಮೊದಲಿನ ತರಹ ಇರಲು ಹೇಗೆ ಇರೊಕೆ ಸಾಧ್ಯ? ಮೊದಲು ಸಿದ್ದರಾಮಯ್ಯ ಯಂಗ್ ಇದ್ದ, ಸ್ವಲ್ಪ ಶಕ್ತಿ ಜಾಸ್ತಿ ಇತ್ತು. ಈಗ ನನ್ನನ್ನೇ ನೋಡಿ, ಮೊದಲು ಇದ್ದ ಹಾಗೆ ದೇಶಪಾಂಡೆ ಈಗ ಇದ್ದರಾ? ಎಂದು ಮರು ಪ್ರಶ್ನಿಸಿದರು. ಆಡಳಿತದಲ್ಲಿಸಿ.ಎಂ. ಸಿದ್ದರಾಮಯ್ಯ ಒಳ್ಳೆಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ.ಆಡಳಿತದಲ್ಲಿ ಎಲ್ಲ ನಿರ್ಧಾರ ಹೇಳಿ ಮಾಡೊಕೆ ಆಗಲ್ಲ.ಸಿದ್ಧರಾಮಯ್ಯಗೆ ತಾಳ್ಮೆ ಬಹಳ ಇದೆ, ನನಗಿಂತಲೂ ಜಾಸ್ತಿ ತಾಳ್ಮೆ ,ಅನುಭವ ಇದೆ ಎಂದರು.ದಸರಾ ಉದ್ಘಾಟನೆಯನ್ನು ಬೇರೆ ಮುಖ್ಯಮಂತ್ರಿ ಮಾಡ್ತಾರೆ ಎಂಬ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ , ಉತ್ತರಿಸಿದ ದೇಶಪಾಂಡೆಪಾಪ, ಅಶೋಕ ಬಡಪಾಯಿ. ತಮ್ಮ ಖುರ್ಚಿ ಉಳಿಸಿಕೊಳ್ಳೊಕೆ ಹೇಳಲೆ ಬೇಕಲ್ವಾ..? ಅಶೋಕ್‌ ಹೇಳದೆ ಇದ್ರೆ , ಮಾತ್ಯಾರು ಹೇಳ್ತಾರೆ? ಹಾಗೆ ಹೇಳದೆ ಇದ್ದರೆ ಅವರನ್ನು ಬಿಜೆಪಿ ಅಧ್ಯಕ್ಷ ಹುದ್ದೆಯಿಂದ ತೆಗೆದು ಬಿಡುತ್ತಾರೆ ಎಂದರು. 

ವಿಪಕ್ಷ ನಾಯಕ , ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗ್ತಾರೆ ಅಂತಾ ಮಾಧ್ಯಮಗಳಲ್ಲಿ ಸಹ ಬರುತ್ತಿದೆ . ಮಾಧ್ಯಮಗಳ ಸುದ್ದಿ ನೋಡಿ ,ಸಿದ್ದರಾಮಯ್ಯ ಸರ್ಕಾರ ಬಿಳುತ್ತೆ ಅಂತಾ ಹೇಳುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ಅಶೋಕ್‌ ನಿದ್ದೆಯಲ್ಲಿದ್ದಾನೆ ಅನಿಸುತ್ತೆ . ಅದಕ್ಕೆ ಹಾಗೆ ಹೇಳುತ್ತಿದ್ದಾನೆ ಎಂದರು.ಐದು ವರ್ಷ ಸಿದ್ದರಾಮಯ್ಯ ಸಿಎಂ :ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಇಲ್ಲ, ಪಕ್ಷದ ಶಾಸಕಾಂಗ ಸಭೆಯಲ್ಲಿ ಈ ವಿಷಯ ಬಂದಿಲ್ಲ ಎಂದ ಹಿರಿಯ ಕಾಂಗ್ರೆಸ್ಸಿಗ ದೇಶಪಾಂಡೆ, ಎಲ್ಲರೂ ಕೂಡಿ ಇದ್ದೇವೆ .ಒಕ್ಕಟ್ಟಿನಿಂದ ಇದ್ದೇವೆ . ಒಳ್ಳೆಯ ಕೆಲಸ ಮಾಡುತ್ತಿದ್ದಾರೆ .ಐದು ಗ್ಯಾರಂಟಿ ಯೋಜನೆಗಳಿಗೆ 58 ಸಾವಿರ ಕೋಟಿ ರೂಪಾಯಿ ಖರ್ಚು ಆಗುತ್ತಿದೆ. ಅಭಿವೃದ್ದಿಗೂ ಹಣ ಬಿಡುಗಡೆ ಆಗುತ್ತಿದೆ.ಪ್ರತಿ ಶಾಸಕರ ಕ್ಷೇತ್ರಕ್ಕೆ 50 ಕೋಟಿ ರೂಪಾಯಿ ಕೊಟ್ಟಿದ್ದಾರೆ . ಕೊಟ್ಟಿರುವ ಹಣ ಕೆಲಸ ಪ್ರಾರಂಭದ ಬಳಿಕ ಬೇಗ ಬಿಡುಗಡೆ ಆಗುತ್ತಿಲ್ಲ.ಹಣ ಬಿಡುಗಡೆ ಆಗೋಕೆ ತಡ ಆಗುತ್ತಿರುವುದು ಸಮಸ್ಯೆ ಆಗಿದೆ. ಈ ಸಮಸ್ಯೆ ಈ ಹಿಂದೆನೂ ಇತ್ತು, ಈಗ ಸ್ವಲ್ಪ ಜಾಸ್ತಿ ಆಗಿದೆ ಅಷ್ಟೆ ಎಂದರು.ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ. ಸತೀಶ್ ಜಾರಕಿಹೊಳಿ ಒಬ್ಬ ಒಳ್ಳೆ ಮನುಷ್ಯ, ಒಳ್ಳೆ ವ್ಯಕ್ತಿ. ಅವರುಕೆಪಿಸಿಸಿ ಅಧ್ಯಕ್ಷ ಆಗುತ್ತಾರೋ, ಇಲ್ಲವೋ ನನಗೆ ಗೊತ್ತಿಲ್ಲ ಎಂದು ದೇಶಪಾಂಡೆ ನುಡಿದರು.