ಸಹಕಾರಿ ಸಂಘಗಳು ಪ್ರಗತಿ ಹೊಂದಲು ಶೇರುದಾರ ಹಾಗೂ ಸಿಬ್ಬಂದಿ ಪಾತ್ರ. ಮುಖ್ಯ : ಗಿಡ್ಡನ್ನವರ
The role of shareholders and staff in the progress of cooperative societies. Main: Giddanavara
ಲೋಕದರ್ಶನ ವರದಿ
ಗುರ್ಲಾಪೂರ 04 : ಸಮೀಪದ ಶಿವಾಪೂರ(ಹ) ಸಹಕಾರಿ ಸಂಘಗಳು ಪ್ರಗತಿ ಹೊಂದಲು ಶೇರುದಾರ ಹಾಗೂ ಸಿಬ್ಬಂದಿ ಪಾತ್ರ ಮುಖ್ಯವಾಗಿದೆ. ಎನ್ನುತ್ತಾ ಷೇರುದಾರರ ಹಾಗೂ ಸಿಬ್ಬಂದಿಗಳ ಸಹಕಾರದಿಂದ ಸೊಸೈಟಿ 2026 ಮಾರ್ಚ ಅಂತ್ಯಕ್ಕೆ 28.04 ಲಕ್ಷ ಲಾಭಗಳಿಸಿ ಪ್ರಗತಿಹೊಂದಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಸೊಸೈಟಿ ಅಧ್ಯಕ್ಷ ಸಿದ್ದಪ್ಪ ಗಿಡ್ಡನ್ನವರ ಹೇಳಿದರು.
ಶಿವಾಪೂರ ಅರ್ಬನ್ಸೊಸೈಟಿಯ ಸಭಾಭವನದಲ್ಲಿ ಜರುಗಿದ 2025-26 ನೇ ಸಾಲಿನ ಪ್ರಗತಿ ಪರೀಶೀಲನಾ ಸಭೆಯಲ್ಲಿ ಮಾತನಾಡಿದ ಅವರು, 2026ನೇ ಮಾರ್ಚ ಅಂತ್ಯಕ್ಕೆ ಸೊಸೈಟಿ ರೂ.32.30 ಲಕ್ಷ ಶೇರು ಬಂಡವಾಳ ಹೊಂದಿದ್ದು, ಒಟ್ಟು ನಿಧಿಗಳು 1.14 ಕೋಟಿ ರೂಗಳು, 17.14 ಕೋಟಿ ರೂ ಠೇವು ಸಂಗ್ರಹಿಸಿ, 10.34 ಕೋಟಿ.ರೂ
ವಿವಿಧ ರೀತಿಯ ಸಾಲಗಳನ್ನುವಿತರಿಸಿ, 19.30 ಕೋಟಿರೂ.ದುಡಿಯುವಬಂಡವಾಳ
ಹೊಂದಿದೆ ಎಂದರು. ಮುಖ್ಯಕಾರ್ಯನಿರ್ವಾಹಕ ದರೇಪ್ಪಾ ಸುಣದೊಳಿ ಮಾತನಾಡಿ,ಸಹಕಾರಿ ಸಂಘವು ನಡೆದು ಬಂದ ದಾರಿ ಗ್ರಾಹಕರಿಗೆ ನಮ್ಮ ಸಹಕಾರದಿಂದ ಸಿಗುವ ಸೌಲಭ್ಯಗಳು ತಿಳಿಹೇಳಿದರು.
ಸೊಸೈಟಿ ಉಪಾಧ್ಯಕ್ಷ ಉಮೇಶ ಮುಧೋಳ, ನಿರ್ದೇಶಕರಾದ ಕಲ್ಲಪ್ಪ ಬೆಂಡವಾಡ, ಶಿವಬಸುಶೇಕ್ಕಿ, ಮಲ್ಲಪ್ಪ ಜುಂಜರವಾಡ, ಈಶ್ವರ ಗೋರಗುದ್ದಿ, ಮಲ್ಲಪ್ಪ ಪಾಟೀಲ, ಈರ್ಪ ಜುಂಜರವಾಡ, ಎಲ್.ಎಂಪಾಟೀಲ, ಹುವಕ್ಕಎಂ. ಶೀಳನ್ನವರ, ಶಕುಂತಲಕದಂ, ಸಂಸ್ಥೆಯ ಮಾರ್ಗದರ್ಶಕರಾದ ಮಹಾದೇವ ಶಿಳನವರ, ಸಿಬ್ಬಂದಿ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 