ಯುವ ಸಮುದಾಯ ಶ್ರೀರಾಮನ ಆದರ್ಶಗಳನ್ನು ಪಾಲಿಸಬೇಕು; ಶ್ರೀಪಾದಂಗಳವರು
ಬೀಳಗಿ, 07; ಸತ್ಯ, ನ್ಯಾಯ, ನೀತಿ, ಧರ್ಮ ಹಾಗೂ ಪ್ರಾಮಾಣಿಕತೆಗೆ ಶ್ರೀರಾಮ ಕಳಶಪ್ರಾಯವಾಗಿದ್ದು, ಯುವ ಸಮುದಾಯ ಶ್ರೀರಾಮನ ಆದರ್ಶಗಳನ್ನು ಪಾಲಿಸಬೇಕು ಎಂದು ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳವರು ಹೇಳಿದರು.
ಬೀಳಗಿ ಕ್ರಾಸ್.3ರಲ್ಲಿ ಶುಕ್ರವಾರ ನಡೆದ ಶ್ರೀರಾಮ ಮಂದಿರ ಉದ್ಘಾಟನೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ಶ್ರೀರಾಮ ಹುಟ್ಟಿದ ಪುಣ್ಯಭೂಮಿ. ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕೇವಲ ದೇವಸ್ಥಾನದಲ್ಲಿ ಅಲ್ಲ, ಪ್ರತಿಯೊಬ್ಬರ ಹೃದಯದಲ್ಲಿ ಪ್ರತಿಷ್ಠಾಪನೆ ಆಗಬೇಕು ಎಂದರು.
ಶ್ರೀರಾಮನ ನ್ಯಾಯ, ನೀತಿ, ಪಿತೃತ್ವ ಭಕ್ತಿ, ಸಹೋದರ ವಾತ್ಸಲ್ಯ, ಸಹಿಷ್ಣುತೆ, ಜನಹಿತ, ತಾಳ್ಮೆ ಇವೆಲ್ಲವುಗಳನ್ನು ನಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮಾಜಿ ಸಚಿವ ಮುರುಗೇಶ ನಿರಾಣಿ ನವಗ್ರಹ ಮಂದಿರ ಉದ್ಘಾಟಿಸಿ ಮಾತನಾಡಿ, ಶ್ರೀರಾಮ ಮಂದಿರಕ್ಕೆ ಸಮುದಾಯ ಭವನ ಹಾಗೂ ಮೂಲಭೂತ ಸೌಲಭ್ಯಗಳನ್ನು ನೀಡುವ ಮೂಲಕ ದೇವಸ್ಥಾನದ ಅಭಿವೃದ್ಧಿಗೊಳಿಸಲು ನಾನು ಸದಾ ಸಿದ್ದನಿದ್ದೇನೆ, ಶ್ರೀರಾಮ ಮಂದಿರ ಒಂದೇ ಸಮಾಜ, ಜಾತಿ, ಪಕ್ಷಕ್ಕೆ ಸೀಮಿತವಾದುದಲ್ಲ ಎಂದರು.
ವಿಧಾನಪರಿಷತ್ ಸದಸ್ಯ ಎಚ್. ಆರ್. ನಿರಾಣಿ ಮಾತನಾಡಿ, ಪ್ರಾಚೀನ ಇತಿಹಾಸ, ಪವಿತ್ರ ಪರಂಪರೆ ಹೊಂದಿರುವ ಶ್ರೀರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಧಾರ್ಮಿಕ ಸಮಾರಂಭಗಳನ್ನು ಸಂಯೋಜಿಸಿರುವುದು ತಮ್ಮೆಲ್ಲರ ಧರ್ಮ ಶ್ರದ್ಧೆಗೆ ಈ ಸಮಾರಂಭ ಸಾಕ್ಷಿಯಾಗಿದೆ ಎಂದರು.
