ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆ ಮಾದರಿಯಾಗಿವೆ: ಡಾ. ಕಟ್ಟಿ

The working activities of Kannada Sahitya Parishad are exemplary: Dr. Katti

ಬೆಳಗಾವಿ 05: ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆ ಮಾದರಿಯಾಗಿವೆ ಎಂದು ಬೆಳಗಾವಿ ಕೆಎಲ್ ಇ ಸಂಸ್ಥೆಯ ಖ್ಯಾತ ವೈದ್ಯ ಡಾ.ಸಂಗಮೇಶ ಕಟ್ಟಿ ಹೇಳಿದರು. 

ಬೆಳಗಾವಿಯ ರಾಮತೀರ್ಥ ನಗರದ ಸರಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ವತಿಯಿಂದ ದಿ.ಶ್ರೀಮತಿ ಶಾಂತಾದೇವಿ ಮಹಾಲಿಂಗಪ್ಪ ಬಣಕಾರ ಪುಸ್ತಕ ದತ್ತಿ ನಿಮಿತ್ಯ ವಿಜ್ಞಾನ ಉಪನ್ಯಾಸ ಹಾಗೂ ದತ್ತಿ ಪುಸ್ತಕ  ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಉತ್ತಮ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಕೆಟ್ಟ ಚಟಗಳನ್ನು ತ್ಯಜಿಸಿ ಉತ್ತಮ ನಾಗರಿಕರಾಗಬೇಕೆಂದರು. 

ಡಾ.ವನಿತಾ ಮೆಟಗುಡ್ಡ ಮಾತನಾಡಿ, ಪ್ರೌಢಾವಸ್ಥೆಯಲ್ಲಿ ಯುವಕ, ಯುವತಿಯರು ಒಳ್ಳೆಯ ಮಾರ್ಗದಲ್ಲಿ ಸಾಗಬೇಕು.ಮನಸ್ಸನ್ನು ಹತೋಟಿಯಲ್ಲಿಡಬೇಕು. ಶರೀರವನ್ನು ಉತ್ತಮವಾಗಿಟ್ಡುಕೊಳ್ಳಲು ಮಕ್ಕಳ ಜಂಕ ಪುಡ್ ತಿನ್ನುವದನ್ನು ಬಿಡಬೇಕು. ಮಕ್ಕಳಲ್ಲಿ ಲೈಂಗಿಕ ತಿಳುವಳಿಕೆ ಅಗತ್ಯವಿದೆ. ಯೋಗ , ಪ್ರಾಣಾಯಾಮದಿಂದ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿಟ್ಟುಕೊಳ್ಳಬೇಕೆಂದರು. 

ರಾಮತೀರ್ಥ ನಗರ ಸರಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಅದ್ಯಕ್ಷತೆ ವಹಿಸಿಮಾತನಾಡಿ, ಮಕ್ಕಳು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು.ಕಸಾಪ ವತಿಯಿಂದ ಮಕ್ಕಳಿಗೆ ವೈಜ್ಞಾನಿಕ ಕಾರ್ಯಕ್ರಮ ನೀಡಿರುವದು ಶ್ಲಾಘನೀಯ ಎಂದರು. 

ಇದೇ ವೇಳೆ ಸಾಹಿತಿ, ಪತ್ರಕರ್ತ ಸಿ.ವೈ.ಮೆಣಸಿನಕಾಯಿ ಅವರು ರಚಿಸಿದ ಭೋಜರಾಜನ ಪುನಜನ್ಮ ಕಥಾ ಸಂಕಲನ ಹಾಗೂ  ಲೇಖಕ  ಲಕ್ಷ್ಮಣ ಕೆ.ಡೊಂಬರ  ಅವರು ರಚಿಸಿದ ಈ ಸ್ನೇಹ ಬಂಧನ ಕೃತಿಗೆ ಕಸಾಪ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾ ಕಾರ್ಯದರ್ಶಿ ಎಂ.ವೈ.ಮೆಣಸಿನಕಾಯಿ, ಕಸಾಪ ಮಹಿಳಾ ಪ್ರತಿನಿಧಿ ಡಾ.ಭಾರತಿ ಮಠದ, ಹಿರಿಯ ಸಾಹಿತಿ ಸ.ರಾ.ಸುಳಕೂಡೆ, ಕಸಾಪ ತಾಲೂಕ ಅಧ್ಯಕ್ಷ ಸುರೇಶ ಹಂಜಿ,ಬಾಳಗೌಡ  ದೊಡ್ಡಬಂಗಿ, ಅಶೋಕ ಉಳ್ಳೇಗಡ್ಡಿ,  ಬಿ.ಬಿ.ಮಠಪತಿ, ಆರ.ವಿ.ಬನಶಂಕರಿ, ಮಹಾಂತೇಶ ವಾಲಿ,  ಇತರರು ಇದ್ದರು.  

ಸಾಹಿತಿ ಹೇಮಾ ಸೊನೊಳ್ಳಿ ಸ್ವಾಗತಿಸಿದರು.ಸಂಘಟನಾ ಕಾರ್ಯದರ್ಶಿ ವಿ.ಎಂ.ಅಂಗಡಿ ನಿರೂಪಿಸಿದರು.ಸುಮಾ ಬೇವಿನಕೊಪ್ಪಮಠ ವಂದಿಸಿದರು.