ವಕೀಲ ಅಜಿತ್ ನಾಯಕ್ ಕಗ್ಗೊಲೆ ಪ್ರಕರಣದ ವಿಚಾರಣೆ ಇದೀಗ ಅಂತಿಮ ಹಂತದಲ್ಲಿ

ವಕೀಲ ಅಜಿತ್ ನಾಯಕ್ ಕಗ್ಗೊಲೆ ಪ್ರಕರಣದ ವಿಚಾರಣೆ ಇದೀಗ ಅಂತಿಮ ಹಂತದಲ್ಲಿ The trial in the lawyer Ajit Nayak murder case is now in its final stages.


                  ಕಾರವಾರ 21 : ದಾಂಡೇಲಿಯಲ್ಲಿ  2018 ಜುಲೈನಲ್ಲಿ ನಡೆದಿದ್ದ  ಹಿರಿಯ ವಕೀಲ, ಸಾಮಾಜಿಕ  ಹೋರಾಟಗಾರ ಅಜಿತ್ ನಾಯಕ್  ಅವರ ಕಗ್ಗೊಲೆ ಪ್ರಕರಣದ ವಿಚಾರಣೆ ಇದೀಗ ಅಂತಿಮ ಹಂತವನ್ನು ತಲುಪಿದೆ. ಈ ಪ್ರಕರಣದ ವಿಚಾರಣೆ ಶಿರಸಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪೀಠದಲ್ಲಿ ಸುದೀರ್ಘವಾಗಿ ನಡೆದು, ಇದೀಗ ತೀಪು ಪ್ರಕಟವಾಗುವ ಹಂತಕ್ಕೆ ಬಂದಿದೆ. ಬೆಚ್ಚಿಬೀಳಿಸಿದ್ದ ಬರ್ಬರ ಕಗ್ಗೊಲೆ : ದಾಂಡೇಲಿ ತಾಲೂಕು ಆಗಬೇಕೆನ್ನುವ ಹೋರಾಟದ ನೇತೃತ್ವ ವಹಿಸಿ, ತಾಲೂಕು ರಚನೆಗೆ ಸರ್ಕಾರದ ಮೇಲೆ ಒತ್ತಡ ತಂದಿದ್ದ   ವಕೀಲ  ಅಜಿತ್ ನಾಯಕ್  2018ರ ಜುಲೈನಲ್ಲಿ ತಮ್ಮ ಕಚೇರಿ ಎದುರೇ  ಬರ್ಬರವಾಗಿ ಹತ್ಯೆಗೀಡಾಗಿದ್ದರು. ಈ ಘಟನೆ ದಾಂಡೇಲಿ ನಗರದ ಇತಿಹಾಸದಲ್ಲಿ  ಕಂಡರಿಯದಂತಹ  ಕೃತ್ಯವಾಗಿತ್ತು. ನಗರವನ್ನೇ ಭಯಗೊಳಿಸಿತ್ತು. ಜನಸಾಮಾನ್ಯರಲ್ಲಿ ಆತಂಕ, ಆಕ್ರೋಶ  ಮೂಡಿಸಿತ್ತು.

