ಪಂಪಾಪತಿ ಮತ್ತು ಹಂಪಮ್ಮ ದೇವಿಯ ವಿವಾಹ ಮಹೋತ್ಸವ
The wedding celebration of Pampapati and Hampamma Devi
ಕಂಪ್ಲಿ 30: ಪಟ್ಟಣದ ಕೋಟೆಯ ಐತಿಹಾಸಿಕ ಶ್ರೀ ಪಂಪಾಪತಿ ಸ್ವಾಮಿಯ ಮಹಾರಥೋತ್ಸವದ ಅಂಗವಾಗಿ ಶುಕ್ರವಾರ ದೇವಸ್ಥಾನದ ಆವರಣದಲ್ಲಿ ಶ್ರೀ ಪಂಪಾಪತಿ ಹಾಗೂ ಹಂಪಮ್ಮ ದೇವಿಯ ವಿವಾಹಮಹೋತ್ಸವ ಸಮಾರಂಭವು ಅತ್ಯಂತ ಅದ್ದೂರಿಯಿಂದ ಜರುಗಿತು. ಇದಕ್ಕೂ ಮುನ್ನ ರಥಕ್ಕೆ ಅಳವಡಿಸುವ ಕಳಸ ಧಾರಣೆ ಹಾಗೂ ಶ್ರೀ ಪಂಪಾಪತಿ ಮತ್ತು ಹಂಪಮ್ಮ ದೇವಿಯ ವಿವಾಹದ ಸವಾಲುಗಳು ನಡೆದವು. ಕಳಸ ಧಾರಣೆಯನ್ನು ಬೆಂಗಳೂರು ನಿವಾಸಿಗಳು ಕೋಟೆಯ ರೂಪಾ ರವೀಂದ್ರ ದಂಪತಿಗಳು 5555 ಸಾವಿರ ರೂಗಳಿಗೆ ಪಡೆದು ಮಂಗಲವಾಧ್ಯಗಳೊಂದಿಗೆ ರಥಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಿ ಕಳಸಧಾರಣೆ ಮಾಡಿದರು.
ನಂತರ ಶ್ರೀ ಪಂಪಾಪತಿಯ ಕುಟುಂಬದವರಾಗಿ ಎಚ್.ಎಂ.ವಿಶ್ವನಾಥ ದಂಪತಿಗಳು 5555 ಸಾವಿರ ರೂಗಳಿಗೆ ಮತ್ತು ಹಂಪಮ್ಮದೇವಿಯ ಕುಟುಂಬದವರಾಗಿ ಅಳ್ಳಿ ಸಿದ್ದೇಶ ದಂಪತಿಗಳು 6000 ಸಾವಿರ ರೂಗಳಿಗೆ ಸವಾಲಿನಲ್ಲಿ ಪಡೆದು ವಿವಾಹ ಮಹೋತ್ಸವವನ್ನು ನಡೆಸಿಕೊಟ್ಟರು. ಪುರೋಹಿತ ಶಿವುಕುಮಾರ ಶಾಸ್ತ್ರಿ, ಶರಣಬಸಯ್ಯಸ್ವಾಮಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧೆಯಿಂದ ನಡೆದವು. ಶ್ರೀ ಪಂಪಾಪತಿ ಸ್ವಾಮಿಯ ವಿಗ್ರಹಕ್ಕೆ ರುದ್ರಾಭಿಷೇಕ ಸೇರಿದಂತೆ ವಿವಿದ ಅಭಿಷೇಕಗಳು ನೆರವೇರಿಸಿ ನಂತರ ಚಿನ್ನಾಭರಣ, ಬೆಳ್ಳಿಯ ಮುಖವಾಡವನ್ನು ಇಟ್ಟು ವಿವಿಧ ಹೂಗಳಿಂದ ಅಲಂಕರಿಸಿ ಮಹಾಮಂಗಳಾರತಿ ಮಾಡಿದರು. ವಿವಾಹ ಮಹೋತ್ಸವದ ನಂತರ ಸಕಲ ಸದ್ಬಕ್ತರಿಗೆ ಅನ್ನಸಂತರೆ್ಣ ಜರುಗಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 