ಇದೆ 20 ರಿಂದ 22-ರವರಗೆ ಕನ್ನಡ ಬೆಳಕು ಚಲ್ಲುವ ರಾಜ್ಯಮಟ್ಟದ ವಿಚಾರ ಸಂಕಿರಣ
There is a state-level symposium on Kannada lighting from 20th to 22nd.
ಲೋಕದರ್ಶನ ವರದಿ
ಲಕ್ಷ್ಮೇಶ್ವರ 18: "ಪ್ರಾಚೀನ ಕನ್ನಡ ಸಾಹಿತ್ಯಕ್ಕೆ ಪುಲಿಗೆರೆಯ ಕೊಡುಗೆ ದೊಡ್ಡದು. 8ನೇ ಶತಮಾನದಲ್ಲಿಯೇ ಆದಿಕವಿ ಪಂಪ, ಶ್ರೀವಿಜಯರಂತಶ್ರೇಷ್ಠ ಕವಿಗಳಿಂದ ತಿರುಳ್ ಗನ್ನಡ ನೆಲ ಎಂದು ಕರೆಸಿಕೊಂಡ ಹೆಗ್ಗಳಿಕೆ ಪುಲಿಗೆರೆ ಪರಿಸರದ್ದು. ಹೀಗಾಗಿ ಪುಲಿಗೆರೆ ಪರಿಸರದ ಪ್ರಾಚೀನ ಕನ್ನಡ ಸಾಹಿತ್ಯದ ಬಗ್ಗೆ ಬೆಳಕು ಚೆಲ್ಲುವ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ದಿನಾಂಕ 20-05-2026 ರಿಂದ 22 ರವರೆಗೆ ಪಟ್ಟಣದ ಶ್ರೀ ರಂಭಾಪುರಿ ಜಗದ್ಗುರು, ವೀರಗಂಗಾಧರ ಸಮುದಾಯ ಭವನದಲ್ಲಿ ಮೂರು ದಿನಗಳ ವರೆಗೆ ಹಮ್ಮಿಕೊಳ್ಳಲಾಗಿದೆ" ಎಂದು ಕನ್ನಡ ಸಾಹಿತ್ಯ ಪರಿಷತ್ತು ಗದಗ ಜಿಲ್ಲಾ ಘಟಕದ ಅಧ್ಯಕ್ಷರಾದ ವಿವೇಕಾನಂದಗೌಡ ಪಾಟೀಲ ತಿಳಿಸಿದರು.
ಅವರು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಭಾರತೀಯ ಭಾಷಾ ಸಂಸ್ಥಾನ, ಉನ್ನತ ಶಿಕ್ಷಣ ಇಲಾಖೆ, ಶಿಕ್ಷಣ ಸಚಿವಾಲಯ, ಭಾರತ ಸರ್ಕಾರ, ಮಾನಸ ಗಂಗೋತ್ರಿ ಮೈಸೂರು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗದಗ ಹಾಗೂ ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವರ ಸಹಯೋಗದೊಂದಿಗೆ ’ಪುಲಿಗೆರೆ ಪರಿಸರದ ಪ್ರಾಚೀನ ಕನ್ನಡ ಸಾಹಿತ್ಯ ರಾಜ್ಯಮಟ್ಟದ ವಿಚಾರ ಸಂಕಿರಣ’ ಕಾರ್ಯಕ್ರಮ ಪೂರ್ವ ತಯಾರಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.ಸಭೆಯಲ್ಲಿ ಪಾಲ್ಗೊಂಡ ಹಿರಿಯ ಸಾಹಿತಿ ಹಾಗೂ ವಕೀಲ ಬಿ.ಎಸ್.ಬಾಳೇಶ್ವರಮಠ "ಸುಮಾರು 45 ವರ್ಷಗಳ ಹಿಂದೆ ಪುಲಿಗೆರೆ ಕುರಿತು ವಿಶ್ವವಿದ್ಯಾಲಯ ಮಟ್ಟದ ವಿಚಾರ ಸಂಕಿರಣ ಇಲ್ಲಿ ಜರುಗಿತ್ತು. ಆದರೆ ಈಗ ಜರುಗುತ್ತಿರುವದು ಪುಲಿಗೆರೆ ಕುರಿತು ರಾಜ್ಯಮಟ್ಟದ ಪ್ರಥಮ ವಿಚಾರ ಸಂಕಿರಣವಾಗಲಿದೆ.
