ಮಾಸ್ಕೋ ನ್ಯಾಯಾಲಯದಲ್ಲಿ ಫೇಸ್ ಬುಕ್, ಟ್ವಿಟರ್ ವಿರುದ್ಧದ ಪ್ರಕರಣದ ವಿಚಾರಣೆ

ಮಾಸ್ಕೋ, ಫೆ 13 :  ಫೇಸ್ ಬುಕ್ ಹಾಗೂ ಟ್ವಿಟರ್ ವಿರುದ್ಧದ ಆಡಳಿತಾತ್ಮಕ ಅಪರಾಧಗಳ ಪ್ರಕರಣಗಳ ವಿಚಾರಣೆಯನ್ನು ಇನ್ನು ಮಾಸ್ಕೋ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಡೆಸಲಿದೆ. 

ನಿಗದಿತ ಅವಧಿಯೊಳಗೆ ರಷ್ಯಾದ ಬಳಕೆದಾರರ ಮಾಹಿತಿಯನ್ನು ನೀಡಲು ವಿಫಲವಾಗಿರುವ ಕಂಪನಿಗಳ ವಿರುದ್ಧ ಕ್ರಮವಾಗಿ 1 ಮಿಲಿಯನ್ ರೂಬೆಲ್ ಹಾಗೂ 6 ಮಿಲಿಯನ್ ರೂಬೆಲ್ ದಂಡ ವಿಧಿಸಲಾಗಿದೆ. 

ರಷ್ಯಾದ ಸಂವಹನ ನಿಗಾ ಸಂಸ್ಥೆ ರೋಸ್ಕೋಮ್ನಾಡ್ಜರ್ ಜ. 31ರಂದು ಫೇಸ್ ಬುಕ್ ಹಾಗೂ ಟ್ವಿಟರ್ ವಿರುದ್ಧ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಆರಂಭಿಸಿತ್ತು.