ಅರ್ಥ, ಅನರ್ಥ ಪದಗಳ ಈ ಗೀತೆಗೆ ಪ್ರೇಕ್ಷಕ ಫಿದಾ!
ಈಗಾಗಲೇ ‘ಹೂ ದುಂಬಿ ...' ಸಾಂಗ್ನಿಂದ ಸೌಂಡ್ ಮಾಡುತ್ತಿರುವ ‘ಮನದ ಕಡಲು' ಚಿತ್ರದ ಎರಡನೇ ಗೀತೆ ‘ತುರಾ್ರ ...’ ಬಿಡುಗಡೆಯಾಗಿ, ಪಡ್ಡೆ ಹೈಕಳ ಮನಸ್ಸು ಗೆಲ್ಲುತ್ತಿದೆ. ಚಿತ್ರದ ನಿರ್ಮಾಪಕ ಈ ಕೃಷ್ಣಪ್ಪ ಅವರ ತೋಟದ ಮನೆಯಲ್ಲಿ ಚುಮುಚುಮು ಚಳಿಯಲ್ಲಿ ಈ ‘ತುರಾ್ರ ...’ ಸಾಂಗ್ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ, ವಿ. ಹರಿಕೃಷ್ಣ ಸಂಗೀತವಿದೆ. ಗೀತೆಯನ್ನು ಸಂಚಿತ್ ಹೆಗಡೆ, ಪ್ರಾರ್ಥನಾ ಹಾಗೂ ವಿ. ಹರಿಕೃಷ್ಣ ಹಾಡಿದ್ದಾರೆ.
ಸಾಂಗ್ ಬಿಡುಗಡೆ ನಂತರ ವೇದಿಕೆಯಲ್ಲಿ ಮಾತನಾಡಿದ ನಿರ್ದೇಶಕ ಯೋಗರಾಜ್ ಭಟ್, ‘ಅನರ್ಥ ಪದಗಳನ್ನು ಬಳಸಿ ಈ ಸಾಂಗ್ ಬರೆಯಲಾಗಿದೆ. ಅಚ್ಚಕನ್ನಡ ಪದಗಳು ಇದ್ದರೂ ಹೊಸತನದಲ್ಲಿ ಬಳಸಿದ್ದೇವೆ. ನಿರ್ಮಾಪಕರ ಈ ತೋಟದ ಮನೆಯಲ್ಲಿಯೇ ಚಿತ್ರದ ಕೆಲಸಗಳು ಶುರು ಆಗಿ, ಇಲ್ಲಿಯೇ ಚಿತ್ರಕ್ಕೆ ಕುಂಬಳಕಾಯಿ ಒಡೆಯಲಾಗಿದೆ. ಈ ‘ತುರಾ್ರ ...’ ನಮ್ಮ ಚಿತ್ರದಲ್ಲಿ ಮೊದಲು ಹುಟ್ಟಿದ ಹಾಡು. ಈ ಗೀತೆಯ ಸಾಹಿತ್ಯ ಹೀಗೆ ಇರಬೇಕು ಎಂದು ನಿರ್ಮಾಪಕ ಗಂಗಣ್ಣ ಹೇಳಿದ್ದರು. ನಂತರ ಕೃಷ್ಣಪ್ಪ ಅವರು ಇತರನೇ ಇರಲಿ ಎಂದರು. ಈ ತುರಾ್ರ ಪದ ಬರೆಯಲು ಕಾರಣ ನಾನು ಚಿಕ್ಕವನಿದ್ದಾಗ ಊರಲ್ಲಿ ಹುಚ್ಚನೋಬ್ಬ ಬಳಸುತ್ತಿದ್ದ ಅದನ್ನು ಗೀತೆಗೆ ಬಳಸಿಕೊಂಡೆ. ಲೋಕವನ್ನು ತುಂಬಾ ಪ್ರೀತಿಸುವ ವ್ಯಕ್ತಿ ಎಂದರೆ ಹುಚ್ಚ. ಅಂತ ಹುಚ್ಚರಿಗೆ ಈ ಗೀತೆ ಅರೆ್ಣ ಮಾಡುತ್ತೇನೆ. ಜಬ್ಬರ್ ಎಂಬ ಕವಿಯೋಬ್ಬ ಬೇರೆ ಬೇರೆ ದೇಶದ ಭಾಷೆಗಳನ್ನು ಬಳಸಿಕೊಂಡು ತನ್ನದೆ ಒಂದು ಭಾಷೆ ಮಾಡಿಕೊಂಡಿದ್ದ. ಆ ಮಾದರಿಯಲ್ಲಿ ಈ ಪ್ರಯತ್ನ ಮಾಡಲಾಗಿದೆ. ಈ ಗೀತೆ ಬರೆದಾಗ ಮೊದಲು ಭಯ ಇತ್ತು. ನಂತರ ತಂಡದ ಸದಸ್ಯರು ಒಬ್ಬೊಬ್ಬರಾಗಿ ಇಷ್ಟ ಪಡತಾ ಹೋದರು ಹಾಗಾಗಿ ಇದು ಗೆಲ್ಲುತ್ತದೆ ಎಂಬ ವಿಶ್ವಾಸ ಬಂತು' ಎಂದು ಹೇಳಿದರು.