                ವಕೀಲ, ಹೋರಾಟಗಾರ,  ಬಹುಮುಖ ವ್ಯಕ್ತಿತ್ವ : ಅಜಿತ್ ನಾಯಕ್  ಅವರು ಕೇವಲ ವಕೀಲರಷ್ಟೇ ಅಲ್ಲದೆ,  ಕ್ರಿಯಾಶೀಲ ಸಾಮಾಜಿಕ ಹೋರಾಟಗಾರ , ಸಂಘಟಕರಾಗಿದ್ದರು.  ಸ್ಥಳೀಯ ರಾಜಕಾರಣದಲ್ಲಿ ದಿಟ್ಟ ಧ್ವನಿ ಎಂಬಂತೆ ಬಹುಮುಖ ವ್ಯಕ್ತಿತ್ವವನ್ನು ಹೊಂದಿದ್ದವರು. ಮೂರು ದಶಕಗಳ ಹಿಂದೆ ಆರಂಭವಾಗಿದ್ದ ದಾಂಡೇಲಿಯ  ತಾಲೂಕು ರಚನೆಯ  ಹೋರಾಟವನ್ನು  , ದಾಂಡೇಲಿ ಬಚಾವೋ ಅಂದೋಲನ ಮೂಲಕ ಅವರು ಮುಂದುವರಿಸಿ,  ಸರ್ಕಾರದ ಗಮನ ಸೆಳೆದಿದ್ದರು. ಜನಪರ ನಿಲುವು, ನಿರ್ಭೀತ ವಾದ ಮತ್ತು ನ್ಯಾಯಪರ ಹೋರಾಟಗಳಿಂದ ಅವರು ಜನಮನ ಗೆದ್ದಿದ್ದರು. ವೃತ್ತಿಯೇ ಮುಳುವಾಯಿತೇ ?: ಭೂ ವ್ಯಾಜ್ಯಗಳಲ್ಲಿ ಕಕ್ಷಿದಾರರ ಪರವಾಗಿ ನಿರ್ಭೀತವಾಗಿ ನಿಂತ ಅಜಿತ್ ನಾಯಕ್ , ಭೂ ಮಾಫಿಯಾ ವಿರುದ್ಧ ಧ್ವನಿ ಎತ್ತಿದರು. ಇತ್ತೀಚಿನ ವರ್ಷಗಳಲ್ಲಿ ಭೂ ವ್ಯಾಜ್ಯಗಳು ಹೆಚ್ಚಾಗುತ್ತಿದ್ದಂತೆ, ಅವರ ವಕೀಲ ವೃತ್ತಿಯೇ ಅವರಿಗೆ ಅಪಾಯವಾಗಿ ಪರಿಣಮಿಸಿತೇ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿತ್ತು. ಅಜಿತ್ ನಾಯಕ್  ಅಗಲುವಿಕೆಯಿಂದ ದಾಂಡೇಲಿ ಯಜಮಾನನಿಲ್ಲದ ಮನೆಯಂತಾಯಿತು ಎಂಬ ಭಾವನೆ ಜನರಲ್ಲಿಬೇರೂರಿತು. 

               ನಂತರ ದಾಂಡೇಲಿಗೆ ಸಮಾನ ಪರ್ಯಾಯ ಧುರೀಣತ್ವದ ಕೊರತೆ ತೀವ್ರವಾಗಿ ಕಾಡಿತು. ಸಾಮಾಜಿಕ ಹೋರಾಟಗಳಲ್ಲಿ ಒಂದು ಶೂನ್ಯತೆ ನಿರ್ಮಾಣವಾಯಿತು. ತಕ್ಷಣದ ಪೊಲೀಸ್ ಕಾರ್ಯಾಚರಣೆ: ಘಟನೆಯ ನಂತರ ಸ್ಥಳೀಯ ಪೊಲೀಸರು ತ್ವರಿತ ಕಾರ್ಯಪ್ರವರ್ತರಾಗಿದ್ದು, ತಲೆಮರೆಸಿಕೊಂಡಿದ್ದ ಐವರು ಆರೋಪಿಗಳನ್ನು ಬಂಧಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಸಮರ್ಥ ಸರ್ಕಾರಿ ವಾದ, ಸುದೀರ್ಘ ವಿಚಾರಣೆ: ಶಿರಸಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ದೀರ್ಘಕಾಲ ದಿಂದ  ನಡೆಯುತ್ತಿದೆ . ದಕ್ಷ ಸರ್ಕಾರಿ ಅಭಿಯೋಜಕ ರಾಜೇಶ ಮಳಗೀಕರ ಅವರು ಸರ್ಕಾರದ ಪರವಾಗಿ ಸಮರ್ಥವಾದ ವಾದ ಮಂಡಿಸಿದ್ದು, ಸಾಕ್ಷ್ಯಾಧಾರಗಳು, ದಾಖಲೆಗಳು ಹಾಗೂ ಸಾಕ್ಷಿಗಳ ಪರೀಶೀಲನೆ ಸಂಪೂರ್ಣಗೊಂಡಿದೆ.ತೀರ​‍್ಿಗೆ ಕ್ಷಣಗಣನೆ: ವಿಚಾರಣೆ ಅಂತಿಮ ಹಂತ ತಲುಪಿದೆ. ಹೊಸ ವರ್ಷದ ಆರಂಭದಲ್ಲಿ  ತೀಪು ಹೊರಬೀಳುವ ನೀರೀಕ್ಷೆ ವ್ಯಕ್ತವಾಗಿದೆ. ಅಜಿತ್ ನಾಯಕ್  ಹತ್ಯೆ ಪ್ರಕರಣದಲ್ಲಿ ನ್ಯಾಯ ಸಿಗಬೇಕು ಎಂಬುದು ದಾಂಡೇಲಿಯ ಜನರ ಬಹುದಿನಗಳ ಬೇಡಿಕೆ ಆಗಿದ್ದು, ಇದೀಗ ಎಲ್ಲರ ಕಣ್ಣು ನ್ಯಾಯಾಲಯದ ತೀರ​‍್ಿನ ಮೇಲಿದ