ಗ್ಯಾರಂಟಿ ಅನುಷ್ಠಾನಗಳ ಸಮಿತಿಯ ರಾಜ್ಯ ಉಪಾಧ್ಯಕ್ಷ ಸೂರಜ ಹೆಗಡೆ ಮಾತನಾಡಿ, ಈ ಧರ್ಮ ಸಭೆಯು ಎಲ್ಲರಿಗೂ ಉತ್ತೇಜನ ನೀಡಲಿ. ಶ್ರೀರಾಮ ಮಂದಿರ ಸರ್ವಧರ್ಮಿಯರು ಪೂಜಿಸುವ ಧಾರ್ಮಿಕ ಶ್ರದ್ಧಾ ಕೇಂದ್ರವಾಗಲಿ ಎಂದು ಹೇಳಿದರು.
ಸಿದ್ದನಗೌಡ ಪಾಟೀಲ ಪ್ರಸ್ತಾವಿಕ ನುಡಿ ಹೇಳಿದರು. ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಬೀಳಗಿ ಹುಚ್ಚಪ್ಪಯ್ಯನ ಮಠದ ಫಕೀರಯ್ಯ ಸ್ವಾಮೀಜಿ, ಶ್ರೀರಾಮ ಮಂದಿರ ದೇವಸ್ಥಾನ ಸಮಿತಿಯ ಗೌರವಾಧ್ಯಕ್ಷ ಚಾಮರಾಜ ದೇಸಾಯಿ, ಅಧ್ಯಕ್ಷ ಹಣಮಂತ ದೊಡಮನಿ, ನಿವೃತ್ತ ಶಿಕ್ಷಕ ಡಿ. ಎಸ್. ಕಣವಿ, ರಾಮನಗೌಡ ಜಕ್ಕನಗೌಡ್ರ, ಕುಮಾರ ಯಳ್ಳಿಗುತ್ತಿ, ಭರತರಾಜ ದೇಸಾಯಿ, ಶೇಖರ ಮಾನೆ, ಸುಭಾಷ ಮೇರಾಕಾರ, ನ್ಯಾಯವಾದಿ ಜಗತ್ ಕಣವಿ, ಪ್ರಕಾಶ ಹಿಟ್ನಳ್ಳಿ, ಸೋಮಲಿಂಗ ಬಟಕುರ್ಕಿ ಇದ್ದರು.
ಕಿರಣ ನಾಯ್ಕರ, ಶೃತಿ ನಿಗಡೆ ನಿರೂಪಿಸಿದರು. ಬಸವರಾಜ ದೇವರಮನಿ, ಅಕ್ಷಯ ನಾಯ್ಕರ್ ಸ್ವಾಗತಿಸಿದರು. ವಿ. ಆರ್. ಪೂಜೇರಿ, ಬಿ. ವೈ. ಹರದೊಳ್ಳಿ ನಿರ್ವಸಿದರು.
ಬಾಕ್ಸ್ ಐಟಂ-
ಗೋವಿನದಿನ್ನಿ ಆಂಜನೇಯ ದೇವಸ್ಥಾನದಿಂದ ಸಾರೋಟದಲ್ಲಿ ಪೇಜಾವರ ಶ್ರೀಗಳ ಮೆರವಣಿಗೆ ನಡೆಯಿತು. ನೂರಾರು ಯುವಕರಿಂದ ಬೈಕ್ ರಾ್ಯಲಿ ಹಾಗೂ 500 ಜನ ಮುತ್ತೈದೆಯರಿಂದ ಕುಂಭಮೇಳ ಶ್ರೀರಾಮ ಮಂದಿರದವರೆಗೆ ನಡೆಯಿತು. ಮೆರವಣಿಗೆಯುದ್ದಕ್ಕೂ ಡೊಳ್ಳು ಕುಣಿತ, ಕರಡಿ ಮೇಳಗಳು, ಸಾವಿರಾರು ಭಕ್ತರು ಜೈ ಶ್ರೀರಾಮ ಜೈ ಜೈ ಶ್ರೀ ರಾಮ ಎಂದು ಘೋಷಣೆ ಕೂಗುತ್ತ ಹೆಜ್ಜೆ ಹಾಕಿದರು.