ಸತೀಶ ಜಾರಕಿಹೋಳಿ ಪೌಂಡೆಶನ್ ಕಾರ್ಯ ಶ್ಲಾಘನೀಯ: ಗುರುಸಿದ್ದೇಶ್ವರ ಶ್ರೀಗಳು

ಸತೀಶ ಜಾರಕಿಹೋಳಿ ಪೌಂಡೆಶನ್ ಕಾರ್ಯ ಶ್ಲಾಘನೀಯ: ಗುರುಸಿದ್ದೇಶ್ವರ ಶ್ರೀಗಳು The work of Satish Jarakiholi Foundation is commendable: Mr. Gurusiddeshwar

ಯಮಕನಮರಡಿ, 30 : ಜಾನಪದ ಕಲೆ ಹಾಗೂ ಸಂಸ್ಕೃತಿ ನಶಿಸಿ ಹೋಗುತ್ತಿರುವ ದಿಸೆಯಲ್ಲಿ ಸಚಿವ ಸತೀಶ ಜಾರಕಿಹೋಳಿಯವರು ಗ್ರಾಮೀಣ ಪ್ರದೇಶದ ವಿಧ್ಯಾರ್ಥಿಗಳಿಗೆ ಸೂಕ್ತ ವೇಧಿಕೆ ಕಲ್ಪಿಸಿ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುತ್ತಿರುವ ಕಾರ್ಯ ಸಂತಸ ತಂದಿದೆ ಎಂದು ಹತ್ತರಗಿಯ ಕಾರಿಮಠದ ಶ್ರೀಗುರುಸಿದ್ದೇಶ್ವರ ಮಹಾಸ್ವಾಮಿಗಳು ಹೆಳಿದರು.  

ಅವರು ಶನಿವಾರ ಯಮಕನಮರಡಿಯ ಎನ್ ಎಸ್ ಎಪ್ ಶಾಲಾ ಆವರಣದಲ್ಲಿ ಭವ್ಯವಾಗಿ ನಡೆಯುತ್ತಿರುವ ಸತೀಶ ಜಾರಕಿಹೋಳಿ ಪೌಂಡೆಶನ್ ಆಶ್ರಯದಲ್ಲಿ ನಡದ 12ನೇ ಸತೀಶ ಪ್ರತಿಭಾ ಪುರಸ್ಕಾರದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ ವಿದ್ಯಾರ್ಥಿಗಳ ಕಲೆಗೆ ಬೆಲೆ ಈ ವೇದಿಕೆಯಲ್ಲಿ ದೊರೆಯುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.  

ಸಾನಿದ್ಯ ವಹಿಸಿದ್ದದ ಹತ್ತರಗಿಯ ಹರಿಮಂದಿರದ ಡಾ. ಆನಂದ ಮಹಾರಾಜ ಗೋಸಾವಿಯವರು ಮಾತನಾಡಿ ಯಮಕನಮರಡಿಯಲ್ಲಿ ನಡೆಯುತ್ತಿರುವ ಸತೀಶ ಪ್ರತಿಭಾ ಪುರಸ್ಕಾರವು ಬಣ್ಣಿಸಲು ಅಸಾಧ್ಯವಾದ್ದದ್ದು. ಸತೀಶ ಜಾರಕಿಹೋಳಿ ತಾವೋಬ್ಬರೆ ಬೆಳೆಯದೆ ಸಮಾಜದಲ್ಲಿನ ಎಲ್ಲರನ್ನು ತಮ್ಮೊಟ್ಟಿಗೆ ಬೆಳೆಸುವ ಮಹದಾಸೆ ಉಳ್ಳವರಾಗಿದ್ದಾರೆ ಎಂದರು.  

ಯಮಕನಮರಡಿ ಹುಣಸಿಕೊಳ್ಳಮಠದ ಸಿದ್ದಬಸವ ದೇವರು ಮಾತನಾಡಿ, ಸಂಸ್ಕಾರದ ಗರಡಿ ಯಮಕನಮರಡಿಯಲ್ಲಿ ಇಂಥ ಸಾಂಸ್ಕ್ರತಿ ಭವ್ಯ ವೇದಿಕೆಯನ್ನು ಕಲ್ಪಿಸಿರುವುದು ಶ್ಲಾಘನೀಯ ಗಡಿಯಲ್ಲಿ ಬುಧ್ಧ ಬಸವ ಅಂಬೆಡ್ಕರರರ ದೇಯೊದ್ದೇಶಗಳನ್ನು ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ಸತೀಶ ಜಾರಕಿಹೋಳಿ ಗ್ರಾಮೀಣ ವಲಯದ ವಿದ್ಯಾರ್ಥಿಗಳ ಭವ್ಯ ಭವಿಷ್ಯತ್ತಿಗೆ ಕೈಗನ್ನಡಿಯಾಗಿದ್ದಾರೆ ಎಂದರು.  

ಕಾರ್ಯಕ್ರಮದ ಉದ್ಘಾಟನೆಯನ್ನು ಕಳೆದ ಬಾರಿ ಸತೀಶ ಪ್ರತಿಭಾ ಪುರಸ್ಕಾರ ಭಾಷಣ ಸ್ಪರ್ದೆ ವಿಜೇತ ವಿಧ್ಯಾರ್ಥಿಯಾದ ಆಕಾಂಕ್ಷಾ ರೊಟ್ಟಯ್ಯನವರ ನೆರವೇರಿಸಿದಳು. ವೇದಿಕೆಯಲ್ಲಿ ಸತೀಶ ಫೌಂಡೆಶನ್ ಕಾರ್ಯದರ್ಶಿ ರಿಯಾಜ್ ಚೌಗಲಾ, ಯುವ ಧುರಿಣ ಕಿರಣಸಿಣಂಗ ರಜಪೂತ್, ಯುವ ಧುರಿಣರಾದ ರವೀಂದ್ರ ಜಿಂಡ್ರಾಳಿ, ಯುವ ಮುಖಂಡರಾದ ಈರಣ್ಣಾ ಬಿಸಿರೊಟ್ಟಿ, ದಸ್ತಗೀರ ಬಸ್ಸಾಪುರಿ, ಹುಕ್ಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ ಯಮಕನಮರಡಿ ಗ್ರಾ ಪಂ ಅಧ್ಯಕ್ಷೇ ಅಸ್ಮಾ ಪಣಿಬಂದ, ಹತ್ತರಗಿ ಗ್ರಾಂ ಪಂ ಅಧ್ಯಕ್ಷ ಸಮೇರ ಭೇಪಾರಿ, ಎಸ್ ಎ ಅತ್ಯಾಳಿ, ಹತ್ತರಗಿಗ್ರಾ ಪಂ ಅಭಿವೃದ್ದಿ ಅಧಿಕಾರಿ ಆನಂದ ಹೊಳೆನ್ನವರ ಮತ್ತಿತರರು ಉಪಸ್ಥಿತರಿದ್ದರು.