ಭರದಿಂದ ಸಾಗಿದ ಗದಗ ತಾಲೂಕ ನಾಯಕ ಶ್ರೀ ವಾಲ್ಮೀಕಿ ಮಹರ್ಷಿ ಸೇವಾ ಸಂಘದ ನಿವೇಶನ ಅಭಿವೃದ್ಧಿ ಕಾಮಗಾರಿ

ಭರದಿಂದ ಸಾಗಿದ ಗದಗ ತಾಲೂಕ ನಾಯಕ ಶ್ರೀ ವಾಲ್ಮೀಕಿ ಮಹರ್ಷಿ ಸೇವಾ ಸಂಘದ ನಿವೇಶನ ಅಭಿವೃದ್ಧಿ ಕಾಮಗಾರಿ The site development work of Gadag Taluk Leader Shri Valmiki Maharshi Seva Sangha progressed at a br

ಲೋಕದರ್ಶನ ವರದಿ 

ಗದಗ 10:- ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿ ಬರುವ 34 ನೇ ವಾರ್ಡಿನ ಶಿವಯೋಗಿ ಸಿದ್ರಾಮೇಶ್ವರ ನಗರದ ಸೀಟಿ ಸರ್ವೆ ನಂಬರ 3827 ರಲ್ಲಿನ ಗದಗ ತಾಲೂಕ ನಾಯಕ ಶ್ರೀ ವಾಲ್ಮೀಕಿ ಮಹರ್ಷಿ ಸೇವಾ ಸಂಘದ 1 ಎಕ್ಕರೆ 34 ಗುಂಟೆ ನಿವೇಶನದ ಅಭಿವೃದ್ಧಿ ಕಾಮಗಾರಿಯನ್ನು ಈ ಹಿಂದೆ ಸನ್ಮಾನ್ಯ ಎಚ್ ಕೆ ಪಾಟೀಲ್ ಸಾಹೇಬರು ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದ್ದರು. 

ಅದರ ಭಾಗವಾಗಿ ಇದೇ ದಿನಾಂಕ 05/04/2026 ರಂದು ಸನ್ಮಾನ್ಯ ಗದಗ ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರ ವಿವೇಚನಾ ನಿಧಿ ಅಡಿಯಲ್ಲಿ ನಿವೇಶನದ ವಿವಿಧ ಅಭಿವೃದ್ಧಿಗಳಾದ ಕಂಪೌಂಡ್ ನಿರ್ಮಾಣ, ನೀರಿನ ಬೋರ್ ವೇಲ್ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ವಿಶೇಷ ಅನುದಾನವಾಗಿ ಸುಮಾರು 50 ಲಕ್ಷ ರೂಪಾಯಿಗಳ ಯೋಜನೆಗೆ ಅನುಮೋದನೆ ನೀಡಿದ್ದರು. 

ಸನ್ಮಾನ್ಯ ಸಚಿವರ ಈ ನಮ್ಮ ಸಮಾಜದ ಮೇಲೆ ಇರುವ ಕಾಳಜಿಯಿಂದ ಹಿಂದೆ ತಾವು ಪೂಜೆ ನಿರ್ವಹಿಸಿದ ಪ್ರಕಾರ ತಾವು ನುಡಿದಂತೆ ನಡೆದು ಕೊಟ್ಟ ಮಾತಿನಂತೆ ನಡೆದು ಸಮಾಜದ ಅಭಿವೃದ್ಧಿಗೆ ಕೈಜೋಡಿಸಿರುವುದು ತುಂಬಾ ತುಂಬಾ ಸಂತಸದ ಸಂಗತಿಯಾಗಿರುತ್ತದೆ. 

ಈ ಒಂದು ವಿಶೇಷ ಅನುದಾನದ ಅಡಿಯಲ್ಲಿ ಇದೇ ದಿನಾಂಕ 05/04/2026 ರ ಭಾನುವಾರ ದಂದು ಸಮಾಜದ ಮುಖಂಡರು ಗದಗ ಜಿಲ್ಲಾ ವಾಲ್ಮೀಕಿ ನಾಯಕ ಸೇವಾ ಸಂಘದ ಅಧ್ಯಕ್ಷರಾದ ಬಸವರಾಜ್ ಬೆಳದಡಿ ಇವರ ನೇತೃತ್ವದಲ್ಲಿ ಹಾಗೂ ಸಂಘದ ತಾಲೂಕ ಕಾರ್ಯದರ್ಶಿಗಳಾದ ಶಿವಪ್ಪ ತಿಪ್ಪಣ್ಣ ಬಳ್ಳಾರಿ ಇವರ ಮುಖಂಡತ್ವದಲ್ಲಿ ನೀರಿನ ಬೋರ್ ವೇಲ್ ಹಾಕಿಸಲಾಯಿತು  

ಈ ಸಂಧರ್ಭದಲ್ಲಿ ಗದಗ ತಾಲೂಕ ವಾಲ್ಮೀಕಿ ಸಮಾಜದ ಅಧ್ಯಕ್ಷರಾದ ಆದಪ್ಪ ಮಾರೇಪ್ಪನವರು ಸಮಾಜದ ಹಿರಿಯರಾದ ಸತ್ಯಪ್ಪ ಹೊಂಬಳ, ಕೃಷ್ಣಪ್ಪ ದೇವರಮನಿ, ರಂಗಪ್ಪ ಎರಗುಡಿ, ಶಿವಪ್ಪ ಬಳ್ಳಾರಿ 34ನೇ ವಾರ್ಡಿನ ಮಾಜಿ ನಗರಸಭೆ ಸದಸ್ಯರಾದ ಅನಿಲ್ ಗರಗ ಮತ್ತು ನಾಗರಾಜ್ ಕುರುಗೋಡು ಮುತ್ತುರಾಜ ಬಳಗನೂರ, ಮಾರುತಿ ಕಾತರಕಿ ಶಿವಕುಮಾರ್ ಯರಗುಡಿ, ಕಿರಣ ನಾಯ್ಕರ್ ಬಸವರಾಜ್ ದಾವಣಗೆರೆ, ಬಸವರಾಜ ಅಬ್ಬಿಗೇರಿ, ದಾವಲ್ ಸಾಬ್ ತಹಸೀಲ್ದಾರ್ ದಾದಾಪೀರ್ ಮುಂಡರಗಿ, ಮೆಹಬೂಬ್ ಹನಗಿ, ರಜಾಕ್ ಸಾಬ್ ನವಲಗುಂದ, ಹಾಗೂ ಸಮಸ್ತ ವಾಲ್ಮೀಕಿ ಸಮಾಜ ಭಾಂದವರು ಉಪಸ್ಥಿತರಿದ್ದರು.