ಲೋಕದರ್ಶನ ವರದಿ
ಇಂಡಿ, 16: ಇಂಡಿ ರೈಲು ನಿಲ್ದಾಣದ ಮೇಲ್ಸೇತುವೆ ( ಒರ್ ಬ್ರೀಜ್ ) ಉದ್ಘಾಟನೆ ಜನೆವರಿ 17 ರಂದು ಬೆಳಿಗ್ಗೆ 11-00 ಗಂಟೆಗೆ ಭಾರತ ಸರಕಾರದ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ಸಚಿವ ರಮೇಶ ಜಿಗಜಿಣಗಿ ಉದ್ಘಾಟಿಸಲಿದ್ದಾರೆ ಎಂದು ಭಾರತೀಯ ಜನತಾ ಪಾಟರ್ಿ ಮಂಡಲ ಅಧ್ಯಕ್ಷ ಕಾಸುಗೌಡ ಬಿರಾದಾರ ಹೇಳಿದರು.
ಅವರು ಪಟ್ಟಣದ ಪತ್ರಕರ್ತರ ಸಭಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ರೈಲ್ವೇ ಮೇಲ್ಸೇತುವೆ ಬಹುದಿನಗಳಿಂದ ಈ ಭಾಗದ ಜನರ ಬೇಡಿಕೆಯಾಗಿತ್ತು. ಇದನ್ನು ಕೇಂದ್ರ ಸಚಿವ ರಮೇಶ ಜಿಗಜಿಣಗಿಯವರ ಆಸಕ್ತಿಯ ಫಲದಿಂದ ಇಂದು ಲೋಕಾರ್ಪಣೆಗೊಳ್ಳುತ್ತಿರುವದು ಭಾರತೀಯ ಜನತಾ ಪಾಟರ್ಿ ಇಂಡಿ ಮಂಡಲ ವತಿಯಿಂದ ಅಭಿನಂದಿಸುವದಾಗಿ ತಿಳಿಸಿದರು.
ಸುಮಾರು 17.5 ಕೋಟಿ ವೆಚ್ಚದ ಮೇಲ್ಸೇತುವೆಯಾಗಿದ್ದು, ಈ ಸೇತುವೆಗಳು ಸದ್ಯ ಜಿಲ್ಲೆಯ 4 ಕಡೆಗಳಲ್ಲಿ ಪ್ರಾರಂಭವಾಗಿದೆ. ಆದರೆ ಅತೀ ಶೀಘ್ರವಾಗಿ 5ನೇ ಮೇಲ್ಸೇತುವೆಯಾಗಿ ಇಂಡಿ ಪಟ್ಟಣದಲ್ಲಿ ಲೋಕಾರ್ಪಣೆಗಳ್ಳುತ್ತಿರುವದು ಸಂತಸ ತಂದಿದೆ ಎಂದರು.
ಈ ಸಮಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು, ವಿಧಾನ ಪರಿಷತ್ ಸದಸ್ಯರುಗಳು, ಜಿಲ್ಲಾ ಪಂಚಾಯತ ಅಧ್ಯಕ್ಷರು, ಉಪಾದ್ಯಕ್ಷರು, ಸದಸ್ಯರು, ತಾಲೂಕಾ ಪಂಚಾಯತ ಅಧ್ಯಕ್ಷರು, ಉಪಾದ್ಯಕ್ಷರು, ಸದಸ್ಯರು, ಪುರಸಭೆ ಅಧ್ಯಕ್ಷರು, ಉಪಾದ್ಯಕ್ಷರು, ಸದಸ್ಯರು, ಗ್ರಾಮಪಂಚಾಯತ ಅಧ್ಯಕ್ಷರು, ಉಪಾದ್ಯಕ್ಷರು, ಸದಸ್ಯರು, ತಾಲೂಕಿನ ಸಮಸ್ತ ಬಾಜಪ ಅಭಿಮಾನಿಗಳು, ರಾಜಕೀಯ ಧುರೀಣರು ಆಗಮಿಸಲಿದ್ದಾರೆ. ಆದ್ದರಿಂದ ತಾಲೂಕಿನ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮುತ್ತು ದೇಸಾಯಿ, ಶೀಲವಂತ ಉಮರಾಣಿ, ಬುದ್ದುಗೌಡ ಪಾಟೀಲ, ದೇವೆಂದ್ರ ಕುಂಬಾರ, ಅನೀಲ ಜಮಾದಾರ, ಸೋಮು ನಿಂಬರಗಿಮಠ, ಅನೀಲಗೌಡ ಬಿರಾದಾರ, ಮಚ್ಚೇಂದ್ರ ಕದಮ, ಸತೀಶ ಕುಂಬಾರ, ಧರ್ಮರಾಯ ಮದರಖಂಡಿ, ಪ್ರವೀಣ ಮಠ, ಪ್ರಸಾದ ಮಠ, ಪ್ರವೀಣ ತಾಂಬೆ
ಇದ್ದರು.