ಶೈಕ್ಷಣಿಕ ಅಭಿವೃದ್ಧಿಗೆ ಶಿಕ್ಷಕರ ಪಾತ್ರ ಹಿರಿದು
The role of teachers in educational development is immense
ರಬಕವಿ-ಬನಹಟ್ಟಿ 12: ವಿದ್ಯಾರ್ಥಿಗಳ ಮನದಾಳಕ್ಕೆ ಹೋಗಿ ಅವರಇಷ್ಟಾನುಸಾರ ಬೋಧನೆ ಮಾಡುವಲ್ಲಿ ಮತ್ತು ಶೈಕ್ಷಣಿಕಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆಎಂದು ಬಾಗಲಕೋಟೆ ಜಿಲ್ಲಾಡಿಡಿಪಿಐಅಜಿತ ಮನ್ನಿಕೇರಿ ಹೇಳಿದರು.
ರಬಕವಿ ಹೊಸೂರಿನ ಹಜಾರೆ ಫೌಂಡೇಶನ್, ಪದ್ಮಾವತಿ ವಿಜ್ಞಾನ ಮತ್ತು ವಾಣಿಜ್ಯ ಪಪೂ ಮಹಾವಿದ್ಯಾಲಯದಲ್ಲಿಜಿಪಂ, ಶಾಲಾ ಶಿಕ್ಷಣ ಇಲಾಖೆ ಬಾಗಲಕೋಟೆ, ಕ್ಷೇತ್ರ ಶಿಕ್ಷಣಾಧಿಕಾರಿ ಗಳು ಜಮಖಂಡಿಇವರ ಸಹಯೋಗದಲ್ಲಿಜಿಲ್ಲೆಯ ಪ್ರೌಢಶಾಲೆಗಳ ವಿಜ್ಞಾನ ಶಿಕ್ಷಕರಿಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶ ವೃದ್ಧಿಗಾಗಿ ಬುಧವಾರ ಹಮ್ಮಿಕೊಂಡಿದ್ದಒಂದು ದಿನದಕಾರ್ಯಾಗಾರಕ್ಕೆ ಚಾಲನೆ ನೀಡಿಅವರು ಮಾತನಾಡಿ, ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ವೃದ್ಧಿಸಲು ಶಿಕ್ಷಕರು ಉತ್ತಮವಾದತಯಾರಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿ ಪಠ್ಯ ಪುಸ್ತಕ ರಚನಾ ಸಮಿತಿ ಮಾಜಿಸದಸ್ಯಡಾ.ಗಣೇಶ್ ಭಟ್ ಮಾತನಾಡಿ, ಶಿಕ್ಷಕರಾದವರು ಚಟುವಟಿಕೆಗಳ ಮೂಲಕ ಪಾಠ ಬೋಧಿಸುವ ಕಲೆಗಳನ್ನು ವಿದ್ಯಾರ್ಥಿಗಳು ತಮ್ಮ ಬೋಧನೆಯ ಕಡೆಗೆಗಮನ ಕೊಡುವ ಕೌಶಲ್ಯಕರಗತ ಮಾಡಿಕೊಳ್ಳಬೇಕೆಂದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ಪಠ್ಯ ಪುಸ್ತಕ ರಚನಾ ಸಮಿತಿ ಸದಸ್ಯ ಶಶಿಕುಮಾರ ಬಿ.ಎಸ್. ಜಮಖಂಡಿ ಬಿಪೊ ಅಶೋಕ ಬಸನ್ನವರ ಮಾತನಾಡಿದರು.
ಸಂಸ್ಥೆಯಕಾರ್ಯಾಧ್ಯಕ್ಷ ಸತೀಶ ಹಜಾರೆ, ಆಡಳಿತಾಧಿಕಾರಿ ಭಾರತಿ ತಾಳಿಕೋಟಿ, ಪ್ರಾಚಾರ್ಯ ಶ್ರೀಶೈಲ ಕುಂಬಾರ, ಎಲ್ಲಉಪನ್ಯಾಸಕರು, ಪ್ರಾಚಾರ್ಯ ಸತೀಶ ಬೆಳಗಲಿ ಸೇರಿದಂತೆಅನೇಕರಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 