ಮಹಿಳೆಯ ಮಾತೃ ಹೃದಯಕ್ಕೆ ಬಚಾವಾದ ನವಜಾತ ಶಿಶುವಿನ ಜೀವ

ಲೋಕದರ್ಶನವರದಿ

ಮಹಾಲಿಂಗಪುರ 04:  ಬೆಳ್ಳಂಬೆಳಿಗ್ಗೆ ಚಿಂದಿ ಆಯುವ ಮಹಿಳೆಗೆ ನವಜಾತ ಶಿಶುವೊಂದು ಸಿಕ್ಕ ಅಪರೂಪದ ಘಟನೆ ನಗರದಲ್ಲಿ ನಡೆದಿದೆ.  

          ಬೆಳಿಗಿನ ಜಾವ 6 ಗಂಟೆಗೆ  ಲಕ್ಷ್ಮೀ ಸಿಕ್ಕಲಗಾರ ಚಿಂದಿ ಆಯುತ್ತಾ  ಸ್ಥಳೀಯ ಮಮದಾಪುರ ಪೆಟ್ರೋಲ್ ಬಂಕದ ಹತ್ತಿರ ಕಸದ ತೊಟ್ಟಿಯಲ್ಲಿ  ನವಜಾತ ಗಂಡು ಮಗವೊಂದು ಅಪ್ಪನು ಅಮ್ಮನೂ ಇಲ್ಲ ಎಂಬಂತೆ ಅಳುತ್ತಿರುವುದನ್ನು ಕಂಡು,  ಆ ಮಹಿಳೆಯ ಮಾತೃ ಹೃದಯ ಕರಗಿ ಹೋಗಿದೆ. ನಂತರ ವೈದ್ಯರ ಬಳಿ ತಪಾಸಿಸಿ ಮಗುವನ್ನು ತನ್ನ ಮನೆಗೆ ತೆಗೆದುಕೊಂಡು ಹೋಗಿ ಮಾನವೀಯತೆ  ಮೆರೆದಿದ್ದಾಳೆ.  

            ಮರುದಿನ ಬೆಳಿಗ್ಗೆ ಅಂದರೆ ನಿನ್ನೆ ಬೆಳಿಗ್ಗೆ 11 ಗಂಟೆಗೆ ಸ್ಥಳೀಯ ಪೋಲೀಸ್ ಠಾಣೆಗೆ ಬಂದು ಆ ಮಗುವನ್ನು ಒಪ್ಪಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೋಲೀಸರು ಸ್ಥಳೀಯ ಸರಕಾರಿ ವೈದ್ಯಾಧಿಕಾರಿ ವಿಶ್ವನಾಥ ಗುಂಡಾ ಅವರ ಬಳಿ ಮಗುವನ್ನು ಮತ್ತೆ ತಪಾಸಣೆ ಮಾಡಿಸಿ, ಮಗು ಆರೋಗ್ಯವಾಗಿರುವ ಬಗ್ಗೆ ಖಾತರಿಪಡಿಸಿಕೊಂಡು ಬಾಗಲಕೋಟೆ ಜಿಲ್ಲಾ ದತ್ತು ಸ್ವೀಕಾರ ಕೇಂದ್ರಕ್ಕೆ  ನಿದರ್ೆಶಕ ವೆಂಕಟೇಶ ಮುಖೆ ಅವರ ಸುಪದರ್ಿಗೆ ಮಗುವನ್ನು ಒಪ್ಪಿಸಿದ್ದಾರೆ.   ಈಗ ಮಗು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ ಕ್ಷೇಮವಾಗಿದ್ದು ಕಾನೂನಿನನ್ವಯ 60 ದಿವಸಗಳ ದತ್ತು ಸ್ವೀಕಾರ ಕೇಂದ್ರವೇ ಮಗುವನ್ನು ಸಾಕುತ್ತದೆ. ನಂತರ ನಿಯಮಾವಳಿ ಪ್ರಕಾರ ದತ್ತು ನೀಡುವ ಪ್ರಕ್ರಿಯೆ ನಡೆಯುತ್ತದೆ.  ಈ ಮಗುವಿಗೆ ಸಂಬಂಧಿಗಳಾರಾದರೂ ಇದ್ದರೆ ತಕ್ಷಣವೇ ಸ್ಥಳೀಯ ಪೋಲೀಸ್ ಠಾಣೆ ಸಂಪಕರ್ಿಸಲು ಪಿಎಸ್ಐ ರಾಜು ಬೀಳಗಿ ತಿಳಿಸಿದ್ದಾರೆ. ಎಎಸ್ಐ ಎಸ್. ಬಿ. ಹಿರೇಕುರುಬರ, ಸಿಬ್ಬಂದಿ ಅಶೋಕ ಸವದಿ, ಎಸ್. ಎಸ್. ನಾವಿ, ಎಂ. ಎಸ್. ಕಣಶೆಟ್ಟಿ, ಭೀಮಶೀ ನಾಯಕ ಇತರರು ಇದ್ದರು.