ಸ್ಥಳೀಯ ಕಲೆ, ಸಂಗೀತ ಸಾಧಕರ ಕಾವ್ಯಾತ್ಮಕ ನೋಟ ಬೀರುವ ಜಿಲ್ಲಾಧಿಕಾರಿ ಕಚೇರಿಯ ಆವರಣ ಗೋಡೆ ಮತ್ತು ಒಳಾಂಗಣ ನೋಟ
The wall and interior of the DC Office, which showcases a poetic vision of local art and music pract
ಧಾರವಾಡ ಆ.13: ಧಾರವಾಡ ಜಿಲ್ಲೆಯ ಸಾಹಿತ್ಯ, ಸಂಗೀತ ಮತ್ತು ಕಲೆಯನ್ನು ವಿಶ್ವಮಟ್ಟಕ್ಕೆ ಪರಿಚಯಿಸಿದ ಮಹನೀಯರ ಭಾವಚಿತ್ರಗಳನ್ನು ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಆವರಣ, ಕಾಯುವ ಕೊಠಡಿ ಮತ್ತು ಆವರಣ ಗೋಡೆಯು ಅಲಂಕರಿಸಿರುವುದು ಧಾರವಾಡದ ಸೊಗಡನ್ನು ಹೆಚ್ಚಿಸಿದೆ.
ಕೆಳದ ಎರಡು ದಿನಗಳಿಂದ ಸ್ಥಳೀಯ ಕಲಾವಿದರು, ಯುವ ಕಲಾವಿದರು ತಮ್ಮ ಕುಂಚಗಳಿಂದ ಜಿಲ್ಲಾಧಿಕಾರಿಗಳ ಕಚೇರಿಯ ಆವರಣ ಗೋಡೆಯನ್ನು ವಿವಿಧ ಸಾಧಕರ ಭಾವಚಿತ್ರಗಳನ್ನು ಬಿಡಿಸುವ ಮೂಲಕ ಅಲಂಕರಿಸುತ್ತಿದ್ದಾರೆ.
ವಿಶೇಷವಾಗಿ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದ ಡಾ. ದ.ರಾ.ಬೇಂದ್ರೆ, ಡಾ. ವಿ.ಕೃ.ಗೋಕಾಕ, ಡಾ. ಗೀರೀಶ ಕಾರ್ನಾಡ ಅವರ ಭಾವಚಿತ್ರಗಳು, ಸಂಗೀತಗಾರರಾದ ಗಂಗೂಬಾಯಿ ಹಾನಗಲ್, ಭೀಮಸೇನ್ ಜೋಶಿ, ಮಲ್ಲಿಕಾರ್ಜುನ ಮನಸೂರ, ಬಸವರಾಜ ರಾಜಗುರು ಅವರ ಭಾವಚಿತ್ರಗಳನ್ನು ಚಿತ್ರಿಸಿದ್ದಾರೆ.
ಕಂಪೌಂಡ್ ಗೋಡೆಯ ಮೇಲೆ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ಉಪನ್ಯಾಸಕರ ನೇತೃತ್ವದಲ್ಲಿ ಧಾರವಾಡಕ್ಕೆ ಸಂಬಂಧಪಟ್ಟ ಸ್ಥಳೀಯ ಚಿತ್ರಗಳನ್ನು ಚಿತ್ರಿಸುತ್ತಿದ್ದಾರೆ.
ಒಟ್ಟು 40 ಚಿತ್ರಕಲಾ ವಿದ್ಯಾರ್ಥಿಗಳು ಹಾಗೂ 4 ಜನ ಶಿಕ್ಷಕರು, ಶ್ರಮಪಟ್ಟು ತಮ್ಮ ಕಲಾ ಕೌಶಲ್ಯವನ್ನು ಬಳಸಿ ಚಿತ್ರಗಳನ್ನು ಚಿತ್ರಿಸುತ್ತಿದ್ದಾರೆ.
