ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡದ ಕಂಪು

 ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡದ ಕಂಪು The taste of Kannada in an English medium school

ಲೋಕದರ್ಶನ ವರದಿ 

  

ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡದ ಕಂಪು  

ಮಹಾಲಿಂಗಪುರ  02: ಇಂದಿಗೂ ನಾನು ಕನ್ನಡದಲ್ಲಿಯೇ ಸಹಿ ಮಾಡುತ್ತಿದ್ದೇನೆ. ಎಲ್ಲರೂ ಕನ್ನಡದಲ್ಲಿ ಸಹಿ ಮಾಡಿ ಕನ್ನಡ ಅಭಿಮಾನವನ್ನು ಮೆರೆಯಬೇಕು.ಕನ್ನಡವನ್ನು ದಿನನಿತ್ಯ ಬಳಸಿ,ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ ಎಂದು ಜೆಸಿ ಆಂಗ್ಲ ಮಾಧ್ಯಮ ಶಾಲೆಯ ಉಪಾಧ್ಯಕ್ಷ ಶಿವಾನಂದ ತಿಪ್ಪಾ ಹೇಳಿದರು.ಸ್ಥಳೀಯ ಜೆಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.  

ಪತ್ರಕರ್ತ ರಾಜೇಂದ್ರ ನಾವಿ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡಕ್ಕೆ ಅನೇಕ ವೀರರು ಮತ್ತು ವೀರವನಿತೆಯರ ಶ್ರಮವಿದೆ. ಆದುದರರಿಂದ ಕನ್ನಡವನ್ನು ಉಳಿಸಿ,ಬೆಳೆಸೋಣ ಜೊತೆಗೆ ನವೆಂಬರ್ ಒನ್ ಕನ್ನಡಿಗರಾಗದೆ, ನಂಬರ್ ಒನ್ ಕನ್ನಡಿಗರಾಗೋಣ ಎಂದರು.ನಂತರ ಶಿಕ್ಷಕರಾದ ನಾರಣಗೌಡ ಉತ್ತಂಗಿ, ಐ ಎಮ್ ಬಡಿಗೇರ ಮಾತನಾಡಿದರು. ಶಿಕ್ಷಕಿ ವೀಣಾ ಹಡಪದ ಮಾರ್ಗದರ್ಶನದಲ್ಲಿ ಒಂದನೇ ತರಗತಿ ವಿದ್ಯಾರ್ಥಿಗಳು ಅಕ್ಕಿ ಮತ್ತು ಕುಂಕುಮದಲ್ಲಿ ಕನ್ನಡ ರಾಜ್ಯೋತ್ಸವದ ರಂಗೋಲಿ ಹಾಕಿ ಗಮನ ಸೆಳೆದರು. ಶಿಕ್ಷಕಿಯರಾದ ಶಬಾನಾ ಮುಂಡಗನೂರ,ಕೊಲಟೆ ಜಾರ್ಜ್‌,ಪಾರ್ವತಿ ಚನಪ್ಪನವರ ಮಾರ್ಗದರ್ಶನದಲ್ಲಿ ಎಲ್ ಕೆ ಜಿ ಮತ್ತು ಯುಕೆಜಿ ಮಕ್ಕಳು ಕನ್ನಡ ನಾಡು ನುಡಿಯ ಸಾಂಸ್ಕೃತಿಕ  ಮಾದರಿ ಪ್ರದರ್ಶಿಸಿದರು. ವಿದ್ಯಾರ್ಥಿಗಳಿಂದ ಭಾಷಣ ಮತ್ತು  ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. 

ಈ ಸಂದರ್ಭದಲ್ಲಿ ರಾಜು ಘಟ್ಟೆಪ್ಪನವರ,ಮುತ್ತು ಅಂಗಡಿ,ಮುಖ್ಯ ಶಿಕ್ಷಕ ಎಸ್ ಜಿ ಕೌಜಲಗಿ ಸೇರಿದಂತೆ ಎಲ್ಲ ಶಿಕ್ಷಕರು- ಶಿಕ್ಷಕಿಯರು,ವಿದ್ಯಾರ್ಥಿಗಳು ಉಪಸ್ತಿತರಿದ್ದರು.ಕು.ವರ್ಷಿಣಿ ಸಗರಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು.ಶಿಕ್ಷಕಿ ಸುಧಾ ಕೊಂಗವಾಡ ನಿರೂಪಿಸಿ, ವಂದಿಸಿದರು.