ಶಾಲಾ ಅಡುಗೆಯವರ ಗೌರವಧನ ಹೆಚ್ಚಳಕ್ಕೆ ಮನವಿ

ಹಾವೇರಿ 02: ಮಕ್ಕಳಿಗೆ ತಯಾರಿಸುವ ಆಹಾರದ ಗುಣಮಟ್ಟ ಹಾಗೂ ರುಚಿಯನ್ನು ಕಾಯ್ದುಕೊಳ್ಳಿ ಎಂದು ಜಿಲ್ಲೆಯ ಅಡುಗೆ ಸಹಾಯಕ ಸಿಬ್ಬಂದಿಗಳಿಗೆ ಹಾವೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ನೆಹರು ಓಲೇಕಾರ ಅವರು ಸಲಹೆ ನೀಡಿದರು.

ನಗರದ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಜರುಗಿದ ತಾಲೂಕು ಪಂಚಾಯತ್ ಅಕ್ಷರ ದಾಸೋಹ ಕಾರ್ಯಕ್ರಮದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಡುಗೆ ತಯಾರಿಕೆ ಸಿಬ್ಬಂದಿಗಳು ಹಾಗೂ ಸಹಾಯಕರಿಗೆ ಆಯೋಜಸಿದ ಒಂದು ದಿನದ ತರಬೇತಿ ಕಾಯರ್ಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಗಾಗಿ ತಯಾರಿಸಿ ಪೂರೈಸುವ ಅಡುಗೆಯಲ್ಲಿ ತುಂಬಾ ಎಚ್ಚರಿಕೆ ವಹಿಸಬೇಕು. ತಯಾರಿಕೆಯಲ್ಲಿ ಸಿಬ್ಬಂದಿಗಳು ಅತ್ಯಂತ ಶಿಸ್ತುಬದ್ಧವಾಗಿ ತೊಡಗಿಸಿಕೊಳ್ಳಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು, ಮಕ್ಕಳು ಬಯಸುವ ರೀತಿಯಲ್ಲಿ ರುಚಿಯಾದ ಖಾದ್ಯಗಳನ್ನು ತಯಾರಿಸುವ ಮೂಲಕ ಮಕ್ಕಳ ಮನ ಗೆಲ್ಲಬೇಕು. ಶುಚಿ, ರುಚಿಯ ಜೊತೆಗೆ ಮಿತವ್ಯಯ ಕ್ರಮವನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.

ನಿಮ್ಮೆಲ್ಲರ ಆಶಯದಂತೆ ಗೌರವಧನ ಹೆಚ್ಚಳ ಬೇಡಿಕೆಯನ್ನು ಸಕರ್ಾರದ ಗಮನಸೆಳೆಯಲಾಗುವುದು ಎಂದು ಈ ಸಂದರ್ಭದಲ್ಲಿ ಭರವಸೆ ನೀಡಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ ಹುಕ್ಕೇರಿ ಮಠದ ಸದಾಶಿವ ಶ್ರೀಗಳು, ಶಾಲಾ ಮಕ್ಕಳನ್ನು ನಿಮ್ಮ ಮನೆ ಮಕ್ಕಳೆಂದು ಭಾವಿಸಿ ಪ್ರೀತಿ, ಮಮತೆಯಿಂದ ಆಹಾರ ತಯಾರಿಸಿ ಬಡಿಸಿ. ನೀವು ಆಹಾರ ತಯಾರಿಸುವ ಕ್ರಮದಲ್ಲಿ ಬದಲಾವಣೆಮಾಡಿಕೊಂಡು ಶುಚಿಯೊಂದಿಗೆ ರುಚಿಯನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಹಚ್.ಪಾಟೀಲ್ ಅವರು ಮಾತನಾಡಿ, ಮಕ್ಕಳಿಗಾಗಿ ಆಹಾರ ತಯಾರಿಸುವಾಗ ಗರಿಷ್ಠ ಎಚ್ಚರವನ್ನು ವಹಿಸಬೇಕು. ಮಕ್ಕಳಿಗೆ ಆಹಾರ ವಿತರಣೆ ಮುನ್ನ ಶಿಕ್ಷಕರು ಸೇವಿಸಿದ ನಂತರ ವಿತರಿಸಬೇಕು. ಇದು ಸಕರ್ಾರದ ನಿಯಮವಿದೆ. ಎಲ್ಲ ಶಾಲೆಗಳಲ್ಲೂ ಈ ಕ್ರಮವನ್ನು ಅನುಸರಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ತಾಲೂಕ ಪಂಚಾಯತ ಅಧ್ಯಕ್ಷರಾದ ಶ್ರೀಂತಿ ಕಮಲವ್ವ ಹೇಮನಗೌಡ ಪಾಟೀಲ, ನಗರಸಭೆ ಪ್ರಾಧಿಕಾರದ ಅಧ್ಯಕ್ಷರಾದ ಶಿವಕುಮಾರ ಸಂಗೂರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿದರ್ೇಶಕರಾದ ಅಂದಾನೆಪ್ಪ ವಡಗೇರಿ, ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಸಿ.ಎಸ್.ಭಗವಂತಗೌಡ್ರ, ದೈಹಿಕ ಶಿಕ್ಷಣಾಧಿಕಾರಿ ಎನ್.ಐ.ಇಚ್ಚಂಗಿ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕಿ ಪಿ.ಎಸ್.ಬಿದರಿ  ಇತರರು ಉಪಸ್ಥಿತರಿದ್ದರು.