ಟ್ಯಾಂಕರ್ ನೀರು ಬೇಡಾ ನಳದ ನೀರು ಬೇಕು ಹೋರಾಟಕ್ಕೆ ತುರ್ತಾಗಿ ಸ್ಪಂಧನೆ ನೀಡಿದ ನಗರಸಭೆ ಹಾಗೂ ಜಿಲ್ಲಾಡಳಿತ ಕಾರ್ಯ ಶ್ಲಾಘನೀಯ:. ರಾಘವೇಂದ್ರ ಪಾಲನಕರ
The work of the Municipal Council and District Administration, which has given an urgent response to
ಲೋಕದರ್ಶನ ವರದಿ
ಗದಗ 16:- ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ 20, 23, ಹಾಗೂ 25 ನೇ ಜಂಟಿ ವಾರ್ಡಿನ ಹನಮನ ಗರಡಿ ಹತ್ತಿರದ ಬಡಾವಣೆಯ ನಾಗರಿಕರಿಗೆ ಕಳೆದ ಹಲವಾರು ವರ್ಷಗಳಿಂದ ದೈನಂದಿನ ಬಳಕೆಯ ನೀರಿನ ಅಭಾವದಿಂದಾಗಿ ಅತೀವ ನೀರಿನ ಬವಣೆಯನ್ನು ಎದುರಿಸುವಂತಾಗಿತ್ತು. ಆದರೆ ಇತ್ತೀಚಿಗೆ ಸಕಾಲಕ್ಕೆ ನಗರಸಭೆಯಿಂದ ಪೂರೈಕೆಯಾಗುವ ಕುಡಿಯುವ ನೀರು ಕೂಡಾ ನಿಗದಿತ ಸಮಯದಲ್ಲಿ ಬಾರದೇ ಇರುವುದರಿಂದ ಸನ್ಮಾನ್ಯ ಗದಗ ಬೆಟಗೇರಿ ನಗರಸಭೆ ವತಿಯಿಂದ ಟ್ಯಾಂಕರ್ ಮೂಲಕ ಅಗತ್ಯವಿರುವ ಬಡಾವಣೆಗಳಿಗೆ ನೀರು ಸರಬರಾಜು ಮಾಡಲು ಮುಂದಾಗಿತ್ತು.
ಆದರೆ ಬಡಾವಣೆಯಲ್ಲಿ ವಯೋವ್ರುದ್ದರು, ಮಹಿಳೆಯರು, ಮತ್ತು ಆಶಕ್ತರಿಗೆ ಈ ಒಂದು ನಗರಸಭೆಯಿಂದ ಪೂರೈಸಲಾಗುವ ಟ್ಯಾಂಕರ್ ನೀರು ನಿಲುಕದ ನಕ್ಷತ್ರವಾಗಿ ಪೂರೈಸಲಾದ ನೀರು ಸದ್ಭಳಕೆ ಮಾಡಿಕೊಳ್ಳಲಾಗದಂತಹ ಅಸಹಾಯಕ ಸ್ಥಿತಿಯುಂಟಾಗಿತ್ತು.
ಇದರಿಂದ ಹತಾಶೆಗೊಂಡ ಬಡಾವಣೆಯ ನಾಗರಿಕರು ನಗರಸಭೆಯಿಂದ ಪೂರೈಸಲಾದ ಟ್ಯಾಂಕರ್ ನೀರನ್ನು ತಿರಸ್ಕರಿಸಿ, ದೈನಂದಿನ ಬಳಕೆಯ ಬೋರ್ ವೇಲ್ ನೀರಿನ ವ್ಯವಸ್ಥೆ ಮಾಡಿಕೊಡಬೇಕೆಂದು ಆಗ್ರಹಿಸಿ ಬಡಾವಣೆಯ ಪ್ರಮುಖ ರಸ್ತೆಯನ್ನು ಬೆಳಿಗ್ಗೆ 10 ಘಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೂ ರಸ್ತೆಯಲ್ಲಿ ಖಾಲಿ ಕೊಡಗಳನ್ನೀಟ್ಟು ರಸ್ತೆ ರೋಖೋ ಮಾಡಲಾಗಿತ್ತು.
ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದ ಗದಗ ಬೆಟಗೇರಿ ನಗರಸಭೆಯ ಹಿರಿಯ ಕಾರ್ಯನಿರ್ವಾಹಕ ಅಭಿಯಂತರರಾದ ಸನ್ಮಾನ್ಯ ಲಕ್ಷ್ಮಣ ಮಾರುತಿ ಜೋಗದಂಡಕರ ಹಾಗೂ ನಗರಸಭೆಯ ಇನ್ನಿತರ ಅಧಿಕಾರಿಗಳು ಆದಷ್ಟು ಬೇಗನೆ ದೈನಂದಿನ ಬಳಕೆಗಾಗಿ ಬಡಾವಣೆಯಲ್ಲಿ ಬೋರ್ ವೇಲ್ ಹಾಕಿಸಿಕೊಡಲಾಗುತ್ತದೆ ಎಂದು ಭರವಸೆ ನೀಡಿದ್ದರು.
ಆ ಪ್ರಯುಕ್ತ ಇತ್ತೀಚಿಗೆ ಬಡಾವಣೆ ಹನಮನ ಗರಡಿ ಎದುರಿಗೆ ದೈನಂದಿನ ಬಳಕೆಯ ಬೋರ್ ವೇಲ್ ಹಾಕಿಸುವ ಮೂಲಕ ಬಡಾವಣೆಯ ನಾಗರಿಕರ ಕೂಗಿಗೆ ತಕ್ಷಣವೇ ಸ್ಪಂದನೆ ನೀಡಿದ ಜಿಲ್ಲಾಡಳಿತ,ಹಾಗೂ ಗದಗ ಬೆಟಗೇರಿ ನಗರಸಭೆಯ ಪೌರಾಯುಕ್ತರಾದ ಸನ್ಮಾನ್ಯ ರಾಜಾರಾಮ್ ಎಸ್ ಪವಾರ್, ಹಿರಿಯ ಕಾರ್ಯನಿರ್ವಾಹಕ ಅಭಿಯಂತರರಾದ ಲಕ್ಷ್ಮಣ ಮಾರುತಿ ಜೋಗದಂಡಕರ, ಪರಿಸರ ಅಭಿಯಂತರರಾದ ಆನಂದ ಬದಿ, ಹಾಗೂ ಎಮ್ ಎಮ್ ಮಕಾನದಾರ ರವರು ತುರ್ತಾಗಿ ಬಡಾವಣೆ ನಾಗರಿಕರಿಗೆ ಉಂಟಾದ ದೈನಂದಿನ ಬಳಕೆಯ ನೀರಿನ ಅಭಾವಕ್ಕೆ ತುರ್ತು ಜನಸ್ಪಂಧನೆಗೆ ಸಮಸ್ತ ಬಡಾವಣೆಯ ವಯೋವ್ರುದ್ದರು, ಮಹಿಳೆಯರು ಬಡಾವಣೆಯ ಸಮಸ್ತ ನಾಗರಿಕರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.
ಈ ಸಂಧರ್ಭದಲ್ಲಿ ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ, ಖಾಜಿ ಸಹೋದರರು, ಶೇಖ್, ರಾಯಕರ, ಕುಮಾರ ಮೆಣಸಗಿ, ಹಾಗೂ ಸೌಜನ್ಯತಾ ಸಮಗ್ರ ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಸಹನಾ ರಾಘವೇಂದ್ರ ಪಾಲನಕರ, ಕಟ್ಟಿಮನಿ, ಹಾಗೂ ಇನ್ನಿತರರು ಉಪಸ್ಥಿತರಿದ್ದು ನಗರಸಭೆ ಅಧಿಕಾರಿಗಳ ತುರ್ತು ಜನಸ್ಪಂಧನೆಗೆ ಶ್ಲಾಘನೆಯನ್ನು ವ್ಯಕ್ತಪಡಿಸಿರುತ್ತಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 