ಗ್ರಾಮದೇವತೆ ಭಕ್ತರ ಇಷ್ಟಾರ್ಥ ಪೋರೈಸುವ ಶಕ್ತಿದೇವತೆಯಾಗಿದ್ದಾಳೆ: ಅನಂತಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ
The village goddess is a powerful goddess who fulfills the wishes of devotees: Anantashree Vibhushit
ಬೆಟಗೇರಿ 12 : ಗ್ರಾಮದೇವತೆ ದ್ಯಾಮವ್ವದೇವಿ ಮಹಾನ ಆದಿಶಕ್ತಿದೇವಿಯಾಗಿದ್ದಾಳೆ. ತನ್ನಲ್ಲಿ ಬಂದ ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಮಹಾನ್ ಶಕ್ತಿ ದೇವತೆಯಾಗಿದ್ದಾಳೆ ಎಂದು ಹಾಸನ ಜಿಲ್ಲೆ ಅರಕಲಗೂಡು ತಾಲೂಕು ಅರೇಮಾದನಹಳ್ಳಿ ವಿಶ್ವಕರ್ಮ ಜಗದ್ಗುರು ಪೀಠದ ಅನಂತಶ್ರೀ ವಿಭೂಷಿತ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿ ಹೇಳಿದರು.
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕು ಅರೇಮಾದನಹಳ್ಳಿ ವಿಶ್ವಕರ್ಮ ಜಗದ್ಗುರು ಪೀಠದ ಪೂಜ್ಯರ ಉತ್ತರಾಧಿಕಾರಿಗಳಿಗೆ ಸನ್ಯಾಸ ದೀಕ್ಷಾ ಮತ್ತು ಶಿಷ್ಯ ಸ್ವೀಕಾರ ಸಮಾರಂಭ ಮುಂದಿನ ತಿಂಗಳು ಫೆ.25 ಮತ್ತು 26 ರಂದು ಜರುಗಲಿದೆ ಇದರ ಪ್ರಯುಕ್ತ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿಶ್ವಕರ್ಮ ಸಮುದಾಯದ ಸಕಲರಿಗೂ ಆಹ್ವಾನ ನೀಡುವ ಸಲುವಾಗಿ ಬೆಟಗೇರಿಗೆ ಜ.10ರಂದು ಶ್ರೀಗಳ ಭೇಟಿ, ಪಾದಪೂಜೆ, ಪೂರ್ವಭಾವಿ ಸಭೆಯ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ನಮ್ಮ ದೇಶ, ಕನ್ನಡ ನಾಡು ಭವ್ಯ ಪರಂಪರೆ ಹೊಂದಿದೆ. ಇಂದಿನ ಪ್ರತಿಯೊಬ್ಬ ಯುವಕರು ನಮ್ಮ ದೇಶ, ನಾಡು, ನುಡಿ, ಕಲೆ, ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯವನ್ನು ಮೈಗೂಡಿಸಿಕೊಳ್ಳಬೇಕು. ಭವ್ಯ ಪರಂಪರೆ, ಸಂಪ್ರದಾಯ, ಸಂಸ್ಕೃತಿ, ಸಂಸ್ಕಾರವನ್ನು ಮುಂದಿನ ಪೀಳಿಗೆಗೆ ಮುಂದುವರಿಸಿಕೊಂಡು ಹೋಗಬೇಕು. ನಮ್ಮ ನಾಡಿನಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಣಬಹುದು ಎಂದು ಅನಂತಶ್ರೀ ವಿಭೂಷಿತ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿ ಅಭಿಪ್ರಾಯಿಸಿದರು.
ಸ್ಥಳೀಯ ಗ್ರಾಮದೇವತೆ ದ್ಯಾಮವ್ವದೇವಿ ದೇವಾಲಯದ ಸಭಾಂಗಣದಲ್ಲಿ ಜ.11ರಂದು ಸ್ಥಳೀಯ ವಿಶ್ವಕರ್ಮ ಸಮಾಜದ ಹಲವಾರು ಜನ ಭಕ್ತರಿಂದ ಆಗಮಿತ ಶ್ರೀಗಳ ಪಾದಪೂಜೆ ಕಾರ್ಯಕ್ರಮ ನಡೆದ ಬಳಿಕ ಸಿಹಿ ಉಪಹಾರ ವಿತರಣೆ ಕಾರ್ಯಕ್ರಮ ಜರುಗಿತು.
ಸ್ಥಳೀಯ ಮುಖಂಡ ಲಕ್ಷ್ಮಣ ಸೋಮಗೌಡ್ರ, ಶಿವಾಜಿ ನೀಲಣ್ಣವರ, ವಿಶ್ವನಾಥ ಶೀಗಿಹಳ್ಳಿ, ರಾಜು ಪತ್ತಾರ, ಸುರೇಶ ಬಡಿಗೇರ, ಬಸವರಾಜ ಬಡಿಗೇರ, ಉಮೇಶ ಬಡಿಗೇರ, ಗುಳಪ್ಪ ಪಣದಿ, ಪರಸಪ್ಪ ಬಡಿಗೇರ, ಪ್ರವೀಣ ಪತ್ತಾರ, ಸಂತೋಷ ಬಡಿಗೇರ, ಭೀಮಶಿ ಬಡಿಗೇರ, ಶಿವು ನಾಯ್ಕರ, ಪುಂಡಲೀಕ ಪತ್ತಾರ, ಕಾಳಪ್ಪ ಪತ್ತಾರ, ಮಂಜು ಪತ್ತಾರ, ಮಹಾಂತೇಶ ಬಡಿಗೇರ ಇಲ್ಲಿಯ ಗ್ರಾಮದೇವತೆ ದ್ಯಾಮವ್ವದೇವಿ ದೇವಾಲಯದ ಅರ್ಚಕರು, ಗೋಕಾಕ ವಿಶ್ವಕರ್ಮ ಸಮಾಜದ ಮುಖಂಡರಾದ ಸುರೇಶ ಪತ್ತಾರ, ವಾಸು ಪತ್ತಾರ, ಅನಂತ ಸತ್ತಿಗೇರಿ, ಬಸು ಪತ್ತಾರ, ಶಿವು ಪತ್ತಾರ, ಸ್ಥಳೀಯ ರಾಜಕೀಯ ಮುಖಂಡರು, ಗಣ್ಯರು, ವಿಶ್ವಕರ್ಮ ಸಮಾಜದ ಹಿರಿಯ ನಾಗರಿಕರು, ಯುವಕರು, ಸ್ಥಳೀಯರು, ಮತ್ತೀತರರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 