ಇಲ್ಲಿನ ಇತಿಹಾಸವನ್ನು ಅಧ್ಯಯನ ಮಾಡಿ ದಾಖಲಿಸಿದ ಪ್ರಾಜ್ಞರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಫುಲಿಗೆರೆ ಪರಿಸರದ ಜನರು ಇದರ ಸದುಪಯೋಗಪಡಿಸಿಕೊಳ್ಳಬೇಕು"ಎಂದರು.ಕನ್ನಡ ಸಾಹಿತ್ಯ ಪರಿಷತ್ತು ಲಕ್ಷ್ಮೇಶ್ವರ ತಾಲೂಕಾಧ್ಯಕ್ಷ ಈಶ್ವರ ಮೆಡ್ಲೇರಿ ಮಾತನಾಡಿ "ಪುಲಿಗೆರೆ ಪರಿಸರದ ಪ್ರಾಚೀನ ಪರಂಪರೆಯ ಕುರಿತು ಸಂಶೋಧನೆ ಮಾಡಿದ ರಾಜ್ಯಮಟ್ಟದ ಖ್ಯಾತ ವಿದ್ವಾಂಸರು,ಸಂಶೋಧಕರು ಈ ಮೂರು ದಿನಗಳ ವಿಚಾರ ಸಂಕಿರಣದಲ್ಲಿ ತಮ್ಮ ವಿದ್ವತ್ ಪೂರ್ಣ ವಿಷಯವನ್ನು ಮಂಡನೆ ಮಾಡಲಿದ್ದಾರೆ. ಮೈಸೂರು,ಬೆಂಗಳೂರು,ಧಾರ ವಾಡ, ಹಂಪಿ ಕನ್ನಡ ವಿಶ್ವವಿದ್ಯಾಲಯಗಳಿಂದ ಸಂಶೋಧನಾ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.
ಪುಲಿಗೆರೆ ಪರಿಸರದ ಶ್ರೇಷ್ಠ ಗತ ಇತಿಹಾಸದ ಶ್ರೀಮಂತ ಪರಂಪರೆಯನ್ನು ಅರಿಯಲು ಇದೊಂದು ಸುವರ್ಣ ಅವಕಾಶ. ಆದ್ದರಿಂದ ವಿದ್ಯಾರ್ಥಿಗಳು,ಕನ್ನಡಾಭಿಮಾನಿಗಳು,ಪುಲಿಗೆರೆ ಪರಿಸರದ ಎಲ್ಲಾ ಹಿರಿಯರು, ಮಹಿಳೆಯರು,ಸಾಹಿತ್ಯ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಇದರ ಪ್ರಯೋಜನ ಪಡೆಯಲು ವಿನಂತಿಸಲಾಗಿದೆ" ಎಂದರು.ಈ ಸಂದರ್ಭದಲ್ಲಿ ವಿಶ್ರಾಂತ ಉಪನ್ಯಾಸಕ ಎಸ್.ಬಿ. ಮಳಲಿ, ವಿಶ್ರಾಂತ ಶಿಕ್ಷಕರಾದ ರಮೇಶ ನವಲೆ,ಎಸ್.ಎಫ್. ಆದಿ,ಎಸ್.ಐ.ಅಲೂರ, ಜಿಲ್ಲಾ ಕ.ಸಾ.ಪ ಪದಾಧಿಕಾರಿಗಳಾದ ಡಿ.ಎಸ್.ಬಾಪುರೆ, ಸತೀಶ ಚನ್ನಪ್ಪಗೌಡರ, ಪ್ರಾಚಾರ್ಯರಾದ ನಾಗರಾಜ ಕಳಸಾಪುರ,ಸೋಮಶೇಖರ ಕೆರಿಮನಿ ಶಿಕ್ಷಕರಾದ ಎಸ್. ಬಿ. ಅಣ್ಣಿಗೇರಿ,ಈರಣ್ಣ ಗಾಣಿಗೇರ, ಗಂಗಾಧರ ಅರಳಿ, ಮಹಾವೀರ ಗೌಡ್ರು ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ನಾಗರಾಜ ಮಜ್ಜಿಗುಡ್ಡ ಸ್ವಾಗತಿಸಿ ನಿರೂಪಿಸಿದರು.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 