ನಮ್ಮ ವ್ಯಕ್ತಿತ್ವ ನಿರ್ಮಾಣದ ರೂವಾರಿಗಳು ನಾವೇ: ಪ್ರಸಾದ

ಧಾರವಾಡ 20: ವ್ಯಕ್ತಿ ಜೀವನದಲ್ಲಿ ಮೇಲೆ ಬರಬೇಕಾದರೆ ವಿಶೇಷವಾದ ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಆ ಪ್ರತಿಭೆೆಯಿಂದ ಆತನ ವ್ಯಕ್ತಿತ್ವ ರೂಪಿತವಾಗುತ್ತದೆ. ಹಾಗಾಗಿ ನಮ್ಮ ವ್ಯಕ್ತಿತ್ವ ನಿರ್ಮಾಣದದಲ್ಲಿ ನಮಗೆ ನಾವೆ ರೂವಾರಿಗಳು. ವಿದ್ಯಾರ್ಥಿಗಳಲ್ಲಿ ಜ್ಞಾನದ ಹಸಿವಿರಬೇಕು ಆಗ ಮಾತ್ರ ವಿದ್ಯಾರ್ಥಿ  ಎಲ್ಲರಿಗೂ ಆದರ್ಶ ಪ್ರಾಯನಾಗಲು ಸಾಧ್ಯ ಎಂದು ಪ್ರಾಚಾರ್ಯ ಡಾ. ಅಜಿತ ಪ್ರಸಾದ ಹೇಳಿದರು.

ಜೆ.ಎಸ್.ಎಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾಥರ್ಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು. 

ಈಗಿನ ವಿದ್ಯಾರ್ಥಿ ಸಮುದಾಯಕ್ಕೆ ಶಾಂತಿ, ಸಹನೆ ತಾಳ್ಮೆ ಹಿರಿಯರಲ್ಲಿ ಗೌರವ ಅತ್ಯಂತ ಅವಶ್ಯಕವಾದ ಮಾನದಂಡಗಳಾಗಿವೆ. ಈ ದಿನ ವಿದ್ಯಾರ್ಥಿಗಳಿಗೆ ಸಂದ ಗೌರವ ಅವರ ಪ್ರತಿಭೆಗೆ ಸಂದ ಸನ್ಮಾನ. ಕೀಳರಿಮೆ ಬಿಟ್ಟು ಹೊರಬಂದಾಗ ಮಾತ್ರ ಇಂತಹ ಸನ್ಮಾನಗಳಿಗೆ ಪಾತ್ರರಾಗಲು ಸಾಧ್ಯ. ಆದರ್ಶ ವಿದ್ಯಾರ್ಥಿ ಸಂಸ್ಥೆಯ ಸಮಾಜದ ಆಸ್ತಿ ಪಾಲಕರ ಹೆಮ್ಮೆಯಾಗಲು ಸಾಧ್ಯ ಎಂದು ಹೇಳಿದರು.

ವಯಸ್ಸು ಮತ್ತು ಪರಿಸರ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಗಾಢ ಪರಿಣಾಮ ಉಂಟು ಮಾಡುತ್ತದೆ. ಅಧ್ಯಾಪಕ, ಪಾಲಕ ವಿದ್ಯಾರ್ಥಿಗಳೆಂಬ ಈ ಮೂರು ಸಮನ್ವಯ ಸಾಧಿಸಿದಾಗ ಮಾತ್ರ ಯಶಸ್ಸು ಸಾಧ್ಯ ಎಂದು ಸಮಾರಂಭದಲ್ಲಿ ಪಾಲ್ಗೊಂಡಿದ್ದ ಖ್ಯಾತ ಕ್ರೀಡಾಪಟು ಅರ್ಜು ನ ದೇವಯ್ಯ ಹೇಳಿದರು.

ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದ ವಿದ್ಯಾಥಿಗಳಲ್ಲಿ ಪದವಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಸೂರಜ್ ಜೈನ್, ವಿಭಾ ಮುಗಳಿ, ಕಾಮತ ಉಪಸ್ಥಿತರಿದ್ದರು. ಆರಾಧನಾ ಪ್ರಾಥರ್ಿಸಿದರು. ವಿಭಾ ಮುಗಳಿ ಸ್ವಾಗತಿಸಿದರು. ಜ್ಯೋತಿ ಅಕ್ಕಿ ನಿರೂಪಿಸಿದರು, ಡಾ. ನವೀನ್ ಬಡಿಗೇರ ವಂದಿಸಿದರು.