52ನೇ ದಿನಕ್ಕೆ ಕಾಲಿಟ್ಟ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ನಡೆದ ಹೋರಾಟ

52ನೇ ದಿನಕ್ಕೆ ಕಾಲಿಟ್ಟ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ನಡೆದ ಹೋರಾಟ The struggle for the establishment of a government medical college entered its 52nd day

ವಿಜಯಪುರ 08: 52ನೇ ದಿನದ ಹೋರಾಟ ಶನಿವಾರ ಮುಂದುವರೆದಿದೆ. ಹೋರಾಟ ಧರಣಿಗೆ ಬೆಂಗಳೂರಿನಿಂದ ಬಂದ ಫೆಲ್ಲೋಶಿಪ್ ವಿದ್ಯಾರ್ಥಿಗಳು ಆಗಮಿಸಿ ಧರಣಿಗೆ ಬೆಂಬಲ ಸೂಚಿಸಿದರು.  ವಿದ್ಯಾರ್ಥಿ ಶಾರೋನ್ ಮಾತನಾಡಿ " ವಿಜಯಪುರ ಹಿಂದುಳಿದ ಪ್ರದೇಶ ಆಗಿದ್ದರಿಂದ ಈ ಜಿಲ್ಲೆಯಲ್ಲಿ ಪಿಪಿಪಿ ವಿರೋಧಿಸಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಬೇಕು. ಸುಂದರವಾದ ಜಿಲ್ಲಾ ಆಸ್ಪತ್ರೆ  ಇದೆ, ಎಲ್ಲಾ ಸೌಲಭಗಳು ಇವೆ, ಹೀಗಿರುವಾಗ ಸರ್ಕಾರ ಬಡ ಜನರಿಗೆ ಅನುಕೂಲವಾಗುವ ಹಾಗೆ ಸರ್ಕಾರ ಸಂಪೂರ್ಣ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು" ಎಂದರು.  ಇನ್ನೊಬ್ಬ ವಿದ್ಯಾರ್ಥಿ ಅನ್ಸಿಲಾ ಮಾತನಾಡಿ " 52 ದಿನ ನೀವೆಲ್ಲಾ ಹೋರಾಟ ಕೂತಿದ್ದು ನೋಡಿ ಸರ್ಕಾರ ಅರೀಶೀಘ್ರದಲ್ಲಿ ಸರ್ಕಾರವೇ ವೈದ್ಯಕೀಯ ಕಾಲೇಜು ನಿರ್ಮಿಸಬೇಕು ಹಾಗೂ ಜಿಲ್ಲಾ ಆಸ್ಪತ್ರೆ ಉಳಿಸಬೇಕು" ಎಂದರು. 52ನೇ ದಿನದ ಹೋರಾಟ  ಶನಿವಾರ ಮುಂದುವರೆದಿದೆ. ಹೋರಾಟ ಧರಣಿಗೆ ಬೆಂಗಳೂರಿನಿಂದ ಬಂದ ಫೆಲ್ಲೋಶಿಪ್ ವಿದ್ಯಾರ್ಥಿಗಳು ಆಗಮಿಸಿ ಧರಣಿಗೆ ಬೆಂಬಲ ಸೂಚಿಸಿದರು.  ಜನಾರೋಗ್ಯ ವೇದಿಕೆ ಚಳುವಳಿ ಮುಖಂಡರಾದ ಟೀನಾ ಜೇವಿಯರ, ಫಾದರ್ ಕೆವಿನ್, ಜಮಖಂಡಿ ತಾಲೂಕಿನ ಗದ್ಯಾಳ ಗ್ರಾಮದ ರೈತ ಮುಖಂಡರಾದ ಜಗದೀಶ್ ಅಥಣಿ ಹಾಗೂ ರಾಜಕುಮಾರ್ ತೇಲಿ ಬೆಂಬಲವನ್ನು ಸೂಚಿಸಿದರು. 

ಜಮಖಂಡಿ ತಾಲೂಕಿನ ಗದ್ಯಾಳ ಗ್ರಾಮದ ರೈತ ಮುಖಂಡರಾದ ಜಗದೀಶ್ ಅಥಣಿ ಹಾಗೂ ರಾಜಕುಮಾರ್ ತೇಲಿ ಬೆಂಬಲವನ್ನು ಸೂಚಿಸಿದರು. ವಿದ್ಯಾರ್ಥಿಗಳಾದ ಶಾರೋನ್, ಅನ್ಸಿಲಾ, ತೆಂಜಿನ್, ಅಬೆಯ್ ಅಬ್ರಹಾಂ, ರನುಶ್ ಪೌಲ್, ರಚುಲ್ ಚಿತ್ತೂರ್ ಹಾಗೂ ಬೆಂಬಲ ಕೊಟ್ಟ ಮೀನಾಕ್ಷಿ ಸಿಂಗೆ, ಮುತ್ತಮ್ಮ ಭೋವಿ, ಮಲ್ಲು ಜಲಗೇರಿ, ಚನ್ನು ಕಟ್ಟಿಮನಿ, ಗೌಡಪ್ಪ ಬಡಿಗೇರ, ಅಕ್ಷಯ್ ಕುಮಾರ್, ಮಹಬೂಬ್ ಪಟೇಲ್, ಅಂಕಿತಾ ತಡವಲ್ಕರ್, ಗೀತಾ ಕಟ್ಟಿ, ಸುನಂದಾ ರಾಥೋಡ್, ಕಿರಣ್, ಗೋಪಾಲ್ ಕೃಷ್ಣ ಶಿಲ್ಪಿ, ದೀಪಕ್ ಪೋತದಾರ್, ಎ. ಕೆ. ಪಾಟೀಲ್, ಸೋಮಲಿಂಗ ರಂಡೆವೆ, ರೈತ ಮುಖಂಡರಾದ  ಜಗದೀಶ್ ಅಥಣಿ, ರಾಜಕುಮಾರ್ ತೇಲಿ, ಕಾಂತ ಕುಮಾರ್, ಎಸ್‌.ಎಸ್‌.ತೇಲಿ, ಟಿ.ಕೆ.ಮಲಗೊಂಡ, ಎಂ.ಎಚ್‌.ಮಕೊಂಡ್ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.