ಯುವ ಪೀಳಿಗೆಯು ಅನ್ವೇಷಣಾಸಕ್ತಿ ಬೆಳೆಸಿಕೊಳ್ಳಬೇಕು: ಡಾ.ಸವಿತಾ ಸೋನಾಲಿ
The younger generation should develop a passion for exploration: Dr. Savita Sonali
ಯುವ ಪೀಳಿಗೆಯು ಅನ್ವೇಷಣಾಸಕ್ತಿ ಬೆಳೆಸಿಕೊಳ್ಳಬೇಕು: ಡಾ.ಸವಿತಾ ಸೋನಾಲಿ
ಬಳ್ಳಾರಿ 24: ಯುವ ಪೀಳಿಗೆಯು ಹೊಸ ವಿಷಯ ಪ್ರಯೋಗ ಅಥವಾ ಅನ್ವೇಷಣಾ ಮಾಡುವ ಆಸಕ್ತಿ ಆಳವಡಿಸಿಕೊಳ್ಳಬೇಕು ಎಂದು ರಾವ್ ಬಹದ್ದೂರ್ ವೈ ಮಹಾಬಲೇಶ್ವರ ಇಂಜಿನಿಯರಿಂಗ್ (ಆರ್‌ವೈಎಂಇಸಿ) ಕಾಲೇಜಿನ ಉಪ ಪ್ರಾಚಾರ್ಯರಾದ ಡಾ.ಸವಿತಾ ಸೊನಾಲಿ ಅವರು ಹೇಳಿದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ವತಿಯಿಂದ ಆರ್‌ಎಎಂಪಿ ಯೋಜನೆಯಡಿ ನಗರದ ಕಂಟೋನ್‌ಮೆಂಟ್‌ನ ಆರ್‌ವೈಎಂಇಸಿ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಇಂಕ್ಯುಬೇಶನ್ ಯೋಜನೆಯ ಬಗ್ಗೆ ಒಂದು ದಿನದ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಆರ್‌ವೈಎಂಇಸಿ ಕಾಲೇಜು ವತಿಯಿಂದ ಒಟ್ಟು 12 ಇಂಕ್ಯೂಬೇಶನ್ ಚಟುವಟಿಕೆಗಳ ಕುರಿತು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕಾಲೇಜಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಗರಿಷ್ಟ 03 ಲಕ್ಷದಂತೆ ಪ್ರೋತ್ಸಾಹ ಪಡೆದುಕೊಂಡಿದೆ ಎಂದು ಎಂದು ತಿಳಿಸಿದರು.
ಈ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳು ಮತ್ತು ಉದ್ಯಮಿಗಳು ಭಾಗವಹಿಸಿ ಇಂಕ್ಯುಬೇಶನ್ ಸೌಲಭ್ಯಗಳು, ಯಶಸ್ಸಿನ ಕಥೆಗಳ ಬಗ್ಗೆ ಅರಿವು ಮೂಡಿಸಲಾಯಿತು.ಕೈಗಾರಿಕೆಯಲ್ಲಿ ಯಶಸ್ವಿ ಉದ್ದಿಮೆದಾರರು ಕೆವಿಟಿ ಕೈಗಾರಿಕೆಯ ವೀರೇಂದ್ರ ಕುಮಾರ್ ಅವರು ಪಾಲ್ಗೊಂಡು ಕೈಗಾರಿಕೆ ಪ್ರಾರಂಭಿಸುವ ಕುರಿತು ತಮ್ಮ ಅನುಭವಗಳನ್ನು ವಿದ್ಯಾರ್ಥಿಗಳು, ಉದ್ದಿಮೆದಾರರೊಂದಿಗೆ ಮಾಹಿತಿ ಹಂಚಿಕೊಂಡರು.ಈ ಸಂದರ್ಭದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಸೋಮಶೇಖರ್.ಬಿ., ಆರ್‌ವೈಎಂಇಸಿ ಮೆಕಾನಿಕಲ್ ವಿಭಾಗದ ಮುಖ್ಯಸ್ಥ ಡಾ.ಕೋರಿ ನಾಗರಾಜ, ಅಡ್ವಕೇಟ್ ಮತ್ತು ಲೀಗಲ್ ಕೌನ್ಸಿಲ್ ಸುಜಾತ ಲಕ್ಷ್ಮೇಶ್ವರ, ಹೆಡ್ ಆಫ್ ಪೆಟೆಂಟ್ ಸೆಲ್‌ನ ಶರತ್ ಕುಮಾರ್,ಪಿಜಿ ಕೋ-ಆರ್‌ಡಿನೇಟರ್ ಚಿಟ್ರಿಕಿತೋಟಪ್ಪ, ಇಡಿಸಿ ಕೋ-ಆರ್‌ಡಿನೇಟರ್ ಡಾ.ಆರ್.ಎಚ್.ಎಂ.ಸೋಮನಾಥ ಸ್ವಾಮಿ, ಇಡಿಸಿ ಕೋ-ಆರ್ಡಿನೇಟರ್ ಬೆರಿಗಿ ವೀರೇಶ್ ಸೇರಿದಂತೆ ಉದ್ದಿಮೆದಾರರು, ಆರ್‌ವೈಎಂಇಸಿ ಕಾಲೇಜಿನ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 