ಜಾನಪದ ಸಂಸ್ಕೃತಿಯಲ್ಲಿ ಬದುಕಿನ ಮೌಲ್ಯ ಅಡಗಿದೆ: ಪ್ರಾ.ಜಯಾನಂದ ಮಾದರ
The value of life lies in folk culture: Prof. Jayanand Madara
ಗೋಕಾಕ 22: ಕನ್ನಡ ನೆಲದ ದೇಶೀಯ ಸೊಗಡು ಕಲೆಗಳ ಮೂಲಕ ಹೊರಹೊಮ್ಮುತ್ತದೆ,ಇಂಥ ಜಾನಪದ ಸಂಸ್ಕೃತಿಯಲ್ಲಿ ಮನುಷ್ಯ ಬದುಕಿನ ಮೌಲ್ಯ ಅಡಗಿದೆ ಎಂದು ಪ್ರಾ.ಜಯಾನಂದ ಮಾದರ ಹೇಳಿದರು. ಅವರು ಕನ್ನಡ ಜಾನಪದ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಸಮಿಪದ ಉದಗಟ್ಟಿಯ ಸರಕಾರಿ ಹಿರಿಯ ಕನ್ನಡ ಗಂಡು ಮಕ್ಕಳ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಜಾನಪದ ಕಲಾ ಕಮ್ಮಟ ಹಾಗೂ ಗ್ರಾಮೀಣ ಕಲೆಗಳ ವಿಚಾರ ಸಂಕಿರಣದಲ್ಲಿ ಯುವಜನತೆ ಜಾಗತೀಕರಣದ ಹಾವಳಿಗೆ ಮಾರುಹೋಗದೇ ಗ್ರಾಮೀಣ ಕಲೆಗಳನ್ನು ಕಲಿತು ಪ್ರದರ್ಶನ ನೀಡುವಲ್ಲಿ ಆಸಕ್ತಿ ತೋರಬೇಕೆಂದು ಉಪನ್ಯಾಸ ನೀಡಿದರು.
ಹಿರಿಯ ಜಾನಪದ ಭಜನಾ ಕಲಾವಿದ ಕಲ್ಲಪ್ಪಾ ಹಿಪ್ಪರಗಿ ಡೊಳ್ಳು ನುಡಿಸುವ ಮೂಲಕ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ಹಿರಿಯ ದಟ್ಟಿ ಕುಣಿತ ಕಲಾವಿದ,ವಕೀಲ ಡಾ.ಉದ್ದಣ್ಣಾ ಗೋಡೇರ ಸ್ವಾಗತಿಸಿ ನಮ್ಮ ನೆಲದ ಜಾನಪದ ಕಲೆಗಳು ಉಳಯಲು ಪ್ರತಿಯೊಬ್ಬ ಕಲಾವಿದ ತಮ್ಮ ಮಕ್ಕಳಿಗೆ ತಮ್ಮತಮ್ಮ ಕಲೆಯನ್ನು ಕಲಿಸಬೇಕೆಂದು ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರದಲ್ಲಿ ಉದ್ದಪ್ಪ ಅಕ್ಕಿನವರ ಲಾವಣಿಪದ, ಸಿದ್ದಾರೂಢ ಭಜನಾ ಮಂಡಳಿ ಕೈವಲ್ಯಪದ, ಉದ್ದಮ್ಮದೇವಿ ದಟ್ಟಿಕುಣಿತ ಮೇಳದವರಿಂದ ದಟ್ಟಿಕುಣಿತ, ದುರ್ಗಾದೇವಿ ಭಜನಾ ಮೇಳದವರಿಂದ ತತ್ವಪದ, ಹನಮಂತ ಅಕ್ಕೆನ್ನವರ ಶ್ರೀಕೃಷ್ಣ ಪಾರಿಜಾತ ಪದ ಹಾಡಿದರು. ಗ್ರಾಮದ ಹಿರಿಯರಾದ ಬಸವರಾಜ ಶೀಗಿಹಳ್ಳಿ ಹಡಗಿನಾಳದ ಗೌಡಪ್ಪಾ.ಬಿ.ಪಾಟೀಲ, ರಾಮಪ್ಪ ವಡೇರ ಉಪಸ್ಥಿತರಿದ್ದರು. ಡಾ. ನಿಂಗಪ್ಪಾ ಸಾಂಗ್ಲಿ ನಿರೂಪಿಸಿದರು, ಮುತ್ತುರಾಜ ಗೋಡೇರ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 