ಧಾರವಾಡ, ಅ 4: ರಾಜ್ಯದಲ್ಲಿ 25 ಜನ ಸಂಸದರಿದ್ದರು, ನೆರೆ ಪರಿಹಾರ ಸಿಗದೇ ಜನ ಬೀದಿಗೆ ಬಂದಿದ್ದಾರೆ ಎಂದು ಶಾಸಕಿ ಸೌಮ್ಯ ರೆಡ್ಡಿ ಸಕರ್ಾರದ ವಿರುದ್ಧ ಕಿಡಿಕಾರಿದ್ದಾರೆ.ನೆರೆ ಪರಿಹಾರ ವಿಳಂಬದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಉಂಟಾದ ಭೀಕರ ಪ್ರವಾಹದಿಂದ ನಾನು ಬಹಳ ನೊಂದಿದ್ದೇನೆ. ಇಂತಹ ಪ್ರವಾಹ ಶತಮಾನದಲ್ಲಿ ಆಗಿರಲಿಲ್ಲ. ಅನುದಾನ ಬಿಡುಗಡೆಗಾಗಿ ನಾವು ಸಾಕಷ್ಟು ಪ್ರತಿಭಟನೆ ಮಾಡಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಶೀಘ್ರ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದೇವೆ ಎಂದರು.
ಬಿಜೆಪಿ ಸರ್ಕಾರ ಜನಪರ ಕಾಳಜಿ ಹೊಂದಿದ್ದು, ಕೇಂದ್ರ ಸರ್ಕಾರದಿಂದ ಶೀಘ್ರ ಪರಿಹಾರ ತರುವ ವಿಶ್ವಾಸವಿದೆ. ನಮ್ಮ ಕಡೆಯಿಂದ ಎಷ್ಟು ಸಾಧ್ಯವೋ, ಅಷ್ಟು ಸಹಾಯ ಮಾಡಿದ್ದೇವೆ. ಈಗ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಮೇಲೆ ಆ ಜವಾಬ್ದಾರಿ ಇದೆ ಎಂದರು.
ಈಗಾಗಲೇ ನೆರೆ ಸಂತ್ರಸ್ಥರಿಗೆ ಪರಿಹಾರ ದೊರೆಯಬೇಕು ಎಂದು ಪ್ರತಿಭಟನೆ ಆರಂಭವಾಗಿದ್ದು, ಅನುದಾನ ಸಿಗುವವರೆಗೂ ನಾವು ಸುಮ್ಮನಿರುವುದಿಲ್ಲ ಎಂದು ಅವರು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.