ಧಾರವಾಡ 23: ಮಾನವನ ಉಗಮದೊಂದಿಗೆ ರಂಗಭೂಮಿಯ ನಂಟು ನಿರಂತರವಾಗಿ ನಡೆದುಕೊಂಡು ಬಂದಿದೆ. ಮಾನವನ ವಿಕಾಸವಾದಂತೆ ರಂಗಭೂಮಿಯೂ ಆಯಾ ಕಾಲಕ್ಕೆ ತಕ್ಕಂತೆ ತನ್ನ ಗುಣ ಮತ್ತು ಸ್ವರೂಪಗಳಲ್ಲಿ ಬದಲಾವಣೆಯನ್ನು ಪಡೆದುಕೊಂಡು ಸಾಗಿದೆ. ನಮಗೆ ರಂಗಭೂಮಿ ಎಂದ ತಕ್ಷಣ ನಾಟಕ, ಅಭಿನಯ ಮುಂತಾದ ಸನ್ನಿವೇಶಗಳು ಎದುರಾಗುತ್ತವೆ. ಆದರೆ ತೆರೆಮರೆಯಲ್ಲಿ ನಿಂತು ರಂಗಭೂಮಿಯನ್ನು ಕಟ್ಟಿ ಬೆಳೆಸಿದ ಬಹುತೇಕ ಸಾಧಕರು ಎಲೆ ಮರೆಯಂತಾಗುತ್ತಾರೆ. ಇಂತಹ ರಂಗಭೂಮಿ ತಪಸ್ವಿ ಹಾಗೂ ಮಕ್ಕಳ ರಂಗಭೂಮಿಯ ಹೋರಾಟಗಾರರಲ್ಲಿ ಕೆ ಜಗುಚಂದ್ರ ಅವರು ಒಬ್ಬರಾಗಿದ್ದಾರೆ ಎಂದು ಸಾಹಿತಿಗಳಾದ ಮಾತಾರ್ಂಡಪ್ಪ ಎಮ್ ಕತ್ತಿ ಹೇಳಿದರು.
ಅವರು ಥಿಯೇಟರ್ ಎಂಪೈರ್ ಕಲ್ಚರಲ್ ಪೋರಂ,ಧಾರವಾಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಹಮ್ಮಿಕೊಂಡ ಕೆ. ಜಗುಚಂದ್ರ ರಂಗನಮನ ನಾಟಕೋತ್ಸವದಲ್ಲಿ ರಂಗಾಯಣದ ಸಮುಚ್ಚಯದಲ್ಲಿ ಕೆ.ಜಗುಚಂದ್ರ ಅವರ ಜೀವನ ಮತ್ತು ರಂಗಭೂಮಿ ಎಂಬ ವಿಷಯದ ಕುರಿತು ಸಾಹಿತಿಗಳಾದ ಮಾತಾರ್ಂಡಪ್ಪ ಎಮ್ ಕತ್ತಿ ಉಪನ್ಯಾಸದಲ್ಲಿ ಮಾತನಾಡುತ್ತಾ ಜಗುಚಂದ್ರ ಅವರು ಒಬ್ಬ ನಟನಾಗಿ, ಸಂಗೀತಗಾರ, ಸಂಯೋಜಕನಾಗಿ, ರಂಗನಿದರ್ೇಶಕನಾಗಿ, ಶಿಕ್ಷಣ-ತಜ್ಞನಾಗಿ ಪರಿಣಿತಿ ಪಡೆದವರಾದ ಕಾರಣ ಭಿನ್ನವಾಗಿ ಎಲ್ಲ ಕ್ಷೇತ್ರದಲ್ಲಿ ನಿಲ್ಲಲು ಸಾಧ್ಯವಾಯಿತು. ಆದರೆ ಅವರು ಬೇಗ ನಮ್ಮನ್ನು ಅಗಲಿದ್ದು ಆ ಕ್ಷೇತ್ರಕ್ಕೆ ನಷ್ಠವಾಯಿತು ಮತ್ತು ನಮ್ಮೆಲ್ಲರಿಗೂ ನೋವಿನ ಸಂಗತಿ.
ಶಿಕ್ಷಕ ವೃತ್ತಿಯ ಜೊತೆ ಜೊತೆಯಲ್ಲಿಯೇ ಸಾಮಾಜಿಕ ಜಾಗೃತಿ, ಹೋರಾಟ ಹಾಗೂ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದರು. ಹೀಗೆ ಪ್ರಾರಂಭವಾದ ಇವರ ನಾಟಕ ಯಾತ್ರೆಯು ಹಲವಾರು ನಾಟಕ ಪ್ರಕಾರಗಳಲ್ಲಿ ಇವರನ್ನು ತಲ್ಲಿನಗೊಳಿಸಿತು.
