ಯೋಧರ ತ್ಯಾಗ ಬಲಿದಾನ ಸದಾ ಅಜರಾಮರವಾಗಿದೆ: ಮುತ್ತೆಪ್ಪ ನೀಲಣ್ಣವರ

ಯೋಧರ ತ್ಯಾಗ ಬಲಿದಾನ ಸದಾ ಅಜರಾಮರವಾಗಿದೆ: ಮುತ್ತೆಪ್ಪ ನೀಲಣ್ಣವರ The sacrifice and martyrdom of soldiers remain forever immortal: Mutteppa Neelannavara

ಲೋಕದರ್ಶನ ವರದಿ 

ಬೆಟಗೇರಿ 27 : ದೇಶ ರಕ್ಷಣೆಯಲ್ಲಿ ಸೈನಿಕರ ಪಾತ್ರ ಅತ್ಯಂತ ಮಹತ್ವದಾಗಿದೆ. ಪ್ರತಿ ಮನೆಗೊಬ್ಬರೂ ಸೈನಿಕರಾಗಿ ದೇಶ ಸೇವೆ ಮಾಡಲು ಸಿದ್ಧರಾಗಬೇಕು. ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಪ್ರತಿ ಯೋಧರು ಸದಾ ಸ್ಮರಣೀಯರಾಗಿದ್ದಾರೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ನಿವೃತ್ತ ಸೈನಿಕ ಮುತ್ತೆಪ್ಪ ನೀಲಣ್ಣವರ ಹೇಳಿದರು. 

ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಜು.26 ರಂದು ನಡೆದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದ ಪ್ರಯುಕ್ತ ಸ್ಥಳೀಯ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ನಿರ್ಮಿಸಿರುವ ಭಾರತ ಮಾತೆ ಮೂರ್ತಿಗೆ ಪೂಜೆ, ಪುಷ್ಪ ಸಮರಿ​‍್ಸ ಮಾತನಾಡಿ,

ಈ ಭೂಮಿಯ ಮೇಲೆ ಯೋಧರ ತ್ಯಾಗ ಬಲಿದಾನ ಸದಾ ಅಜರಾಮರವಾಗಿದೆ. ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಸ್ಥಳೀಯ ನಿವೃತ್ತ ಸೈನಿಕ ಶಂಕರ ತೊಂಡಿಕಟ್ಟಿ ಅವರು ಮಾಡಿದ ದೇಶ ಸೇವೆ ಸ್ಮರಣೀಯವಾಗಿದೆ. ನಮ್ಮ ರಾಷ್ಟ್ರದ ಸೈನಿಕ ಪಡೆ ಜಗತ್ತಿಗೆ ಮಾದರಿಯಾಗಿದೆ ಎಂದರು. 

  ಸ್ಥಳೀಯ ನಿವೃತ್ತ ಸೈನಿಕ ಶಂಕರ ತೊಂಡಿಕಟ್ಟಿ ಅವರು ಕಾರ್ಗಿಲ್ ಯುದ್ಧದಲ್ಲಿ ಯೋಧರು ಹೋರಾಡಿದ ಬದುಕು ಬವಣೆ,   ಯುದ್ಧದಲ್ಲಿ ಕಳೆದ ದಿನಗಳ ಪರಿಸ್ಥಿತಿ, ಯುದ್ದದ ಯಶಸ್ಸು ಬಗ್ಗೆ ಈ ವೇಳೆ ಹೇಳಿದರು.  

ದೇಶ ಸೇವೆಗೆ ಮಕ್ಕಳನ್ನು ಕಳುಹಿಸಿ: ದೇಶ ಸೇವೆಗಾಗಿ ಪ್ರತಿ ಮನೆಯಿಂದ ಒಬ್ಬ ಸೈನಿಕರಾಗಿ ಸೇವೆ ಮಾಡಲು ಕಳುಹಿಸಲು ಹೆತ್ತ ತಂದೆ ಮತ್ತು ತಾಯಿಂದಿರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸ್ಥಳೀಯ ಯುವಕರು ಸೈನ್ಯ ಸೇರಿ ರಾಷ್ಟ್ರದ ಘನತೆ, ಭಾರತ ಮಾತೆಯ ಸೇವೆ ಮಾಡಲು ಪ್ರಯತ್ನಿಸಬೇಕು ಎಂದು ಸ್ಥಳೀಯ ನಿವೃತ್ತ ಸೈನಿಕರು ಈ ವೇಳೆ ತಿಳಿಸಿದರು. 

  ಸ್ಥಳೀಯ ನಿವೃತ್ತ ಯೋಧ ಈರ​‍್ಪ ದೇಯಣ್ಣವರ, ಮಹಾದೇವ ಮಿಡಕನಟ್ಟಿ, ಶಂಕರ ತೊಂಡಿಕಟ್ಟಿ, ಪುಂಡಲೀಕ ಪೂಜೇರಿ, ಸುಭಾಷ ಪಡಶೆಟ್ಟಿ, ಬಸವರಾಜ ಬಡಿಗೇರ ಸೇರಿದಂತೆ ಸ್ಥಳೀಯ ನಿವೃತ್ತ ಸೈನಿಕರು, ಶಾಲೆ-ಕಾಲೇಜು ವಿದ್ಯಾರ್ಥಿಗಳು, ಸ್ಥಳೀಯರು, ಇತರರು ಇದ್ದರು.