ಅಪರಾಧ ಪತ್ತೆಯಲ್ಲಿ ಶ್ವಾನದಳದ ಪಾತ್ರ ಅಪಾರ: ಎ.ಆರ್.ಎಸ್.ಐ. ವಿಠ್ಠಲ ಗೊರಬಾಲ
The role of dog squad in detecting crime is immense: ARSI Viththala Gorabala
ಲೋಕದರ್ಶನ ವರದಿ
ಬೆಳಗಾವಿ 13 : ಪೊಲೀಸ್ ಮತ್ತು ರಕ್ಷಣಾ ಪಡೆಗಳಲ್ಲಿ ಶ್ವಾನದಳ ಹಾಗೂ ವಿಧ್ವಂಸಕ ಕೃತ್ಯ ತಪಾಸಣಾ ತಂಡ ಮತ್ತು ವಿಲೇವಾರಿ ದಳ ಅತ್ಯಂತ ಪ್ರಮುಖ ಘಟಕಗಳಾಗಿವೆ. ಇವುಗಳಿಂದಾಗಿ ಅದೆಷ್ಟೋ ಆಪತ್ತುಗಳು ದೂರವಾಗಿವೆ ಎಂದು ಬೆಳಗಾವಿಯ ನಗರದ ಪೊಲೀಸ್ ಆಯುಕ್ತಾಲಯದ ಉಪ ಮೀಸಲು ಪೊಲೀಸ್ ನೀರೀಕ್ಷಕರಾದ ವಿಠ್ಠಲ ಗೊರಬಾಲ ಹೇಳಿದರು.ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಅಪರಾಧ ಶಾಸ್ತ್ರ ಮತ್ತು ವಿಧಿ ವಿಜ್ಞಾನ ವಿಭಾಗದ ವತಿಯಿಂದ ಡಾಗ್ ಸ್ಕ್ವಾಡ್ ಹಾಗೂ ಬಾಂಬ್ ಸ್ಕ್ವಾಡ್ ಕಾರ್ಯವಿಧಾನದ ಕುರಿತು ಶುಕ್ರವಾರ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ವಾನದಳದಲ್ಲಿ ಸಾಮಾನ್ಯವಾಗಿ ಲ್ಯಾಬ್ರಡಾರ್ , ಜರ್ಮನ್ ಶೆಫರ್ಡ, ಬೆಲ್ಜಿಯನ್ ಮಾಲಿನೋಯಿಸ್ ಮತ್ತು ಮುಧೋಳ ಹೌಂಡ್ ತಳಿಗಳಿವೆ. ಅವು ವಾಸನೆ ಗ್ರಹಿಸುವ ಅದ್ಭುತ ಶಕ್ತಿ ಹೊಂದಿರುವುದರಿಂದ ಇವುಗಳಿಗೆ ವಿಶೇಷ ತರಬೇತಿ ನೀಡಿ, ಅಪರಾಧ ಸಂದರ್ಭದಲ್ಲಿ ಬಳಸಿಕೊಳ್ಳುತ್ತೇವೆ ಎಂದರು.ಪೊಲೀಸ್ ಆಯುಕ್ತರ ಕಚೇರಿಯ ನಗರ ಮೀಸಲು ಪಡೆಯಿಂದ ಬಂದ ಡಾಗ್ ಸ್ಕ್ವಾಡ್ ತಂಡದಲ್ಲಿ ಹವಾಲ್ದಾರರುಗಳಾದ ಸಂಜು ಅರಗಂಜಿ, ಲಕ್ಷ್ಮಣ್ ಕಟಬುಗೊಳ ಮತ್ತು ವೆಂಕಟೇಶ್ ಯಡಹಳ್ಳಿ ಹಾಗೂ ಆರಕ್ಷಕರಾದ ಸಂತೋಷ್ ಪಾಟೀಲ್ ಮತ್ತು ಮಂಜುನಾಥ್ ಹಂಚಿನಮನಿಇದ್ದರು. ಪ್ರದರ್ಶನದಲ್ಲಿ ಲುಸಿ ಮತ್ತು ರೋಸಿ ಎರಡು ಶ್ವಾನಗಳಿದ್ದವು.