ಕೆ ಜಗುಚಂದ್ರ ಅವರು ನಾಟಕ ಪ್ರಕಾರವನ್ನು ಕೇವಲ ಹವ್ಯಾಸ ಹಾಗೂ ಮನರಂಜನೆಯ ಮಾಧ್ಯಮವಾಗಿ ಸ್ವೀಕರಿಸಲಿಲ್ಲ. ಆ ಮೂಲಕ ಸಾಮಾಜಿಕ ಜಾಗೃತಿ ಹಾಗೂ ಸಾಮಾನ್ಯ ಜನತೆಗೆ ಅರಿವು ಮೂಡಿಸುವ ಮಾಧ್ಯಮವಾಗಿ ಗುರುತಿಸಿಕೊಂಡರು. ಜತೆಗೆ ರಂಗಭೂಮಿಯನ್ನು ಸದಾ ಚಲನಶೀಲವಾಗಿ ಇಡಲು ಅನೇಕ ತಂಡಗಳನ್ನು ಕಟ್ಟಿ ಕಲೆ ಹಾಗೂ ಕಲಾವಿದರನ್ನು ಉಳಿಸಿ, ಬೆಳೆಸುವಲ್ಲಿ ಇವರ ಪಾತ್ರ ಪ್ರಮುಖವಾಗಿದೆ. ರಂಗಭೂಮಿ, ಸಾಹಿತ್ಯ, ಸಂಗೀತ, ಶಿಕ್ಷಣ, ಮಕ್ಕಳ ಕ್ಷೇತ್ರದಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ಇವರು, ಆ ಕ್ಷೇತ್ರಗಳಲ್ಲಿ ಇರಿಸಿಕೊಂಡಿದ್ದ ಅನೇಕ ಮಹತ್ವಾಕಾಂಕ್ಷೆಗಳನ್ನು, ಚಿಂತನೆಗಳನ್ನು ಹಾಗೂ ಕನಸುಗಳನ್ನು ಸಾಕಾರಗೊಳಿಸುವಲ್ಲಿ ಕಲಾವಿದರು, ಅವರ ಶಿಷ್ಯಬಳಗ, ಅಭಿಮಾನಿಗಳು ಕಾರ್ಯಮಾಡಬೇಕಾಗಿರುವುದು ಅವಶ್ಯ ಎಂದರು.
ನಾಟಕ ಅಕಾಡೆಮಿಯ ಸದಸ್ಯರಾದ ಬಸವರಾಜ ದೊಡಮನಿ ಅಕಾಡೆಮಿ ಮತ್ತು ಜಗುಚಂದ್ರ ಅವರ ಕಾರ್ಯದ ಕುರಿತು ಮಾತನಾಡಿದರು.
ನಂತರ ಗಣೇಶ ಅಮಿನಗಡ ರಚನೆಯ ಮಹಾದೇವ ಹಡಪದ ನಿರ್ದೇಶನದ ಆಟಮಾಟ ತಂಡದಿಂದ 'ಆಲಾಪ' ನಾಟಕ ಪ್ರದರ್ಶನಗೊಂಡಿತು.
ಶಿಕ್ಷಕರಾದ ಯೋಗಿಶ ಪಾಟೀಲ ನಿರೂಪಿಸಿದರು. ಪ್ರೇಮಾನಂದ ಶಿಂಧೆ ಪ್ರಾಥರ್ಿಸಿದರು. ಪೋರಂನ ಅಧ್ಯಕ್ಷರಾದ ರಾಜ್ ಕವಡೆನವರ ಸ್ವಾಗತಿಸಿದರು.
ಜಗುಚಂದ್ರ ಅವರ ಪತ್ನಿ ಕವಿತಾ(ಮಲ್ಲವ್ವ) ಜಗುಚಂದ್ರ, ಮಕ್ಕಳಾದ ಪ್ರತಿಜ್ಞಾ ಪ್ರಣವ, ವೇದಾ ಗೋಣೆಪ್ಪನವರ, ಚೈತ್ರಾ ಕೂಡ್ಲ ಮೊಮ್ಮಗಳಾದ ಶ್ರೇಯಾ, ಹಾಗೂ ಮಕ್ಕಳ ಸಾಹಿತಿ ಆನಂದ ಪಾಟೀಲ, ಮಲ್ಲಿಕಾರ್ಜುನ ಹಿರೇಮಠ, ಶಂಕರ ಹಲಗತ್ತಿ, ನಾಟಕ ರಚನೆಗಾರ ಗಣೇಶ ಅಮ್ಮಿನಗಡ, ನಿರ್ದೇಶಕ ಮಹಾದೇವ ಹಡಪದ, ರವಿ ಕುಲಕರ್ಣಿ ಪತ್ರಕರ್ತರಾದ ಟಿ.ಎಸ್ ಗೊರವರ, ಬಸವರಾಜ ಹಿರೇಮಠ, ವಿಜಯಮಹಾತೇಶ ಪಾಟೀಲ, ಶ್ರೀಶೈಲ ಚಿಕನಳ್ಳಿ, ರಂಗ ಸಂಘಟಕ ನಾಗರಾಜ ಪಾಟೀಲ, ಮುಂತಾದವರು ಹಾಜರಿದ್ದರು.