ಲೋಕದರ್ಶನ ವರದಿ
ಬೆಳಗಾವಿ 01: ಯೋಗವೆಂದರೆ ಮನಸ್ಸಿನ ಅಂತರಾಳವನ್ನು (ಚಿತ್ತ) ವಿವಿಧ ರೂಪಗಳನ್ನು ತಾಳದಂತೆ ನಿಗ್ರಹಿಸುವುದು. ಯೋಗ ನಮ್ಮದೇಶದ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಇಂದು ರಥಸಪ್ತಮಿ ದಿವಸ ಸೂರ್ಯ ದಕ್ಷಿಣಾಯದಿಂದ ಉತ್ತಾರಾಯಣಕ್ಕೆ ಕಾಲಿಡುತ್ತಿದ್ದಾನೆ. ಮಾರ್ಗಮಾಸದ ಸಪ್ತಮಿಯ ದಿವಸ ಸೂರ್ಯನಿಗೆ ನಮಿಸುವ ಸಲುವಾಗಿ ನಾವು ಸೂರ್ಯ ನಮಸ್ಕಾರ ಮಾಡಬೇಕು, ಪ್ರತಿಯೊಬ್ಬ ಮನುಷ್ಯನ ದೇಹದಲ್ಲಿ ಸೂರ್ಯನ ಅಂಶವಿದೆ ಅದನ್ನು ಜಾಗೃತಗೊಳಿಸಿದರೆ ನಮ್ಮ ಇಡಿದೇಹ ಸದೃಢವಾಗಿರುತ್ತದೆ.
ಈ ದಿನ ಸೂರ್ಯ ನಮಸ್ಕಾರ ಮಾಡುವದರಿಂದ ಆಕಾಶ ಕಾಯಗಳಿಂದ ಉತ್ಪ್ಪತ್ತಿಯಾಗುವ ಶಕ್ತಿ ದೇಹದಲ್ಲಿ ಸಂಚರಿಸುತ್ತದೆ. ಯೋಗವನ್ನು ನಮ್ಮ ಜೀವನ ಶೈಲಿಯಲ್ಲಿ ಅಳವಡಿಸಿಕೊಳ್ಳಬೇಕು, ಯಾವುದೇ ಕೆಲಸವನ್ನು ಮಾಡುವಾಗ ಶ್ರದ್ಧೆಯಿಂದ ಸಂಪೂರ್ಣವಾಗಿ ಮಾಡಿ ಮುಗಿಸುವುದೇ ಯೋಗ. ಮನುಷ್ಯನ ಮನಸ್ಸು ಹಾಗೆ ಯೋಗದಿಂದ ಚಿತ್ತ ಶುದ್ಧಿಯಾಗಿ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಬಹುದು. ಈ ದಿನ ಸೂರ್ಯನ ಶಕ್ತಿಯನ್ನು ನಮ್ಮಲ್ಲಿ ಆಹ್ವಾನಿಸಿ ಶಕ್ತಿಯುತರಾಗೋಣ ಎಂದು ಯೋಗಮಯಂಯೋಗ ಸಾಧನಾಕೇಂದ್ರ ಹಾಗು ಸಂವೇದನಾ ಸೇವಾ ಸಂಸ್ಥೆ (ರಿ) ಇವರ ಸಂಯೋಗದಲ್ಲಿ ರಥಸಪ್ತಮಿಯ ಪ್ರಯುಕ್ತ ಹಮ್ಮಿಕೊಂಡಿದ್ದ ಸಾಮೂಹಿಕ 108 ಸೂರ್ಯ ನಮಸ್ಕಾರದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಂದಿದ್ದ ಡಾ. ಮಾಧವರಂಗ ಹೇಳಿದರು.
ಯೋಗಮಯಂಯೋಗ ಸಾಧನಾಕೇಂದ್ರ ಹಾಗು ಸಂವೇದನಾ ಸೇವಾ ಸಂಸ್ಥೆ (ರಿ) ಆರ್ಯ ವೈಶ್ಯ ಸಮಾಜ ಧಾರವಾಡ ಇವರ ಸಹಕಾರದೊಂದಿಗೆ ರಥಸಪ್ತಮಿಯ ಪ್ರಯುಕ್ತ ಸಾಮೂಹಿಕ 108 ಸೂರ್ಯ ನಮಸ್ಕಾರ ಯಜ್ಞಕಾರ್ಯಕ್ರಮವನ್ನು ನಗರೆಶ್ವರದೇವ ಸ್ಥಾನದಲ್ಲಿ ದಿ. 1ರಂದು ಹಮ್ಮಿಕೊಂಡಿದ್ದರು.
109 ಜನ ಯೋಗಾಥರ್ಿಗಲು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ 108 ಸೂರ್ಯನಮಸ್ಕಾರ ಹಾಕಿದರು. ಯೋಗಮಯಂಯೋಗ ಸಾಧನಾಕೇಂದ್ರದ ಲಕ್ಷಣ ಬೋಡಕೆಯವರು ಮತ್ತು ಆರ್ಯ ವೈಶ್ಯ ಸಮಾಜ ಧಾರವಾಡದ ಅಶೋಕ ದೊಡ್ಡಮನಿ ಶ್ರೀಂಗೇಶ್ಭಟ್ ನೇತೃತ್ವದಲ್ಲಿ ನಡೆದ ಸೂರ್ಯ ಯಜ್ಞಕಾರ್ಯಕ್ರಮದಲ್ಲಿ ಆನಂದ ಕಲಾಲ್ದಂಪತಿಗಳು ಭಾಗವಹಿಸಿದರು. ರಜನಿ ಕುಲಕಣರ್ಿ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಭಾಕಾರ್ಯಕ್ರಮವನ್ನು ಸಂಧ್ಯಾ ನಿರೂಪಿಸಿ-ವಂದಿಸಿದರು. ಸಂತೋಷ ಪೂಜಾರಿ ಉಪಸ್ಥಿತರಿದ್ದರು.