ಸಾಯಿಬಾಬಾ ಸಮಾಧಿ ಶತಮಾನದ ಸ್ಮರಣೋತ್ಸವ

ಲೋಕದರ್ಶನ ವರದಿ

ಧಾರವಾಡ 19 : ಇಲ್ಲಿಯ ಕೆಲಗೇರಿ ರಸ್ತೆಯಲ್ಲಿರುವ ಶಿರಡಿ ಸಾಯಿಬಾಬಾ ದೇವಾಸ್ಥಾನದಲ್ಲಿ  ಸಾಯಿಬಾಬಾರವರ ಸಮಾಧಿ ಶತಮಾನದ ಸ್ಮರಣೋತ್ಸವಕ್ಕೆ ಗುರುವಾರ ರಾತ್ರಿ ವಿದ್ಯುಕ್ತ ತೆರೆ ಬಿದ್ದಿತು.   

ಐದು ದಿನಗಳ ಕಾಲ ಸಂಗೀತ, ಸಾಂಸ್ಕೃತಿಕ ಹಾಗೂ ಧಾಮರ್ಿಕ ಕಾರ್ಯಕ್ರಮಗಳ ಮೂಲಕ ಸಾಯಿಬಾಬಾ ಸ್ಮರಣೆ  ಮಾಡಿದ ಸಾಯಿ ಸದ್ಭಕ್ತರು ಧನ್ಯತಾ ಭಾವ ಮೆರೆದರು. ಐದು ದಿನಗಳಲ್ಲಿ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಹರಿದುಬಂದು ಬಾಬಾನ ದಿವ್ಯದರ್ಶನ ಪಡೆದು ಮಹಾಪ್ರಸಾದ ಸ್ವೀಕರಿಸಿ ಧನ್ಯತಾ ಭಾವ ಮೆರೆದರು

       ಇದಕ್ಕೂ ಮುನ್ನ ನಡೆದ ಐದನೇ ದಿನದ ವೇದಿಕೆ ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಡಾ. ಬಿ.ಸಿ. ಸತೀಶ ಚಾಲನೆ ನೀಡಿ ಮಾತನಾಡಿತ್ತಾ ಶಿರಡಿ ಸಾಯಿ ಬಾಬಾ ದೇವಸ್ಥಾನವು ವರ್ಷದಿಂದ ವರ್ಷಕ್ಕೆ ಸಾಕಷ್ಟು ಅಭಿವೃದ್ಧಿ ಹೊಂದುತ್ತಿದೆ. ಇದರ ಅರ್ಥ ಅದರ ಭಕ್ತರು ಕೂಡ ಅಭಿವೃದ್ಧಿ ಹೊಂದಿದ್ದಾರೆ ಎಂಬುದು ತೋರಿಸುತ್ತದೆ. ಇಂತಹ ಪವಿತ್ರ ತಾಣವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡಬೇಕು ಎಂದು ಕರೆ ನೀಡಿದರು

       ಇದೇ ವೇಳೆ ಐದು ದಿನಗಳ ಕಾಲ ಕಾರ್ಯಕ್ರಮದ ಯಶಸ್ವಿಗೆ ಹಗಲು ರಾತ್ರಿ ಎನ್ನದೇ ಶ್ರಮಿಸಿದ ಶಿರಡಿ ಸಾಯಿಬಾಬಾ ಟ್ರಸ್ಟ್ ಅಧ್ಯಕ್ಷರಾದ ಮಹೇಶ ಎಂ. ಶೆಟ್ಟಿ ಹಾಗೂ ರೂಪಾ ಮಹೇಶ ಶೆಟ್ಟಿ ದಂಪತಿಗೆ ಆಡಳಿತ ಮಂಡಳಿಯವತಿಯಿಂದ ಹೃದಯಸ್ಪಶರ್ಿಯಾಗಿ ಸನ್ಮಾನಿಸಿ ಗೌರವಿಸಲಾಯಿತು.

 ವೇದಿಕೆಯಲ್ಲಿ ಉದ್ಯಮಿ ರಾಜೇಂದ್ರ ಶೆಟ್ಟಿ, ಶ್ರೀನಿವಾಸ ಶೆಟ್ಟಿ, ವಿಜಯ ಲಾಡ್, ಗುರುಪಾದಯ್ಯ ಹೊಂಗಲ್ ಮಠ, ಪ್ರದೀಪ ಕಕ್ಕಳ, ದಿನೇಶ ಅಡ್ಯಂತಾಯ, ಸುರೇಶ ಹಂಪಿಹೊಳಿ, ಉದಯ ಶೆಟ್ಟಿ, ಕಿರಣ ಶೆಟ್ಟಿ, ಶಿವಯೋಗಿ ಬೆಣ್ಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 ನಂತರ ಅಂತರ್ ರಾಷ್ಟ್ರೀಯ ಖ್ಯಾತಿಯ ಅಶೋಕ ಪೊಳಲಿ ಅವರಿಂದ ಗಾನ ನೃತ್ಯ ವೈಭವ ಸಂಗೀತದ ರಸದೌತಣ ಉಣಬಡಿಸುವಲ್ಲಿ ಯಶಸ್ವಿಯಾಯಿತು.ಸಾಯಿ ಬಾಬಾ ಪಲ್ಲಕ್ಕಿ ನೆರೆದಿದ್ದ ಸಹಸ್ರಾರು ಭಕ್ತರ ಸಡಗರ ಸಂಭ್ರಮವನ್ನು ಇಮ್ಮಡಿಗೊಳಿಸುವಲ್ಲಿ ಯಶಸ್ವಿಯಾಯಿತು.

 ಶಿರಡಿ ಸಾಯಿಬಾಬಾ ದೇವಾಲಯದ ವಿದ್ಯುಲಂಕಾರ ಹಾಗೂ ದೇವಾಸ್ಥಾನದಲ್ಲಿ ಗುರುವಾರದ ನಿಮಿತ್ಯ ಬೆಳಗ್ಗೆಯಿಂದ ರಾತ್ರಿಯವರೆಗೆ ವಿಶೇಷ ಪೂಜೆ ಪ್ರಾರ್ಥನೆಗಳು ಭಕ್ತಿಭಾವದಿಂದ ನಡೆದವು.