ಭಂಡಾರ ಎರಚಿ ಜಾತ್ರೆ ಮಾಡುವ ಪದ್ಧತಿಯಿಂದ ಸಾಂಕ್ರಾಮಿಕ ರೋಗಗಳು ಹರಡುವುದಿಲ್ಲ : ಬಾಲಚಂದ್ರ ಜಾರಕಿಹೊಳಿ
The tradition of holding fairs by pouring out Bhandara does not spread infectious diseases: Balachan
ಲೋಕದರ್ಶನ ವರದಿ
ಮೂಡಲಗಿ 08 : ಜನ ಹಾಗೂ ಜಾನುವಾರುಗಳಿಗೆ ರೋಗ, ಋಜೀಣುಗಳು ಬರದೇ ಇರುವ ಹಾಗೇ ಹಳೆಯ ಕಾಲದ ಹಿರಿಯರು ಗ್ರಾಮದ ತುಂಬೆಲ್ಲ ಭಂಡಾರ (ಶುದ್ಧ ಅರಿಷಿಣ ಪುಡಿ)ವನ್ನು ಎರಚಿ ಜಾತ್ರೆಯನ್ನು ಮಾಡುವ ಪದ್ಧತಿಯನ್ನು ಈಗಲೂ ನಮ್ಮ ಹಿರಿಯರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಈ ಮೂಲಕ ಎಲ್ಲ ಜಾತಿಯವರು ಕೂಡಿಕೊಂಡು ಗ್ರಾಮ ದೇವತೆಯರ ಜಾತ್ರೆಯನ್ನು ಯಶಸ್ವಿಯಾಗಿ ನೆರವೇರಿಸುತ್ತಿದ್ದಾರೆ ಎಂದು ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.
ತಾಲ್ಲೂಕಿನ ನಾಗನೂರು ಪಟ್ಟಣದಲ್ಲಿ ಜರುಗಿದ ಅರಣ್ಯ ಸಿದ್ಧೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಜಾತ್ರೆಗಳು ನಮ್ಮ ದೇಶಿಯ ವೈಭವವನ್ನು ಭಿತ್ತರಿಸುತ್ತಿವೆ ಎಂದರು.
ಹಿಂದಿನ ಕಾಲದಲ್ಲಿ ಪ್ಲೇಗ್, ಕಾಲರಾ ಮುಂತಾದ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದವು. ಜಾನುವಾರುಗಳಿಗೆ ಕಾಲುಬೇನೆ, ಬಾಯಿ ಬೇನೆ ಬರುತ್ತಿದ್ದವು. ಇವುಗಳನ್ನು ಹೋಗಲಾಡಿಸಲು ಜನರು ದೇವರಿಗೆ ಮೊರೆ ಹೋಗುತ್ತಿದ್ದರು. ಎಲ್ಲಾ ಜಾತಿಯ ಜನರು ಒಟ್ಟಾಗಿ ಸೇರಿಕೊಂಡು ಗ್ರಾಮ ದೇವತೆಯರ ಜಾತ್ರೆಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದರು. ದೇವರಿಗೆ ನೈವೇದ್ಯ ಅರ್ಿಸುತ್ತಿದ್ದರು. ಈ ಮೂಲಕ ದೇವತೆಯರ ಕೃಪೆಗೆ ಪಾತ್ರರಾಗುತ್ತಿದ್ದರು. ಹಿರಿಯರು ಹಾಕಿಕೊಟ್ಟ ಸಂಪ್ರದಾಯಗಳನ್ನು ಈಗಿನ ಪೀಳಿಗೆಯವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ನಮ್ಮ ದೇಶದ ಆಚಾರ, ವಿಚಾರಗಳು ಇಡೀ ವಿಶ್ವಕ್ಕೆ ಮಾದರಿಯಾಗಿವೆ ಎಂದು ಹೇಳಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿಯವರನ್ನು ಜಾತ್ರಾ ಕಮಿಟಿಯ ಸದಸ್ಯರು ಸತ್ಕರಿಸಿದರು. ಈ ಸಂದರ್ಭದಲ್ಲಿ ಲೆಕ್ಕ ಪರಿಶೋಧಕ ಸೈದಪ್ಪ ಗದಾಡಿ, ಮುಖಂಡರಾದ ಚಂದ್ರು ಬೆಳಗಲಿ, ಸುಭಾಸ ಬೆಳಗಲಿ (ಪಡದಲ್ಲಿ), ಗಣಪತಿ ದೇಸಾರ, ರಮೇಶ ಬೆಟಗೇರಿ, ನಾಗಪ್ಪ ಬೆಳಕೂಡ, ಹಣಮಂತ ಕಿತ್ತೂರ, ಸಿದ್ದಪ್ಪ ಯಡ್ರಾವಿ, ಸಿದ್ದಪ್ಪ ಗುಡೆನ್ನವರ, ಸಿದ್ದಲಿಂಗ ವಾಳಕಿ, ಸದಾಶಿವ ಯಡ್ರಾವಿ, ಕೆಂಚಪ್ಪ ಗೊರೋಜಿ, ಸಿದ್ದಪ್ಪ ಗೊರೋಜಿ, ಯಲ್ಲಪ್ಪ ಪೂಜೇರಿ, ಸಿದ್ದಪ್ಪ ಯಡ್ರಾವಿ, ಶ್ರೀಶೈಲ ಕಿತ್ತೂರ ಮತ್ತಿತರರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 