ಅದೇ ರೀತಿ ಭಾರತೀಯ ಜಾನಪದ ಕಲೆ, ಮಹಾರಾಷ್ಟ್ರ ಮೂಲದ ವರ್ಲಿಕಲೆಯ ಸೊಬಗು, ಸ್ಥಳೀಯ ಸ್ಮಾರಕಗಳು, ವಾದ್ಯಗಳನ್ನು ನುಡಿಸುವುದು, ಗ್ರಾಮೀಣ ಸೊಗಡು, ಪಕ್ಷಿಗಳ ನೈಸರ್ಗಿಕ ಸೌಂದರ್ಯ, ವನ್ಯಜೀವಿಗಳ ಜೀವನ ಶೈಲಿ, ಹಾಗೂ ಸಾಹಿತ್ಯದ ಪ್ರೇರಣೆಯನ್ನು ಕಲಾತ್ಮಕವಾಗಿ ಚಿತ್ರಗಳ ಮೂಲಕ ಬಿತ್ತರಿಸುತ್ತಿದ್ದಾರೆ. ಅಲ್ಟ್ರೀಮಾ ಬಣ್ಣ, ಅಕ್ರಾಲಿಕ್ ಬಣ್ಣವನ್ನು ಬಳಸಿಕೊಂಡು ಚಿತ್ರಗಳನ್ನು ಬಿಡಿಸಿದ್ದಾರೆ. ಇದು ಹಲವು ವರ್ಷಗಳವರೆಗೆ ಬಾಳಿಕೆ ಬರುತ್ತದೆ.
ಚಿತ್ರಕಲೆ ಬಿಡಿಸುವಲ್ಲಿ ವಿದ್ಯಾರ್ಥಿಗಳೊಂದಿಗೆ ಸರಕಾರಿ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಸವರಾಜ ಕುರಿ, ಪ್ರೊ. ಎಸ್ .ಕೆ. ಪತ್ತಾರ, ಶಿವಕುಮಾರ ಕಂಕನವಾಡಿ ಅವರು ಭಾಗವಹಿಸಿದ್ದಾರೆ.
ಜಿಲ್ಲಾಧಿಕಾರಿಗಳ ಅಭಿಪ್ರಾಯ:
ಧಾರವಾಡದ ಸ್ಥಳೀಯ ಕಲೆ, ಸಾಹಿತ್ಯ, ಸಂಗೀತ ಮತ್ತು ರಂಗಭೂಮಿಯ ಸಾಧಕರನ್ನು ಸರ್ಕಾರಿ ಕಚೇರಿ ಹಾಗೂ ಕಟ್ಟಡಗಳಲ್ಲಿ ಚಿತ್ರಿಸುವದರಿಂದ ನಮ್ಮ ಪರಂಪರೆ, ಸಂಸ್ಕೃತಿ ಸಾಧನೆಯನ್ನು ಹೆಮ್ಮೆಯಿಂದ ನೆನಪಿಸಿಕೊಂಡಂತೆ ಆಗುತ್ತದೆ. ಯುವ ಪೀಳಿಗೆಗೆ ನಮ್ಮ ಜಿಲ್ಲೆಯ ಹೆಮ್ಮೆಯ ಸಂಗತಿಗಳು, ಸಾಧನೆಗಳನ್ನು ತಿಳಿಸುವುದು ಈ ಚಿತ್ರಕಲೆಗಳ ಉದ್ದೇಶವಾಗಿದೆ. ದಿನನಿತ್ಯ ನೂರಾರು ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಚೇರಿಗೆ ವಿವಿಧ ಕಾರಣಗಳಿಗಾಗಿ ಭೇಟಿ ನೀಡುವದರಿಂದ ಅವರ ಮನ, ಮನೆಗಳಿಗೆ ಜಿಲ್ಲೆಯ ಇತಿಹಾಸ, ಸಾಧಕರ ಮಾಹಿತಿ ತಲಪುತ್ತದೆ. ಜಿಲ್ಲಾಡಳಿತ ಸ್ಥಳೀಯ ಕಲೆ, ಸಾಹಿತ್ಯ, ಸಂಗೀತ ಪೋಷಣೆಗೆ ಆದ್ಯತೆ ನೀಡಿ, ಕಾರ್ಯಕ್ರಮಗಳಿಗೆ ಅವಕಾಶ ಮಾಡಿಕೊಡುತ್ತಿದೆ.
