ಶರಣರ ವಚನ ಕೇಳುವುದರ ಜೊತೆಗೆ ಪಾಲಿಸಬೇಕು: ಡಾ, ಸೀಮಾ ರಾಜೂರ

ಶರಣರ ವಚನ ಕೇಳುವುದರ ಜೊತೆಗೆ ಪಾಲಿಸಬೇಕು: ಡಾ, ಸೀಮಾ ರಾಜೂರ The vow of the sharan should be listened to and followed: Dr. Seema Rajura

ಕೊಪ್ಪಳ 13 :  ಶರಣರ ವಚನ ಸಾಹಿತ್ಯದಲ್ಲಿ ಅಪಾರವಾದ ಶಕ್ತಿ ಅಡುಗಿದೆ ವಚನ ಕೇಳುವುದರ ಜೊತೆಗೆ ಪಾಲಿಸಬೇಕು ಅದನ್ನು ಪಾಲಿಸಿದರೆ ಉತ್ತಮ ಸಮಾಜ ನಿರ್ಮಾಣ ಗೊಳ್ಳುತ್ತದೆ ಎಂದು ಡಾ, ಸೀಮಾ ಉಮೇಶ್ ರಾಜೂರು ಹೇಳಿದರು.

 ಅವರು ನಗರದ ಕೋಟೆ ರಸ್ತೆಯಲ್ಲಿರುವ ಶ್ರೀ ಅಕ್ಕಮಹಾದೇವಿ ಮಹೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ಅಕ್ಕಮಹಾದೇವಿ ಮಹಿಳಾ ಮಂಡಳಿ ವತಿಯಿಂದ ಏರಿ​‍್ಡಸಿದ ವಚನ ಶ್ರಾವಣ ಕಾರ್ಯಕ್ರಮ ದ ಉದ್ಘಾಟನೆ ನೆರವೇರಿಸಿ ಮಾತನಾಡಿದರು, ಮುಂದುವರೆದು ಮಾತನಾಡಿದ ಅವರು ನಾಲಿಗೆಯ ರುಚಿ ಬಿಟ್ಟರೆ ಶರೀರಕ್ಕೆ ಲಾಭ ವಾದ ವಿವಾದಗಳನ್ನು ಬಿಟ್ಟರೆ ಸಂಬಂಧಗಳಿಗೆ ಲಾಭ ಅದರಂತೆ ವ್ಯರ್ಥ ಚಿಂತನೆ ಮತ್ತು ಚರ್ಚೆಗಳನ್ನು ಬಿಟ್ಟರೆ ಇಡೀ ಜೀವನಕ್ಕೆ ಲಾಭ ವಾಗುತ್ತಿದೆ ಎಂದು ಹೇಳಿದ ಅವರು ಸಾಧನೆ ಮಾಡಲು ಹೊರಟವರಿಗೆ ದಾರಿಯಲ್ಲಿ ಬೆಕ್ಕುಗಳಿಗಿಂತ ಹೆಚ್ಚು ಜನಗಳೇ ಅಡ್ಡ ಬರುತ್ತಾರೆ ಅದನ್ನು ಲೆಕ್ಕಿಸದೆ ಸಾಧನೆ ಮಾಡಬೇಕು , ಸಾಧನೆಗಳನ್ನು ಮಾಡಬೇಕು ಎನ್ನುವುದು ಏನು ಇಲ್ಲ ಸರಳತೆಯಿಂದ ಇದ್ದು ಒಳ್ಳೆಯದನ್ನು ಮಾಡ್ತಾ ಹೋದರೆ ಅದು ಕೂಡ ಒಂದು ದೊಡ್ಡ ಸಾಧನೆ ಎಂದು ಹೇಳಿದರು,ಸರ್ವಜ್ಞನ ಬಗ್ಗೆ ತಿಳಿಸಿದ ಅವರು ಅವರ ವಚನಗಳ ಮಹತ್ವ ಹಾಗೂ ಬದಲಾವಣೆಯಾದ ಸಂಬಂಧ ಗಳ ಕುರಿತು ಜನರ ನಡೆ ನುಡಿ ಗಳು ಎಲ್ಲರೂ ಮೆಚ್ಚುವಂತೆ ಇರಬೇಕು ಹಾಗೂ ಅನ್ನದಾನ ಶ್ರೇಷ್ಠವಾದ ದಾನವಾಗಿದೆ ಇದರ ಬಗ್ಗೆ ಮಾಹಿತಿ ನೀಡಿ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಶ್ರಮಿಸಬೇಕು ಜನರಲ್ಲಿ ವಿಶೇಷವಾಗಿ ಮಹಿಳೆಯರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಇಂತಹ ಸಂಘಟನೆಗಳು ಮಾಡಬೇಕೆಂದು ಡಾ, ಸೀಮಾ ಉಮೇಶ್ ರಾಜೂರು ಹೇಳಿದರು, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಡಾ ಪೂರ್ಣಿಮಾ ವೀರೇಶ್ ಹಿರೇಮಠ್ ರವರು ಮಾತನಾಡಿ ವಚನಕಾರರು ಹೇಗೆ ವಚನಗಳನ್ನು ಬರೆದಿದ್ದಾರೆ ಸಮಾಜದ ಏಳಿಗೆಗೆ ಹೇಗೆ ಸ್ಪಂದಿಸಬೇಕು ಎಂದು ತಿಳಿಸಿ ಶ್ರೀ ಅಕ್ಕಮಹಾದೇವಿ ಮಹಿಳಾ ಮಂಡಳ ನಡೆದು ಬಂದ ದಾರಿಯ ಬಗ್ಗೆ ವಿವರಿಸಿದ್ದರು.

 ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಅಕ್ಕಮಹಾದೇವಿ ಮಹಿಳಾ ಮಂಡಳದ ಅಧ್ಯಕ್ಷರಾದ ಕೋಮಲಾ   ಕುದುರೆಮೋತಿಯವರು ವಹಿಸಿ ಮಾತನಾಡಿ ವಚನ ದ ಮಹತ್ವ ತಿಳಿಸಿದರು ಹಾಗೂ 12ನೇ ಶತಮಾನದಲ್ಲಿ ಶರಣು ಶರಣೀಯರ ಅನುಭವ ಗಳ ಬಗ್ಗೆ ಅವರು ಮಾಡಿದಂತ ಕಾರ್ಯ ಗಳ ಬಗ್ಗೆ ಅವರ ಅಂಕಿತನಾಮ ವಚನಗಳ ಕುರಿತು ವಿವರಿಸಿ  ಮಂಡಳಿ ಯ ಪ್ರತಿ ವರ್ಷದಂತೆ ಈ ವರ್ಷವೂ ಸಹ ಕೈಗೊಂಡ ವಿವಿಧ ಸಮಾಜ ಸೇವಾ ಕಾರ್ಯಗಳ ಬಗ್ಗೆ ಅಧ್ಯಕ್ಷೀಯ ಭಾಷಣದಲ್ಲಿ ಮಾಹಿತಿ ನೀಡಿದರು, ಕಾರ್ಯಕ್ರಮದಲ್ಲಿ ಶ್ರೀ ಅಕ್ಕಮಹಾದೇವಿ ಮಹಿಳಾ ಮಂಡಳದ ನೂತನ ಅಧ್ಯಕ್ಷರಾದ ಮಧು ಪಂಡಿತ್ ಹಡಗಲಿ ಯವರು ಮಾತನಾಡಿ 12ನೇ ಶತಮಾನದ ಶರಣರ ಬಗ್ಗೆ ಪ್ರಸ್ತುತಪಡಿಸಿದರು.

 ನೂತನ ಉಪಾಧ್ಯಕ್ಷರಾದ ಸುಧಾ ನಾಗಣ್ಣ ಚಕ್ಕಿ ಸ್ವಾಗತಿಸಿ ಶುಭ ಕೋರಿದರು ,ಸಂಗೀತ ಕಲಾವಿದೆ ಅನ್ನಪೂರ್ಣಮ್ಮ ಮಹೇಶ್ ಮನ್ನಾಪುರ ರವರು ಆರಂಭದಲ್ಲಿ ಪ್ರಾರ್ಥನೆ ಗೀತೆ ಹಾಡಿದರೆ ,ಜ್ಯೋತಿ ವಡ್ಡಟ್ಟಿಯವರು ಆರಂಭದಲ್ಲಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಮತ್ತು ಅತಿಥಿ ಪರಿಚಯವನ್ನು  ನಂದಾ ಎಂ ಕುದ್ರಿಮೋತಿ ಮತ್ತು ಪೂಜಾ ,ಅನಿಲ್ ನಾಲ್ವಾಡ  ರವರು ನೆರವೇರಿಸಿ ಕೊಟ್ಟರು ,ಕೊನೆಯಲ್ಲಿ ವಿಜಯಲಕ್ಷ್ಮಿ ಮುದ್ಗಲ್ ವಂದಿಸಿದರು, ಸದ್ರಿ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಗಿರಿಜಕ್ಕ ಬಳ್ಳೊಳ್ಳಿ  ವಿಜಯಾ ಬಳ್ಳೊಳ್ಳಿ, ಶಕುಂತಲಾ ಬಂಗಾರ ಶೆಟ್ರು ,ಲಲಿತಾ ಸಂಡೂರ್,  ನಿವೇದಿತಾ ಸಂಕ್ಲಾಪುರ, ಸುನಂದ ಮುದುಗಲ್, ಗೀತಾ, ಮಂಜುಳಾ ಬೋಸ್ಲೆ ವಿಜಯಲಕ್ಷ್ಮಿ ಬಳ್ಳೊಳ್ಳಿ ಪವಿತ್ರಮ್ಮ ಬಿಸ್ನಳ್ಳಿ, ಸುಶೀಲಾ ನಮ್ರತಾ ,ಪೂರ್ಣಿಮಾ, ಪದ್ಮ, ಲಲಿತಾ ಗುತ್ತಿ,ಸೇರಿದಂತೆ ಸಾಕಷ್ಟು ಮಹಿಳೆಯರು ಪಾಲ್ಗೊಂಡಿದ್ದರು,