ಸಮಾಜದ ಶ್ರೇಯೋಭಿವೃದ್ಧಿಗೆ ಮಹಿಳೆಯರ ಪಾತ್ರ ಅಪಾರ : ಹೆಚ್‌.ದೊಡ್ಡಬಸಪ್ಪ

ಸಮಾಜದ ಶ್ರೇಯೋಭಿವೃದ್ಧಿಗೆ ಮಹಿಳೆಯರ ಪಾತ್ರ ಅಪಾರ : ಹೆಚ್‌.ದೊಡ್ಡಬಸಪ್ಪ The role of women in the welfare of society is immense: H. Doddabasappa

ಲೋಕದರ್ಶನ ವರದಿ

ಕಂಪ್ಲಿ 08:  ಮಹಿಳೆಯು ಸಮಾಜದ ಸ್ವಾಭಿಮಾನದ ಸಂಕೇತವಾಗಿದ್ದು, ಪ್ರತಿ ಕ್ಷೇತ್ರದಲ್ಲಿ ಮಹಿಳೆಯು ಗುರುತಿಸಿಕೊಂಡು ಸಮಾಜದ ಪ್ರಗತಿಯ ಪ್ರಮುಖ ಭಾಗವಾಗಿದ್ದಾಳೆ’ ಎಂದು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಹೆಚ್‌.ದೊಡ್ಡಬಸಪ್ಪ ಹೇಳಿದರು.ಪಟ್ಟಣದ ವಾಲ್ಮೀಕಿ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತಾಲೂಕು ಘಟಕದಿಂದ ಶನಿವಾರ ಆಚರಿಸಿದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಸಮಾಜದ ಶ್ರೇಯೋಭಿವೃದ್ಧಿಗೆ ಮಹಿಳೆಯರ ಪಾತ್ರ ಅಪಾರ. ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಕಲ್ಪನಾ ಚಾವ್ಲಾ, ಅಕ್ಕ ಮಹಾದೇವಿ ಸೇರಿದಂತೆ ಹಲವು ಮಹಿಳೆಯರು ಸಮಾಜಕ್ಕೆ ಹಲವು ಕೊಡುಗೆ ನೀಡಿದ್ದಾರೆ. ಅವರಂತೆಯೇ ಮಹಿಳಾ ದೊಡ್ಡ ಮಟ್ಟದಲ್ಲಿ ಬೆಳೆಯಬೇಕು ಎಂದರು. 

ಸಾವಿತ್ರಿ ಬಾಯಿ ಪುಲೆ ತಾಲೂಕು ಅಧ್ಯಕ್ಷೆ ಸುನಿತಾ ಪೂಜಾರಿ ಉದ್ಘಾಟಿಸಿ ಮಾತನಾಡಿ, ಸ್ವಸ್ಥ ಸಮಾಜ ನಿರ್ಮಾಣಕ್ಕೆ ಮಹಿಳೆಯರ ಪಾತ್ರ ಮಹತ್ತರವಾಗಿದೆ. ಜತೆಗೆ ಸಮಾಜದಲ್ಲಿ ಮಹಿಳೆಯರ ಜವಾಬ್ದಾರಿ ಹೆಚ್ಚಿನದ್ದಾಗಿದೆ. ಮಹಿಳೆಯರಿಗೆ ಹೆಚ್ಚಿನ ಅವಕಾಶಗಳು ದೊರೆಯಬೇಕು ಎಂದರು.ಮಹಿಳಾ ಶಿಕ್ಷಕಿ ನಾಗವೇಣಿ, ಮಹಿಳೆಯರ ಆತ್ಮಸ್ಥೈರ್ಯ ಕುರಿತು ಉಪನ್ಯಾಸ ನೀಡಿದರು.ದಿನಾಚರಣೆ ಪ್ರಯುಕ್ತ ಮಹಿಳಾ ನೌಕರರಿಗೆ ರಂಗೋಲಿ, ಮ್ಯೂಸಿಕಲ್ ಚೇರ್, ಗ್ಲಾಸ್ ಮತ್ತು ಬಲೂನ್ ಆಟ, ಭಾಗಗೀತೆ ಸೇರಿದಂತೆ ವಿವಿಧ ಸ್ಪರ್ಧೆಗಳು ಜರುಗಿದ್ದು, ವಿಜೇತರಿಗೆ ಬಹುಮಾನದೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಕೆ.ವಿರುಪಾಕ್ಷಪ್ಪ, ಗೌರವಾಧ್ಯಕ್ಷ ಶಿವಪ್ಪ, ಖಜಾಂಚಿ ನಾಸೀರ್ ಹುಸೇನ್, ಉಪಾಧ್ಯಕ್ಷರಾದ ಹುಲುಗಪ್ಪ, ಚನ್ನಬಸಪ್ಪ, ಲತೀಫಾ ಬೇಗಂ, ಕಾರ್ಯದರ್ಶಿ ವಾಮದೇವ, ಸಂಘಟನಾ ಕಾರ್ಯದರ್ಶಿ ಬೀರಲಿಂಗಪ್ಪ, ಸಾಂಸ್ಕೃತಿಕ ಕಾರ್ಯದರ್ಶಿ ಸುನಿತಾ, ಸಹ ಕಾರ್ಯದರ್ಶಿ ಅನುದೀಪ್, ಜಿಪಿಟಿ ಕಾರ್ಯದರ್ಶಿ ನಿಂಗರಾಜ, ಶಿಕ್ಷಕರ ಸಂಘದ ಉಪಾಧ್ಯಕ್ಷ ಚಂದ್ರಶೇಖರ ಸೇರಿದಂತೆ ಪದಾಧಿಕಾರಿಗಳು, ವಿವಿಧ ಇಲಾಖೆಯ ನೌಕರರು ಇದ್ದರು.