ಸಿದ್ಧಾರೂಢರ ಶ್ರೀಗಳ ಮನಸ್ಸು ಗೆದ್ದ ಖಾಸ್ಗತ: ಶ್ರೀ ಶಿವಲಿಂಗ ಮಹಾಸ್ವಾಮಿಗಳು
The special feature that won the hearts of Siddharth Sris: Sri Shivalinga Mahaswamy
ಸಿದ್ಧಾರೂಢರ ಶ್ರೀಗಳ ಮನಸ್ಸು ಗೆದ್ದ ಖಾಸ್ಗತ: ಶ್ರೀ ಶಿವಲಿಂಗ ಮಹಾಸ್ವಾಮಿಗಳು
ತಾಳಿಕೋಟೆ 13: ಪವಾಡ ಪುರುಷ ಖಾಸ್ಗತ ಶಿವಯೋಗಿಗಳು ಸಿದ್ಧಾರೂಢರ ಶಿಷ್ಯರಲ್ಲಿ ಅವರ ನೆಚ್ಚಿನ ಶಿಷ್ಯರಾಗಿದ್ದರು,ಅವರ ಸಾಮಾಜಿಕ , ಧಾರ್ಮಿಕ ಕಾರ್ಯಗಳಿಂದ, ಪವಾಡಗಳಿಂದಾಗಿ ಇಂದಿಗೂ ಜನರಿಗೆ ಪೂಜ್ಯರಾಗಿದ್ದಾರೆ ಎಂದು ಶಿರಸಿ ಚಿಕ್ಕತೊಟ್ಲಕೆರೆಯ ಬಣ್ಣದ ಮಠದ ಪೂಜ್ಯ ಶ್ರೀ.ಮ.ನಿ.ಪ್ರ ಶಿವಲಿಂಗ ಮಹಾಸ್ವಾಮಿಗಳು ಹೇಳಿದರು.
ಅವರು ಪಟ್ಟಣದ ಪ್ರತಿಷ್ಠಿತ ವೀರ ಶೈವ ವಿದ್ಯಾವರ್ಧಕ ಸಂಘ ವಿರಕ್ತಶ್ರೀ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀ ಖಾಸ್ಗತ ಶಿವಯೋಗಿಗಳ 129 ನೆಯ ಹಾಗೂ ಶ್ರೀ ವಿರಕ್ತ ಶ್ರೀ ಗಳ 11ನೇ ಪುಣ್ಯಸ್ಮರಣೋತ್ಸವದಸಾನ್ನಿದ್ಯ ವಹಿಸ ಆಶೀರ್ವದಿಸಿ ಈ ಮಾತು ಹೇಳಿದರು. ವೇದಿಕೆಯಲ್ಲಿ ಸಾನಿದ್ಯ ನೀಡಿ ಮಾತನಾಡಿದ ದೇವರ ಹಿಪ್ಪರಗಿ ಜಡೇಶ್ವರ ಮಠದ ಪೂಜ್ಯ ಜಡೇಶ್ವರ ಶಿವಾಚಾರ್ಯರು ಮತ್ತು ದೇವರಗೋಪುರದ ಸಂಸ್ಥಾನ ಮಠದ ಶ್ರೀ ಗಜದಂಡ ಶಿವಾಚಾರ್ಯರು ಶ್ರೀ ಖಾಸ್ಗತಶಿವಯೋಗಿಗಳ ಜೀವನದಲ್ಲಿ ನಡೆದ ಪ್ರಮುಖ ಪವಾಡಗಳನ್ನು ಸ್ಮರಿಸಿದರು. ಅಂಬಳನೂರ ಗ್ರಾಮದ ಪ್ರವಚನಕಾರರಾದ ಶ್ರೀ ಸಂಗಮನಾಥ ದೇವರು ವಿರಕ್ತಶ್ರೀಗಳ ಕೆಲವು ಪವಾಡಗಳನ್ನು ತಿಳಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಚೇರಮನ್ ವ್ಹಿ.ಸಿ.ಹಿರೇಮಠ, ಸಹಕಾರ್ಯದರ್ಶಿ ಕೆಎಸ್.ಮುರಾಳ, ಶ್ರೀಮಠದ ಆಡಳಿತ ಉಸ್ತುವಾರಿ ಮುರಗೇಶ ವಿರಕ್ತ ಮಠ ಇದ್ದರು. ಡಾ.ಎ.ಎಸ್.ಆಲಾಳಮಠ ಪ್ರಾಸ್ತಾವಿಕ ಮಾತನಾಡಿದರು. ಸಭೆಯಲ್ಲಿ ವೀ.ವಿ.ಸಂಘದ ಅಂಗ ಸಂಸ್ಥೆಗಳ ಚೇರಮನ್ ರು, ಪ್ರಾಚಾರ್ಯರು, ಉಪನ್ಯಾಸಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು. ಖಾಸ್ಗತ ಸಂಗೀತ ಶಾಲಯ ಶಿಕ್ಷಕರು ಪ್ರಾರ್ಥನೆ ಹಾಡಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 