ನವದೆಹಲಿ, ಆ 26 ಖ್ಯಾತ ಬಾಲಿವುಡ್ ನಟ ಸನ್ನಿ ಡಿಯೋಲ್ ಪುತ್ರ ಕರಣ್ ಡಿಯೋಲ್ ಹಾಗೂ ಸಹರ್ ಬಾಮ್ಬ ಪ್ರಥಮ ಬಾರಿಗೆ ನಟಿಸುತ್ತಿರುವ 'ಪಲ್ ಪಲ್ ದಿಲ್ ಕೆ ಪಾಸ್ ' ಚಿತ್ರದ ಹೊಸ ಪೋಸ್ಟರ್ ಸೋಮವಾರ ಬಿಡುಗಡೆಗೊಂಡಿತು. ಚಿತ್ರದ ಶೀರ್ಷಿಕೆ ಗೀತೆ ಮಂಗಳವಾರ ಬಿಡುಗಡೆಯಾಗಲಿದೆ.
ಈ ವಿಷಯವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಕರಣ್ ಡಿಯೋಲ್ ತಾತ ಧಮರ್ೆಂದ್ರ ಡಿಯೋಲ್ , 'ನೀವೆಲ್ಲಾ ಕಾಯುತ್ತಿದ್ದ ಗಳಿಗೆ ಈಗ ಬಂದಿದೆ. ನಾಳೆ 'ಪಲ್ ಪಲ್ ದಿಲ್ ಕೆ ಪಾಸ್' ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆಯಾಗಲಿದೆ' ಎಂದು ತಿಳಿಸಿದ್ದಾರೆ.
ಸನ್ನಿ ಡಿಯೋಲ್ 'ಚಿತ್ರದ ಶೀಷರ್ಿಕೆ ಗೀತೆಯೊಂದಿಗೆ ನೀವು ಪ್ರಥಮ ಪ್ರೀತಿಯ ಸವಿಯನ್ನು ಆನಂದಿಸಿ' ಎಂದು ಟ್ವೀಟ್ ಮಾಡಿದ್ದಾರೆ.
'ಪಲ್ ಪಲ್ ದಿಲ್ ಕೆ ಪಾಸ್' ರೊಮ್ಯಾಂಟಿಕ್ ಚಿತ್ರವನ್ನು ಸನ್ನಿಡಿಯೋಲ್ ನಿರ್ದೇಶಿಸುತ್ತಿದ್ದು, ಸನ್ನಿ ಸೌಂಡ್ಸ್ ಪ್ರೈ. ಲಿ. ಹಾಗೂ ಝೀ ಸ್ಟುಡಿಯೋ ಚಿತ್ರವನ್ನು ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದೆ. ಚಿತ್ರದಲ್ಲಿ ಕರಣ್ ಡಿಯೋಲ್ ಹಾಗೂ ಸಹರ್ ಬಾಮ್ಬ ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರ ಸೆ. 20ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.