ಆಲಮಟ್ಟಿ ಜಲಾಶಯದ ನೀರಿನ ಮಟ್ಟ ಹೆಚ್ಚಿಸಲು ಪ್ರಧಾನಿ ಭೇಟಿ ಮಾಡಿ ಮನವಿ ಸಲ್ಲಿಸಲು ಹೋರಾಟ ಸಮಿತಿ ನಿರ್ಧಾರ

ಆಲಮಟ್ಟಿ ಜಲಾಶಯದ ನೀರಿನ ಮಟ್ಟ ಹೆಚ್ಚಿಸಲು ಪ್ರಧಾನಿ ಭೇಟಿ ಮಾಡಿ ಮನವಿ ಸಲ್ಲಿಸಲು ಹೋರಾಟ ಸಮಿತಿ ನಿರ್ಧಾರ The struggle committee has decided to meet the Prime Minister and submit a request to increase the w

ಲೋಕದರ್ಶನ ವರದಿ 

ವಿಜಯಪುರ 16 : ನ್ಯಾ. ಬ್ರಿಜೇಶಕುಮಾರ ನೇತೃತ್ವದ 2ನೇ ನ್ಯಾಯಾಧಿಕರಣದ ತೀರ​‍್ಿನಂತೆ ಆಲಮಟ್ಟಿ ಜಲಾಶಯದ ನೀರಿನ ಮಟ್ಟವನ್ನು 524.256ಕ್ಕೆ ನೀರು ನಿಲ್ಲಿಸಲು ಹಾಗೂ ಗೇಟ್ ಅಳವಡಿಸಲು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸುವಂತೆ ಒತ್ತಾಯಿಸಲು ಶೀಘ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಳಿ ಹೋರಾಟ ಸಮಿತಿ ನೇತೃತ್ವದಲ್ಲಿ ನಿಯೋಗ ತಗೆದುಕೊಂಡು ಹೋಗಲು ಸಭೆಯಲ್ಲಿ ತೀರ್ಮಾನಿಸಲಾಯಿತು.  

ಮಂಗಳವಾರದಂದು ನಗರದ ಡಾ.ಬಿ.ಆರ್‌. ಅಂಬೇಡ್ಕರ್ ಸಭಾ ಭವನದಲ್ಲಿ ರೈತಪರ, ದಲಿತಪರ ಹಾಗೂ ಪಕ್ಷಾತೀತವಾಗಿ ಎಲ್ಲ ರಾಜಕೀಯ ಮುಖಂಡರ ಹಾಗೂ ಪ್ರಗತಿಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ ಮುಂದಿನ ಹೋರಾಟಕ್ಕಾಗಿ ಕೃಷ್ಣಾ ಕೊಳ್ಳ ಜಲ ರಕ್ಷಣಾ ಹೋರಾಟ ಸಮಿತಿ ರಚಿಸಲಾಯಿತು. ಸಭೆಯ ನಂತರ ಸಂಸದ ರಮೇಶ ಜಿಗಜಿಣಗಿಯವರ ಕಛೇರಿಗೆ ತೆರಳಿ ಸಂಸದರಿಗೆ ಭೇಟಿಯಾಗಿ ಪ್ರಧಾನಮಂತ್ರಿ ಬಳಿ ನಿಯೋಗ ತಗೆದುಕೊಂಡು ಹೋಗಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇವರನ್ನು ಭೇಟಿಯಾಗಿ ದಿನಾಂಕ ನಿಗದಿ ಪಡೆಸಲು ಎಲ್ಲಾ ಹೋರಾಟ ಸಮಿತಿ ಮುಖಂಡರು ಮನವಿ ಮಾಡಿಕೊಂಡರು.  

ಇದಕ್ಕೆ ಸ್ಪಂಧಿಸಿದ ಸಂಸದ ರಮೇಶ ಜಿಗಜಿಣಗಿಯವರು ನೀರಾವರಿ ವಿಷಯದಲ್ಲಿ ಯಾವುದೇ ಜಾತಿ ರಾಜಕಾರಣ ಬೇಡ ಜಲಾಶಯ ನೀರಿನ ಮಟ್ಟವನ್ನು ಹೆಚ್ಚಿಸಲು ನ್ಯಾಯಾಧೀಕರಣ ತೀರ​‍್ಿನಂತೆ ಅಧಿಸೂಚನೆ ಹೊರಡಿಸಲು ಪ್ರಧಾನ ಮಂತ್ರಿ ಬಳಿ ನಿಯೋಗ ತಗೆದುಕೊಂಡು ಹೋಗಲು ಬಾಗಲಕೋಟ ಸಂಸದರಾದ ಪಿ.ಸಿ. ಗದ್ದಿಗೌಡರ ಸೇರಿದಂತೆ ಇನ್ನುಳಿದ ಸಂಸದರನ್ನು ಕರೆದುಕೊಂಡು ಮೊದಲು ಪ್ರಲ್ಹಾದ ಜೋಶಿಯವರಿಗೆ ಭೇಟಿಯಾಗಿ ಪ್ರಧಾನ ಮಂತ್ರಿ ಬಳಿ ನಿಯೋಗಕ್ಕೆ ದಿನಾಂಕ ನಿಗದಿಪಡಿಸಲು ಶೀಘ್ರದಲ್ಲಿ ಭೇಟಿಯಾಗೋಣವೆಂದು ಹೋರಾಟ ಸಮಿತಿಯವರಿಗೆ ಭರವಸೆ ನೀಡಿದರು.  ಪ್ರಧಾನಮಂತ್ರಿಯವರು ಯವಾಗ ದಿನಾಂಕ ನಿಗದಿಪಡಿಸಿರುತ್ತಾರೆಯೋ ಆ ಸಂದರ್ಭದಲ್ಲಿ ಪ್ರಮುಖರೊಂದಿಗೆ ದೆಹಲಿಗೆ ಹೋಗಿ ಅಧಿಸೂಚನೆ ಹೊರಡಿಸುವ ಕುರಿತು ಸಮಗ್ರ ಮಾಹಿತಿ ನೀಡಿ ಒತ್ತಾಯಿಸೋಣವೆಂದು ಭರವಸೆ ನೀಡಿದರು.