ನಂತರ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಮಾತನಾಡಿ, ‘ಇದು ಆನಂದ ಪಟ್ಟು ಹಾಡಿದಂತ ಗೀತೆ ಅಲ್ಲ. ಹಾಡು ಕೇಳಿ ನಿರ್ಮಾಪಕರು ನಿಮ್ಮ ಧ್ವನಿ ಚನ್ನಾಗಿ ಇದೆ ಅಂದಾಗ ಭಯ ಆಯ್ತು. ಈ ತರ ಸಾಹಿತ್ಯ ಬರೆದು ಗೆಲ್ಲುವುದು ಭಟ್ಟರಿಗೆ ಒಲಿದಿದೆ. ಸ್ಮೈಲ್ ಕೊಟ್ಟುಕೊಂಡು, ಮಿನಿಂಗ್ ಹುಡುಕದೆ ಹಾಡಿದ್ದೇವೆ. ಚಿತ್ರದಲ್ಲೂ ತುಂಬಾ ಮುಖ್ಯವಾದ ಸ್ಥಳದಲ್ಲಿ ಈ ಗೀತೆ ಬರುತ್ತದೆ' ಎಂದರು. ನಟ ದತ್ತಣ್ಣ ‘ಇದು ಯಾವ ಭಾಷೆ ಅಂತ ಗೊತ್ತಾಗತಾ ಇಲ್ಲ. ಆದರೆ, ಕನ್ನಡಿಗರು ಹೊಸ ಅರ್ಥ ಹುಡುಕುತ್ತಾರೆ ಎಂಬ ನಂಬಿಕೆ ಇದೆ' ಎನ್ನುವರು. ಛಾಯಾಗ್ರಾಹಕ ಸಂತೋಷ ರೈ ಪತಾಜೆ, ‘ಹಾಡನ್ನು ಅರ್ಥ ಮಾಡಿಕೊಳ್ಳಲು ಹೋಗಬೇಡಿ ಸೌಂಡ್ ಕೆಳತಾ ಎಂಜಾಯ ಮಾಡಿ' ಎಂದರು.
ಇನ್ನು ಚಿತ್ರದ ನಿರ್ಮಾಪಕ ಈ ಕೃಷ್ಣಪ್ಪ ಮಾತನಾಡಿ, ‘ಚಿತ್ರದಲ್ಲಿ ಹಾಡುಗಳಂತ ದೃಶ್ಯಗಳು ಕುತೂಹಲ ಮೂಡಿಸುತ್ತಾ ಹೋಗುತ್ತವೆ. ಈ ಗೀತೆಯ ಸಾಹಿತ್ಯ ಅರ್ಥ ಆಗದಿದ್ದರೂ ಇಷ್ಟ ಆಯ್ತು. ಚಿತ್ರದಲ್ಲಿ ಬರುವ ನಾಲ್ಕು ಗೀತೆಗಳಿಗೆ 70 ತರ ಸಾಹಿತ್ಯ ಮಾಡಿಸಿದ್ದರು ನಿರ್ದೇಶಕರು' ಎಂದರು. ಮತ್ತೋರ್ವ ನಿರ್ಮಾಪಕ ಜಿ. ಗಂಗಾಧರ್ ‘ಮೊದಲ ಗೀತೆ ಹಿಟ್ ಆಗಿದ್ದು, ಈ ಸಾಂಗ್ನ ಸಾಹಿತ್ಯ ಅರ್ಥ ಆಗದಿದ್ದರೂ ಕೇಳಲು ಚನ್ನಾಗಿದೆ’ ಎನ್ನುವರು. ವೇದಿಕೆಯಲ್ಲಿ ಚಿತ್ರದ ನಾಯಕ ಸುಮುಖ, ನಾಯಕಿ ರಾಶಿಕಾ ಶೆಟ್ಟಿ ತಮ್ಮ ಅನುಭವ ಹಂಚಿಕೊಂಡರು. ಮುರಳಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿರುವ ಈ 'ತುರಾ್ರ ...’ ಗೀತೆಯಲ್ಲಿ ನಾಯಕ ಸುಮುಖ ಹಾಗೂ ನಾಯಕಿ ಅಂಜಲಿ ಅನೀಶ್ ಮೈಚಳಿ ಬಿಟ್ಟು ಹೆಜ್ಜೆ ಹಾಕಿದ್ದಾರೆ.