ಈ ಸಂದರ್ಭದಲ್ಲಿ ಡಾಗ್ ಸ್ಕ್ವಾಡ್ ಅಪರಾಧಿಗಳನ್ನು ಹುಡುಕುವುದು, ನಿಷೇಧಿತ ವಸ್ತುಗಳನ್ನು ಪತ್ತೆಹಚ್ಚುವುದು, ಸ್ಫೋಟಕ ವಸ್ತುಗಳನ್ನು ಗುರುತಿಸುವುದು ಹಾಗೂ ಅಪರಾಧ ಸ್ಥಳದಲ್ಲಿ ಸಾಕ್ಷ್ಯಗಳನ್ನು ಪತ್ತೆಮಾಡುವುದು ಮುಂತಾದ ಕಾರ್ಯಗಳನ್ನು ಪ್ರಾತ್ಯಕ್ಷಿಕೆಯಾಗಿ ತೋರಿಸಿದರು.ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಉಪ ಪ್ರಾಚಾರ್ಯ ಪ್ರೊ. ಅರ್ಜುನ ಜಂಬಗಿ ಅವರು ಪ್ರಸ್ತುತ ಕಾಲದಲ್ಲಿ ಪೊಲೀಸ್ ಇಲಾಖೆಯು ಕಾರ್ಯಪದ್ಧತಿ, ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ. ಆದರೆ ಅಪರಾಧ ತನಿಖೆಯಲ್ಲಿ ಡಾಗ್ ಸ್ಕ್ವಾಡ್ ಮತ್ತು ಬಾಂಬ್ ಸ್ಕ್ವಾಡ್ ವಿಶೇಷವಾಗಿ ಕಾರ್ಯ ನಿರ್ವಹಿಸುತ್ತಿದೆ. ಸಮಾಜದಲ್ಲಿ ಶಾಂತಿ ಮತ್ತು ಸುರಕ್ಷತೆಯನ್ನು ಕಾಪಾಡಲು ಪೊಲೀಸ್ ಇಲಾಖೆ ನಿರಂತರವಾಗಿ ಶ್ರಮಿಸುತ್ತಿದ್ದು, ಡಾಗ್ ಸ್ಕ್ವಾಡ್ ತಂಡವು ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಹಾಗೂ ಸಾಕ್ಷ್ಯ ಸಂಗ್ರಹಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದರು.
ಅಪರಾಧ ಶಾಸ್ತ್ರ ಮತ್ತು ವಿಧಿ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಚಿದಾನಂದ ಹಾರೂಗೇರಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಡಾಗ್ ಸ್ಕ್ವಾಡ್ ಹಾಗೂ ಬಾಂಬ್ ಸ್ಕ್ವಾಡ್ ತಂಡದ ಈ ಭೇಟಿ ವಿದ್ಯಾರ್ಥಿಗಳಿಗೆ ಅಪರಾಧ ತನಿಖೆಯ ಪ್ರಾಯೋಗಿಕ ಅರಿವು ಮತ್ತು ಪ್ರೇರಣೆಯು ಸಿಗಲಿದೆ ಎಂದರು.ಉಪನ್ಯಾಸಕ ಯೋಗೇಶ್ ಕಾಂಬ್ಳೆ ವಂದಿಸಿದರು. ಉಪನ್ಯಾಸಕಿ ಸಹಾನಾ ನರಗುಂದ ನಿರೂಪಿಸಿದರು. ವಾಣಿಜ್ಯ ಶಾಸ್ತ್ರದ ಮುಖ್ಯಸ್ಥರಾದ ಡಾ. ಮುಕುಂದ ಮುಂಡರಗಿ, ವಿಭಾಗದ ವಿದ್ಯಾರ್ಥಿಗಳು ಹಾಗೂ ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 