ವಿಜಯಪುರ 13: ಬೆಳಗಾವಿಯಲ್ಲಿ ಸುಮಾರು 30000 ಸಾವಿರಕ್ಕಿಂತ ಹೆಚ್ಚು ರೈತರು ಸೇರಿಕೊಂಡು ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನದ ಸಮಯದಲ್ಲಿ ನಡೆಸುತ್ತಿದ್ದ ಹೋರಾಟದ ಸ್ಥಳಕ್ಕೆ ಆಗಮಿಸಿದ ಸಚಿವರಾದ ಶಿವಾನಂದ ಪಾಟೀಲರು ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಸಂಬಂಧಿಸಿದವರೊಡನೆ ಸಭೆ ಮಾಡಿ, ಎಲ್ಲ ರೈತರ ಸಮಕ್ಷಮದಲ್ಲಿ ಕಬ್ಬಿಗೆ ಯೋಗ್ಯ ಬೆಲೆ ನೀಡುವುದಾಗಿ ಹಾಗೂ ಸಕ್ಕರೆ ಕಾರ್ಖಾನೆಯಲ್ಲಿ ರೈತರಿಗಾಗುತ್ತಿರುವ ಅನ್ಯಾಯವನ್ನು ತಡೆಯುವುದಾಗಿ ಭರವಸೆ ನೀಡಿ ತಿಂಗಳು ಕಳೆದರು ಯಾವುದೇ ಸುಳಿವಿಲ್ಲ,
ಆದ್ದರಿಂದ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜನೇವರಿ 20ನೇ ತಾರೀಖಿನಂದು ರಾಜ್ಯದ ವಿವಿಧ ಜಿಲ್ಲೆಯ ಸಾವಿರಾರು ರೈತರು ಸೇರಿಕೊಂಡು ಸಚಿವರಾದ ಶಿವಾನಂದ ಪಾಟೀಲರ ಮನೆ ಮುಂದೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡಲು ರಾಜ್ಯಾಧ್ಯಕ್ಷರಾದ ಚೂನಪ್ಪಾ ಪೂಜೇರಿ ಅವರ ನೇತೃತ್ವದಲ್ಲಿ ನಿರ್ಣಹಿಸಲಾಗಿದೆ
ಈ ವೇಳೆ ರಾಜ್ಯಾಧ್ಯಕ್ಷರಾದ ಚುನ್ನಪಾ ಪೂಜೇರಿ ಮಾತನಾಡಿ ಪ್ರತಿ ಟನ್ ಕಬ್ಬಿಗೆ ಕಟಾವೂ ಹಾಗೂ ಸಾಗಾಣೆಯನ್ನು ಹೊರತು ಪಡೆಸಿ 4000 ದರವನ್ನು ನೀಡಬೇಕು, ಪ್ರತಿ ಟನ್ ಕಬ್ಬಿನಿಂದ ಸರ್ಕಾರಕ್ಕೆ ಸರಿ ಸುಮಾರು 5000 ತೆರಿಗೆ ಹಣ ಹೋಗುತ್ತಿದೆ ಅದರಲ್ಲಿಯೂ 2000 ಹಣ ರೈತರಿಗೆ ನಿಡಬೇಕು ತೂಕದಲ್ಲಿ ರೈತರಿಗೆ ಆಗುತ್ತಿರುವ ಮೊಸ ತಡೆಯಲು ಸರಕಾರದಿಂದ ಪ್ರತಿ ಜಿಲ್ಲೆಯಲ್ಲಿ ಅವಶ್ಯಕತೆಗೆ ತಕ್ಕಂತೆ ಸಿಸಿ ಕ್ಯಾಮರಾದೊಂದಿಗೆ ಡಿಜಿಟಲ್ ತೂಕದ ಯಂತ್ರ ಅಳವಡಿಸಬೇಕು, ಕಬ್ಬಿನ ಇಳುವರಿಯನ್ನು ಸರಕಾರದಿಂದಲೇ ತಪಾಸಣೆ ಮಾಡಿ ದರ ನಿಗದಿಮಾಡಬೇಕು, ಕಬ್ಬಿನ ಇಳುವರಿ ಸಮಿತಿಯಲ್ಲಿ ರೈತ ಮುಖಂಡರನ್ನ ಕಡ್ಡಾಯವಾಗಿ ಇರುವಂತೆ ನೋಡಬೇಕು, ಪ್ರತಿ ಎಕರೆ ಕೃಷಿಯ ಖರ್ಚುವೆಚ್ಚ ಕಳೆದ ವರ್ಷದಿಂದ ವರ್ಷಕ್ಕೆ 4 ಪಟ್ಟು ಹೆಚ್ಚಾಗುತ್ತಿರುವುದರಿಂದ, ಎಲ್ಲಾ ಬೆಳೆಗಳಿಗೂ ಈ ಖರ್ಚನ್ನು ನೋಡಿಕೊಂಡು ಬೆಲೆ ನಿಗದಿಪಡೆಸಬೇಕು. ಕಬ್ಬು ಕಳುಹಿಸಿದ 15 ದಿನಗಳಲ್ಲಿ ರೈತರಿಗೆ ಹಣ ಸಂದಾಯ ಮಾಡಬೇಕು ಎಂಭ ಆದೇಶವಿದ್ದರು, ವರ್ಷಗಳಾದರೂ ಇನ್ನು ಬಾಕಿ ಉಳಿಸಿಕೊಂಡು ರೈತರನ್ನ ಅಲೆದಾಡಿಸುವಂತೆ ಮಾಡುತ್ತಿದ್ದಾರೆ, ಅಂತಹ ಕಾರ್ಖಾನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಎ.ಪಿ.ಎಂ.ಸಿ ಮಾರುಕಟೆಯ 87 ಬಿ ಕಾಯ್ದೆಯನ್ನು ರದ್ದು ಮಾಡಬೇಕು ಎಂದು ಒತ್ತಾಯಸದರು.
ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಮಾತನಾಡುತ್ತಾ ವಿಜಯಪುರದ ಎ.ಪಿ.ಎಂ.ಸಿ ಕಾರ್ಯದರ್ಶಿ ಹುದ್ದೆ ಭರ್ತಿ ಮಾಡಬೇಕು, ವಿಜಯಪುರದ ಎ.ಪಿ.ಎಂ.ಸಿಯಲ್ಲಿ ತರಕಾರಿಗಳಿಗೆ ಶೇ 10ಅ ಕಮಿಷನ್ ಮುರಿಯುತ್ತಿದ್ದು ನಿಲ್ಲಿಸಬೇಕು, ಪ್ಯಾಕಿಂಗ್ ಹಾಗೂ ಹಮಾಲಿ ಮುರಿಯುತ್ತಿದ್ದು ಅದನ್ನು ಕೂಡಲೇ ನಿಲ್ಲಿಸಬೇಕು, ಖಾಲಿ ಚೀಲ, ಹಮಾಲಿ, ಸೂಟ್, ಜಕಾತಿ ಎಂದು ರೈತರಿಗೆ ಮೊಸ ಮಾಡುತ್ತಿರುವುದು ನಿಲ್ಲಬೇಕು. ದ್ರಾಕ್ಷಿ ಹರಾಜು ಪ್ರಕ್ರೀಯೆ ಹೊರಗಡೆ ಕೆ.ಐ.ಡಿ.ಬಿಯಲ್ಲಿ ಅನಧಿಕೃತವಾಗಿ ಖರೀಧಿ ಮಾಡುತ್ತಿದ್ದು, ಎತ್ತೆಚವಾಗಿ ತೂರಾಡುತ್ತಾ ರೈತರಿಗೆ ಮೊಸ ಮಾಡಲಾಗುತಿದೆ, ಇದನ್ನು ನೀಲ್ಲಿಸಬೇಕು. ವಿಜಯಪುರ ಜಿಲ್ಲೆಯ 13 ತಾಲೂಕುಗಳಲ್ಲಿ ಸುಸಜ್ಜಿತವಾದ ಎ.ಪಿ.ಎಂ,ಸಿ ಮಾರುಕಟ್ಟೆ ನಿರ್ಮಿಸಬೇಕು. ವಿಜಯಪುರ ಜಿಲ್ಲೆಯ 13 ತಾಲೂಕುಗಳಲ್ಲಿ ರೈತರಿಗೆ ಸಭೆ, ತರಬೇತಿ, ಶಿಬಿರ ಮಾಡಲು ಒಳ್ಳೆಯ 200 ಆಸನಗಳ ರೈತ ಭವನ ನಿರ್ಮಿಸಬೇಕು ಎಂದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ವಿಜಯಪುರ ಸೇರಿದಂತೆ ಎಲ್ಲಾ 13 ತಾಲೂಕುಗಳಿಂದ ಸಾವಿರಾರು ರೈತರು, ಕಬ್ಬು ಬೆಳೆಗಾರರು, ದ್ರಾಕ್ಷಿ ಬೆಳೆಗಾರರು, ತೋಟಗಾರಿಕಾ ಬೆಳೆಗಾರರು ಸೇರಿಕೊಂಡು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹೋರಾಟ ಮಾಡಲು ನಿರ್ಣಹಿಸಲಾಗಿದೆ. ಎಂದರು.
ಈ ವೇಳೆ ರಾಜ್ಯ ಗೌರವಾಧ್ಯಕ್ಷರಾದ ಶಶಿಕಾಂತ ಪಡಸಲಗಿ, ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ , ರಾಜ್ಯ ಕಾರ್ಯಾಧ್ಯಕ್ಷರಾದ ಮಹೇಶಗೌಡ ಸುಬೇದಾರ, ಜಿಲ್ಲಾ ಪ್ರಧಾನ ಕಾರ್ಯಧರ್ಶಿಗಳಾದ ರಾಮನಗೌಡ ಪಾಟೀಲ, ವಿಜಯಪುರ ಜಿಲ್ಲಾ ಉಪಾಧ್ಯಕ್ಷರಾದ ಮಹಾದೇವಪ್ಪ ತೇಲಿ , ತಿಕೋಟಾ ತಾ.ಅಧ್ಯಕ್ಷರಾದ ಸಾತಲಿಂಗಯ್ಯ ಸಾಲಿಮಠ, ಪ್ರಕಾಶ ತೇಲಿ , ಸಂಗಪ್ಪ ಟಕ್ಕೆ ಜಕರಾಯಪೂಜಾರಿ , ಮಹಾಂತೇಶ ಮಮದಾಪುರ, ಮಹಾದೇವ ಬನಸೋಡೆ , ಜಯಸಿಂಗ ರಜಪೂತ, ರಾಜೇಸಾ ನದಾಫ , ರಾಮಸಿಂಗ ರಜಪೂತ, ಅನಮೇಶ ಜಮಖಂಡಿ, ಆತ್ಮಾನಂದ ಬೈರೊಡಗಿ, ಸೇರಿದಂತೆ ಅನೇಕರು ಇದ್ದರು.