-ಜಿಲ್ಲಾಧಿಕಾರಿ ದಿವ್ಯ ಪ್ರಭು
ಸಾರ್ವಜನಿಕರ ಅಭಿಪ್ರಾಯ:
ಧಾರವಾಡದಲ್ಲಿರುವ ಡಿಸಿ ಕಚೇರಿಗೆ ಕಾಲಿಟ್ಟರೆ.. ಸಾಮಾನ್ಯ ನಿಷ್ಠುರ ರಾಜಕೀಯ ಭಾವಚಿತ್ರಗಳ ಬದಲಿಗೆ, ಕರ್ನಾಟಕದ ಚೈತನ್ಯಕ್ಕೆ ಸಂಗೀತ ನೀಡಿದ ನಮ್ಮದೇ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ ಡಿ. ಆರ್. ಬೇಂದ್ರೆಯವರ ಕಾವ್ಯಾತ್ಮಕ ನೋಟವು ನಿಮ್ಮನ್ನು ಸ್ವಾಗತಿಸುತ್ತದೆ.
ಇದು ಕೇವಲ ಒಳಾಂಗಣ ಅಲಂಕಾರವಲ್ಲ. ಇದು ಕಥೆ ಹೇಳುವಿಕೆ, ಇದು ಗುರುತು, ಇದು ಸ್ಥಳೀಯರಿಗಾಗಿ ಧ್ವನಿ ಕಾರ್ಯಕ್ರಮವಾಗಿದೆ.
ಧಾರವಾಡ ಕರ್ನಾಟಕಕ್ಕೆ ಅಸಂಖ್ಯಾತ ಕವಿಗಳು, ಬರಹಗಾರರು ಮತ್ತು ಗಾಯಕರನ್ನು ಉಡುಗೊರೆಯಾಗಿ ನೀಡಿದೆ. ಅವರ ಮಾತುಗಳು ಮತ್ತು ಹಾಡುಗಳು ನಮ್ಮ ಮಣ್ಣಿನ ಪರಿಮಳವನ್ನು ಹೊತ್ತಿವೆ.
ಡಿಸಿ ಕಚೇರಿ ಒಳಾಂಗಣ ಮತ್ತು ಆವರಣ ಗೋಡೆಗಳನ್ನು ಇದು ಸುಂದರಗೊಳಿಸುವುದಲ್ಲದೆ ಸರ್ಕಾರವನ್ನು ಜನರ ಸರ್ಕಾರವನ್ನಾಗಿ ಮಾಡುತ್ತದೆ. ಇದು ಹೆಮ್ಮೆಯನ್ನು ಪ್ರೇರೇಪಿಸುತ್ತದೆ. ಇದು ಪ್ರವಾಸೋದ್ಯಮವನ್ನು ಹುಟ್ಟುಹಾಕುತ್ತದೆ. ಇದು ನಮ್ಮ ಮಕ್ಕಳಿಗೆ "ಇವರೇ ನಾವು" ಇತಿಹಾಸ ಹೇಳುತ್ತದೆ.
ಕಾಯುವ ಕೋಣೆಯನ್ನು ಕಲೆ ಮಾತನಾಡುವ ಸ್ಥಳವನ್ನಾಗಿ ಪರಿವರ್ತಿಸಿದ್ದಕ್ಕಾಗಿ ಧಾರವಾಡ ಡಿಸಿ ದಿವ್ಯ ಪ್ರಭು ಅವರಿಗೆ ದೊಡ್ಡ ಅಭಿನಂದನೆಗಳು.
ಇದು ಎಲ್ಲೆಡೆ ಸ್ಥಳೀಯ ಸಂಸ್ಕೃತಿಯನ್ನು ಆಚರಿಸುವ ಆಂದೋಲನದ ಆರಂಭವಾಗಲಿ.
-ಮುರಳಿ ರಾಮನಾಥ, ಉದ್ಯಮಿ (ಎಕ್ಸ್ ಖಾತೆಯಲ್ಲಿ)
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 